ಮೇಷ
ನಿಮ್ಮ ಪರಿಶ್ರಮಕ್ಕೆ ತಕ್ಕಷ್ಟು ಪ್ರತಿಫಲ ಪಡೆಯಲಾರಿರಿ. ನಿರಾಶೆ. ಇತರರ ಮಾತಿಗೆ ಒಳಗಾಗಿ ಸಿಲುಕಿ ಸಮ್ಮತವಲ್ಲದ ಕೆಲಸ ಮಾಡದಿರಿ.
ವೃಷಭ
ನಿಮ್ಮ ಪಾಲಿಗಿಂದು ಸುಗಮ ದಿನ. ವ್ಯವಹಾರ ಸಲೀಸು. ಆಪ್ತ ಬಂಧುಗಳ ಜತೆ ಆತ್ಮೀಯ ಕಾಲಕ್ಷೇಪ. ಆರ್ಥಿಕ ವ್ಯಯ ಕಡಿಮೆ. ಕೌಟುಂಬಿಕ ನೆಮ್ಮದಿ.
ಮಿಥುನ
ಖರ್ಚು ಕಡಿಮೆ ಮಾಡಿ. ಖರೀದಿಯ ಉತ್ಸಾಹ ನಿಯಂತ್ರಿಸಿ. ಆತ್ಮೀಯರ ಜತೆಗಿನ ಮನಸ್ತಾಪ ಅಂತ್ಯ. ಮಾನಸಿಕ ನಿರಾಳತೆ.
ಕಟಕ
ಯಶಸ್ವಿ ದಿನ. ಆರ್ಥಿಕ ಪರಿಸ್ಥಿತಿ ಉತ್ತಮ. ಸಂಬಂಧದಲ್ಲಿ ಸೌಹಾರ್ದತೆ ಕಾಪಾಡಲು ಗಮನ ನೀಡಿ. ವಾಗ್ವಾದಕ್ಕೆ ಇಳಿಯದಿರಿ.
ಸಿಂಹ
ಕೌಟುಂಬಿಕ ವಿಚಾರದಲ್ಲಿ ಭಾವನಾತ್ಮಕ ಏರುಪೇರು. ಸಣ್ಣ ವಿಷಯ ಭಾವೋದ್ವೇಗ ಸೃಷ್ಟಿಸೀತು. ವಾಗ್ವಾದಕ್ಕೆ ಅವಕಾಶ ಕಲ್ಪಿಸದಿರಿ.
ಕನ್ಯಾ
ನಗುತ್ತಲೇ ಎಲ್ಲರ ಜತೆ ವ್ಯವಹರಿಸಿ. ಎಲ್ಲ ಕಾರ್ಯ ಸುಲಲಿತವಾಗಿ ನಡೆಯುವುದು ನಿಶ್ಚಿತ. ಆರ್ಥಿಕ ಬಿಕ್ಕಟ್ಟು ನಿವಾರಣೆ.
ತುಲಾ
ಸಣ್ಣ ವಿಷಯ ವಿರಸಕ್ಕೆ ಕಾರಣವಾಗದಂತೆ ಎಚ್ಚರವಿರಲಿ. ಎಲ್ಲರ ಜತೆ ಸೌಹಾರ್ದಯುತ ನಡವಳಿಕೆ ಅಗತ್ಯ. ಖರ್ಚು-ವೆಚ್ಚ ಅಧಿಕ.
ವೃಶ್ಚಿಕ
ಒಬ್ಬರ ಕುರಿತಾದ ತಪ್ಪಾಭಿಪ್ರಾಯ ನಿವಾರಣೆ ಆಗುವುದು. ಹಿರಿಯರ ಜತೆ ವಾಗ್ವಾದಕ್ಕೆ ಇಳಿಯದಿರಿ. ಬಂಧುಗಳ ಸಹಕಾರ.
ಧನು
ವೃತ್ತಿಯಲ್ಲಿ ಅಪೇಕ್ಷಿಸಿದ ಫಲ. ಕೌಟುಂಬಿಕ ಉದ್ವಿಗ್ನತೆ ಯಿಂದ ಮಾನಸಿಕ ಅಶಾಂತಿ. ಹಿರಿಯರಿಗೆ ಅನಾರೋಗ್ಯ ಚಿಂತೆ.
ಮಕರ
ವೃತ್ತಿಯಲ್ಲಿ ನಿಮಗೆ ಅನುಕೂಲಕರ ಸನ್ನಿವೇಶ. ಸಂಬಂಧದಲ್ಲಿ ಮೂಡಿದ್ದ ಅಪಸ್ವರ ನಿವಾರಣೆ. ಬಾಂಧವ್ಯದಲ್ಲಿ ಹೊಂದಾಣಿಕೆ ಒಳಿತು.
ಕುಂಭ
ಮುಗಿಸಲೇ ಬೇಕಾದ ಕೆಲಸವನ್ನು ಆದಷ್ಟು ಪೂರೈಸಿ. ಅದು ಮುಂದಕ್ಕೆ ಸಮಸ್ಯೆ ಸೃಷ್ಟಿಸೀತು. ಕುಟುಂಬದ ಸಹಕಾರ ಸಿಗುವುದು.
ಮೀನ
ನಿಮ್ಮ ಇಚ್ಛೆ ಈಡೇರುವ ದಿನ. ನೀವು ತೆಗೆದುಕೊಳ್ಳುವ ಪ್ರತಿಯೊಂದು ನಡೆ ಈ ನಿಟ್ಟಿನಲ್ಲಿ ಮುಖ್ಯ ಹೆಜ್ಜೆಯಾಗಲಿದೆ.