ಮೇಷ
ಭವಿಷ್ಯದ ಕುರಿತಂತೆ ಅನಿಶ್ಚಿತತೆ. ಮನಸ್ಸಿಗೆ ವ್ಯಾಕುಲ. ನಿಜವಾಗಿ ಆತಂಕ ಅನವಶ್ಯ. ನಿಮಗೆ ಅನುಕೂಲ ಪರಿಸ್ಥಿತಿ ಶೀಘ್ರ ಬರಲಿದೆ.
ವೃಷಭ
ಕಾರ್ಯದಲ್ಲಿ ಅನವಶ್ಯ ವಿಳಂಬ ಸಲ್ಲದು. ಜಡತ್ವ ಬಿಡಿ. ಮಕ್ಕಳು ಹೆಮ್ಮೆ ತರುವ ಕಾರ್ಯ ಎಸಗುವರು. ಉದ್ಯಮದಲ್ಲಿ ಯಶ.
ಮಿಥುನ
ಸಹೋದ್ಯೋಗಿಗಳ ಜತೆ ಹೊಂದಾಣಿಕೆ ಇರಲಿ. ನಿಮ್ಮ ದಾರಿಯೇ ಸರಿ ಎಂಬ ಕಠಿಣ ಧೋರಣೆ ತರವಲ್ಲ. ವಿದ್ಯಾರ್ಥಿಗಳಿಗೆ ತೃಪ್ತಿಕರ ಬೆಳವಣಿಗೆ.
ಕಟಕ
ಕಾರ್ಯದಲ್ಲಿ ಯಶಸ್ಸು. ಕೌಟುಂಬಿಕ ತೊಡಕಿನಲ್ಲಿ ಸಿಲುಕಿದ್ದರೆ ಇಂದು ನಿರಾಳತೆ ಸಿಗಲಿದೆ. ಮಕ್ಕಳಿಗೆ ಪರೀಕ್ಷೆಯಲ್ಲಿ ಯಶಸ್ಸು.
ಸಿಂಹ
ಆಸ್ಪತ್ರೆ ಭೇಟಿ, ಇನ್ನಿತರ ಕಾರಣದಿಂದ ಖರ್ಚು ಹೆಚ್ಚಾಗಬಹುದು. ಕೌಟುಂಬಿಕ ಬಿಕ್ಕಟ್ಟು ಪರಿಹಾರ. ಶೈಕ್ಷಣಿಕ ಕ್ಷೇತ್ರದಲ್ಲಿ ಸಫಲತೆ.
ಕನ್ಯಾ
ನಿಮ್ಮನ್ನು ವಿರೋಧಿಸಿದವರು ನಿಮಗೆ ಬೆನ್ನು ಬಾಗುವರು. ಕಠಿಣ ಕಾರ್ಯದಲ್ಲಿ ಸಫಲತೆ. ಮಾನಸಿಕ ಒತ್ತಡ ನಿವಾರಣೆ. ಧನಪ್ರಾಪ್ತಿ.
ತುಲಾ
ನಿಮ್ಮ ವಿಶ್ವಾಸ ವೃದ್ಧಿಸುವ ಬೆಳವಣಿಗೆ ಸಂಭವ. ಸಮಸ್ಯೆಯೊಂದು ಪರಿಹಾರ ಕಾಣುವುದು. ಸಾಂಸಾರಿಕ ಬಿಕ್ಕಟ್ಟು ನಿವಾರಣೆ.
ವೃಶ್ಚಿಕ
ಆತ್ಮೀಯರೊಂದಿಗೆ ಹೊಣೆಯರಿತು ವರ್ತಿಸಿ. ನಿಮ್ಮ ನಡೆನುಡಿ ತಪ್ಪರ್ಥ ಕಲ್ಪಿಸದಂತೆ ನೋಡಿ. ಅಧಿಕ ಖರ್ಚಿನ ಹೊರೆ ಬೀಳಲಿದೆ.
ಧನು
ವಾದವಿವಾದದಿಂದ ದೂರವಿರಿ. ವ್ಯವಹಾರದಲ್ಲಿ ಒತ್ತಡ ಬಂದರೂ ಸಂಜೆ ವೇಳೆಗೆ ಸಂತೃಪ್ತಿ. ಮಾನಸಿಕ ಕ್ಲೇಶ ನಿವಾರಣೆ. ಬಂಧುಗಳಿಂದ ಸಹಕಾರ.
ಮಕರ
ನಡೆನುಡಿಯಲ್ಲಿ ಎಚ್ಚರ ವಹಿಸಬೇಕು. ಇತರರು ನಿಮ್ಮ ಹಸ್ತಕ್ಷೇಪ ಬಯಸಲಾರರು. ನಿಮ್ಮ ವ್ಯವಹಾರವಷ್ಟೆ ನೋಡಿ.ಬಂಧುಗಳ ಕಿರಿಕಿರಿ.
ಕುಂಭ
ಕುಟುಂಬ ಸದಸ್ಯರ ಜತೆ ತಪ್ಪಭಿಪ್ರಾಯ ಉಂಟಾಗದಂತೆ ನೋಡಿ ಕೊಳ್ಳಿ. ಧನವ್ಯಯ ಹೆಚ್ಚು. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಸಡಿಲತೆ.
ಮೀನ
ಕೆಲಸದಲ್ಲಿ ತೋರುವ ಪ್ರಸಂಗವಧಾನತೆ ಯಶಸ್ಸು ತರುವುದು. ಕೆಲವರ ಟೀಕೆಗೆ ಕಿವಿಗೊಡಬೇಡಿ. ಕೌಟುಂಬಿಕ ಸೌಹಾರ್ದತೆ ಕಾಪಾಡಲು ಆದ್ಯತೆ ಕೊಡಿ.