ಮೇಷ.
ಹಣ, ವೃತ್ತಿಗೆ ಅತಿಯಾದ ಆದ್ಯತೆ ನೀಡಿ ಇನ್ನಿತರ ವಿಷಯ ಕಡೆಗಣಿಸದಿರಿ. ಪ್ರೀತಿ ಮತ್ತು ಕುಟುಂಬಕ್ಕೂ ಗಮನ ಕೊಡಿ.
ವೃಷಭ
ಉದಾಸೀನತೆ ಕಾಡಬಹುದು. ಕೆಲಸದಲ್ಲಿ ನಿರಾಸಕ್ತಿ. ಹೊಸ ವ್ಯವಹಾರದಲ್ಲಿ ಹಣ ಹೂಡಿದರೆ ಲಾಭ. ಕೌಟುಂಬಿಕ ಸಮಾಧಾನ.
ಮಿಥುನ
ಯಾವುದೇ ಪ್ರತಿಕೂಲ ಸನ್ನಿವೇಶ ಒದಗಿದರೂ ಸ್ಥಿಮಿತ ಕಳಕೊಳ್ಳದಿರಿ. ಸಮಾಧಾನ ದಿಂದ ಪರಿಸ್ಥಿತಿ ನಿಭಾಯಿಸಿ. ಆತ್ಮೀಯರ ನೆರವು.
ಕಟಕ
ಕಾರ್ಯ ಸಾಧನೆಗೆ ಹೆಚ್ಚುವರಿ ಶ್ರಮ ಬೇಕು. ವೃತ್ತಿಯಲ್ಲಿ ಇತರರ ಅಸಮಾಧಾನ ಎದುರಿಸುವಿರಿ. ಹೊಂದಾಣಿಕೆ ಮುಖ್ಯ.
ಸಿಂಹ
ನಿಮ್ಮ ವರ್ತನೆ ತಿದ್ದಿಕೊಳ್ಳಿ, ಎಲ್ಲರೂ ಮೆಚ್ಚುವ ವ್ಯಕ್ತಿ ನೀವಾಗುವಿರಿ. ಸುಮ್ಮನೇ ಇತರರ ವಿರೋಧ ಕಟ್ಟಿಕೊಳ್ಳಬೇಡಿ.
ಕನ್ಯಾ
ಭವಿಷ್ಯದ ಕುರಿತು ಸರಿಯಾದ ಯೋಜನೆ ಹಾಕಿಕೊಳ್ಳಿ. ಇಲ್ಲವಾದರೂ ಸಮಸ್ಯೆ ಒದಗೀತು. ಅಲರ್ಜಿಯಂತಹ ಆರೋಗ್ಯ ಸಮಸ್ಯೆ.
ತುಲಾ
ಎಲ್ಲ ಸಮಸ್ಯೆ, ಒತ್ತಡ ಮರೆತು ಸಂತೋಷ ಹುಡುಕುವ ಸಮಯವಿದು. ಆತ್ಮೀಯರ ಸಂಗದಲ್ಲಿ ಕಾಲ ಕಳೆಯಿರಿ. ನಿಮ್ಮ ಹವಾಸ್ಯಕ್ಕೆ ಪ್ರೋತ್ಸಾಹ ಕೊಡಿರಿ.
ವೃಶ್ಚಿಕ
ಏಕತಾನತೆಯ ಕೆಲಸ ಬಿಟ್ಟು ನಿಮ್ಮ ಗುರಿ ಸಾಧನೆಗೆ ಭಿನ್ನ ದಾರಿ ಹಿಡಿಯಿರಿ. ರಿಸ್ಕ್‌ಗೆ ಅಂಜುವುದು ಬೇಡ. ಅನವಶ್ಯ ವಸ್ತು ಖರೀದಿಗೆ ಹಣ ವ್ಯಯಿಸುವುದು ನಿಲ್ಲಿಸಿ .
ಧನು
ಕೆರಿಯರ್‌ಗೆ ಸಂಬಂಧಿಸಿ ಶುಭ ಸುದ್ಧಿ. ಆರೋಗ್ಯ ಸ್ಥಿತಿ ಕಾಪಾಡಲು ಗಮನ ಕೊಡಿ. ಕೌಟುಂಬಿಕ ವಿಷಯದಲ್ಲಿ ನಿಮ್ಮ ನಿಲುವು ದೃಢವಾಗಿರಲಿ.
ಮಕರ
ಆಪ್ತರಿಂದ ಹಿತವಚನ ಬಂದರೆ ಅದನ್ನು ಪಾಲಿಸಿ. ನಿಮ್ಮ ಒಳಿತಿಗೇ ಎಂದು ತಿಳಿಯಿರಿ. ಆರೋಗ್ಯದತ್ತ ಹೆಚ್ಚು ಗಮನ ಕೊಡಿ. ವೆಚ್ಚ ಅಧಿಕವಾದೀತು.
ಕುಂಭ
ಮುಖ್ಯ ವಿಷಯದಲ್ಲಿ ನಿಮ್ಮ ಪ್ರಯತ್ನ ನಿಷಲ ಎಂಬ ಭಾವನೆ ಬಿಡಿ. ಅದುವೇ ಇಂದು -ಲ ನೀಡಲಿದೆ. ನಿರಾಳತೆ ಉಂಟು ಮಾಡಲಿದೆ.
ಮೀನ
ವೃತ್ತಿಯಲ್ಲಿ ಎಲ್ಲರ ಮೆಚ್ಚುಗೆ ಗಳಿಸುವ ರೀತಿ ಕಾರ್ಯ ನಿರ್ವಹಣೆ. ಮಾನಸಿಕ ಒತ್ತಡ ಸೃಷ್ಟಿಸುವ ವಿಷಯವನ್ನು ಯೋಚಿಸಲೇ ಬೇಡಿ.