ದಿನಭವಿಷ್ಯ: ಮುಖ್ಯ ಕೆಲಸವನ್ನು ಬಾಕಿ ಉಳಿಸಬೇಡಿ, ಈಗಲೇ ಮಾಡಿ ಮುಗಿಸಿದರೆ ಫಲ ಅತ್ಯುತ್ತಮ

ಮೇಷ
ವ್ಯವಹಾರದಲ್ಲಿ ಉನ್ನತಿ. ಕೆಲವು ಕೆಲಸ ಸಾಧ್ಯವಾಗಲು ಸಮಯ ಬೇಕಾದೀತು. ದುಡುಕದಿರಿ.ತಾಳ್ಮೆ ವಹಿಸುವುದು ಅವಶ್ಯ.

ವೃಷಭ
ನಿಮ್ಮ ಶ್ರಮದಿಂದ ವೃತ್ತಿ ಮತ್ತು ಖಾಸಗಿ ಬದುಕಲ್ಲಿ ಯಶ.ಸಂಬಂಧದಲ್ಲಿ ಪ್ರಾಮಾಣಿಕತೆ ಇರಲಿ.  ಮುಚ್ಚುಮರೆ ಬೇಡ.

ಮಿಥುನ
ಕೌಟುಂಬಿಕ ಮನಸ್ತಾಪವಿದ್ದರೆ,  ಇಂದೇ ಸಾಮರಸ್ಯ ಸಾಽಸಿ. ನಡೆನುಡಿ ಬದಲಿಸಿ. ನಿಮ್ಮ ಜತೆ ಹೊಂದಿಕೊಳ್ಳದ ವ್ಯಕ್ತಿಗಳ ಚಿಂತೆ ಬಿಟ್ಟುಬಿಡಿ.

ಕಟಕ
ಕಾರ್ಯವೊಂದು ಸಾಽಸಲು ಬಹಳ ಶ್ರಮ ಪಡುವಿರಿ. ಆದರೂ ನಿರೀಕ್ಷಿತ -ಲ ದೊರಕದು. ನಿರಾಶೆ ಬೇಡ, ಒಳ್ಳೆ ಕಾಲ ಬರಲಿದೆ, ಕಾಯುತಿರಿ.

ಸಿಂಹ
ಮುಖ್ಯ ಕೆಲಸ ಬಾಕಿ ಉಳಿಸಬೇಡಿ. ಬೇಗ ಮಾಡಿ ಮುಗಿಸಿ. ವಿದ್ಯಾರ್ಥಿಗಳು ಅಧ್ಯಯನಕ್ಕೆ ಆದ್ಯತೆ ನೀಡಬೇಕು. ದೈಹಿಕ ನೋವಿದ್ದವರಿಗೆ ನಿರಾಳತೆ.

ಕನ್ಯಾ
ನಿಮ್ಮ ಪರಿಸ್ಥಿತಿಯ ಕುರಿತು ಹತಾಶೆ ಬೇಡ. ಆಶಾವಾದ ಇರಲಿ. ಕಷ್ಟ ಕಳೆದು ಶೀಘ್ರವೇ ನೆಮ್ಮದಿ ಸಿಗಲಿದೆ. ಇಷ್ಟದೇವರ ಪ್ರಾರ್ಥನೆ ಮಾಡಿರಿ.

ತುಲಾ
ನೀವು ಇಂದು ತಾಳುವ ಮಹತ್ವದ ನಿರ್ಧಾರ ಸಂಬಂಧವನ್ನು ಗಟ್ಟಿಗೊಳಿಸಲಿದೆ. ಎಲ್ಲೆಡೆಯಿಂದ ಸಹಕಾರ, ಅಭಿನಂದನೆ ಲಭ್ಯ.

ವೃಶ್ಚಿಕ
ನಿರಾಳ ಮನಸ್ಸು. ಆಪ್ತರ ಜತೆ ಮಧುರ ಬಾಂಧವ್ಯ. ಹಣದ ವಿಚಾರದಲ್ಲಿ  ತೃಪ್ತಿಕರ ಬೆಳವಣಿಗೆ. ಆರೋಗ್ಯ ಸಮಸ್ಯೆ ಪರಿಹಾರ.

ಧನು
ವಿವೇಚನೆಯಿಂದ ವರ್ತಿಸದಿದ್ದಲ್ಲಿ ನಿಮ್ಮ ವೃತ್ತಿ ಬದುಕಿನಲ್ಲಿ ದೊಡ್ಡ ಹಿನ್ನಡೆ ಅನುಭವಿಸುವಿರಿ. ಆರೋಗ್ಯದತ್ತಲೂ ಹೆಚ್ಚು ಗಮನ ಕೊಡಿ.

ಮಕರ
ಅಭದ್ರತೆಯ ಭಾವನೆ ಕಾಡಬಹುದು. ಕೆಲವು ವಿಷಯವನ್ನು ಅತಿಯಾಗಿ ಹಚ್ಚಿಕೊಳ್ಳದಿರಿ. ನಿರಾಳವಾಗಿರಿ. ಕಣ್ಣಿನ ಕಿರಿಕಿರಿ ಬಾಽಸೀತು.

ಕುಂಭ
ಸಮಸ್ಯೆಯೊಂದು ಪರಿಹಾರ ಕಂಡ ನಿರಾಳತೆ.  ಕಪಟಿಯೊಬ್ಬರ ಬಣ್ಣ ಬಯಲಾಗುವುದು. ಅವರಿಂದ ದೂರವಿರಿ. ಆರ್ಥಿಕ ಒತ್ತಡ ಹೆಚ್ಚು.

ಮೀನ
ಸಮಸ್ಯೆಯೊಂದಕ್ಕೆ ಪರಿಹಾರ ಸಿಗದ ಹತಾಶೆ. ಸೂಕ್ತ ನೆರವೂ ಸಿಗದ ಬೇಸರ. ಚಿಂತಿಸದಿರಿ,  ಪರಿಹಾರ ತೀರಾ ಸನಿಹದಲ್ಲಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!