ದಿನಭವಿಷ್ಯ: ನಾನೇನು ಸಾಧನೆ ಮಾಡಿಲ್ಲ ಅನ್ನೋ ಭಾವನೆ ಬಿಟ್ಟುಬಿಡಿ, ನಿಮ್ಮ ಸಾಧನೆಯನ್ನು ಮೊದಲು ಗುರುತಿಸಿ

ಮೇಷ
ಹಣದ ವಿಷಯ ಇಂದು ಬದಿಗಿಡಿ. ಇನ್ನಿತರ ಮಹತ್ವದ ವಿಷಯಕ್ಕೆ ಹೆಚ್ಚು ಗಮನ ಕೊಡಿ.  ನಿಮಗೆಲ್ಲ ತಿಳಿದಿದೆ ಎಂಬ ಜಂಭ ಬಿಟ್ಟುಬಿಡಿ.

ವೃಷಭ
ಇಂದು ನಿಮಗೆ ಪೂರಕ ದಿನವಲ್ಲ. ಹಿನ್ನಡೆ, ಅಸಹನೆ, ಬೇಸರ ನಿಮ್ಮ ದಿನಚರಿಯಲ್ಲಿದೆ. ಸಂಗಾತಿ ಜತೆಗೆ ಹೆಚ್ಚಿನ ಸೌಹಾರ್ದ ಕಾಯ್ದುಕೊಳ್ಳಿ.

ಮಿಥುನ
ನೀವೇನೂ ಸಾಧಿಸುತ್ತಿಲ್ಲ ಎಂಬ ಭಾವನೆ ಬಿಟ್ಟುಬಿಡಿ. ನಿಮ್ಮ ಸಾಧನೆ ಗಮನಿಸುವ ಪ್ರಯತ್ನ ಮಾಡಿ. ಆಗ ಆಶಾವಾದ ಮೂಡುವುದು.

ಕಟಕ
ಸಂಕಷ್ಟ ಕಾಲ ಕಳೆಯಲಿದೆ. ನಿರಾಳತೆ ಮೂಡಲಿದೆ. ಉದ್ಯೋಗ ದಲ್ಲಿ ಪ್ರಗತಿ. ಕೌಟುಂಬಿಕ ಉದ್ವಿಗ್ನತೆ ಶಮನ. ಬಂಧು ಭೇಟಿ, ಸಹಕಾರ.

ಸಿಂಹ
ಅತಿಯಾದ ನಿರೀಕ್ಷೆ ನಿಮ್ಮ ಸಮಸ್ಯೆ. ಪ್ರಯತ್ನಕ್ಕೆ ತಕ್ಕಷ್ಟೆ -ಲ ಸಿಗುವುದು ಎಂಬುದು ಅರಿವಿರಲಿ. ಆಪ್ತರ ಜತೆ ವಾಗ್ವಾದ, ವಿರಸ ಉಂಟಾದೀತು.

ಕನ್ಯಾ
ಏಕಾಗ್ರಚಿತ್ತತೆ ಮೂಡದು. ಹಾಗಾಗಿ ಕಾರ್ಯದಲ್ಲಿ ತಪ್ಪು ಘಟಿಸಬಹುದು. ಮನಸನ್ನು ತಹಬಂದಿಗೆ ತರಲು ಮೊದಲು ಯತ್ನಿಸಿ.

ತುಲಾ
ನಿಮ್ಮ ಸಂತೋಷ, ದುಃಖ ಇತರರ ಜತೆ ಹಂಚಿಕೊಳ್ಳಿ. ನೀವೊಬ್ಬರೆ ಕೊರಗದಿರಿ. ಭಾವನೆ ಹಂಚಿಕೊಳ್ಳುವುದರಿಂದ ನಿರಾಳತೆ ಮೂಡುವುದು.

ವೃಶ್ಚಿಕ
ಕಾರ್ಯಕ್ಷೇತ್ರದಲ್ಲಿ ನಿಮಗೆ ಅನುಕೂಲ ಪರಿಸ್ಥಿತಿ ಸೃಷ್ಟಿಸಿಕೊಳ್ಳಿ. ಪ್ರತಿಕೂಲ ವಾತಾವರಣ ನಿವಾರಿಸಿ. ಇತರರ ಜತೆ ಬೆರೆತು ಕಾರ್ಯ ಮಾಡಿದರೆ ಹಿತ.

ಧನು
ಸಮಸ್ಯೆಯೊಂದು ಪರಿಹಾರ ಕಾಣುವ ಕಾಲ ಸನ್ನಿಹಿತವಾಗಿದೆ. ವಿರಸದ ಮನಸ್ಸು ಮಧುರವಾಗುವುದು.      ಸಂಬಂಧ ಪುನಶ್ಚೇತನ.

ಮಕರ
ಫಲಪ್ರದ ದಿನ. ಆತ್ಮವಿಶ್ವಾಸ ಹೆಚ್ಚಳ. ನಿಮ್ಮ ಕಾರ್ಯದಿಂದ ಉತ್ತಮ -ಲಪ್ರಾಪ್ತಿ. ಅನಿರೀಕ್ಷಿತ ಧನಲಾಭ. ಬಂಧುಗಳ ಸಹಕಾರ ಹೆಚ್ಚಳ.

ಕುಂಭ
ಖಾಸಗಿ ಮತ್ತು ವೃತ್ತಿ ಬದುಕಲ್ಲಿ ಯಶಸ್ಸು. ಉತ್ಸಾಹ ಅಽಕ. ಮಿತವ್ಯಯ ಸಾಧಿಸುವಿರಿ. ಮಕ್ಕಳು ಹರಿತ ವಸ್ತುಗಳ ಜತೆ ಎಚ್ಚರದಿಂದಿರಬೇಕು.

ಮೀನ
ನಿಮ್ಮ ಕಾರ್ಯಕ್ಕೆ ಇತರರ ಬೆಂಬಲ ಪಡೆಯುವಿರಿ. ಆರೋಗ್ಯ ಸಮಸ್ಯೆ ಬಾಧಿಸದು. ಹಣದ ಹೂಡಿಕೆಯಲ್ಲಿ ಲಾಭ ಪಡೆಯುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!