ಮೇಷ
ದೀರ್ಘಕಾಲದ ಆಶೆ ಈಡೇರಿಕೆ. ತೀರಾ ಖಾಸಗಿ ವಿಚಾರ ಇತರರ ಜತೆ ಹಂಚಿಕೊಳ್ಳದಿರಿ. ಮುಂದಕ್ಕೆ ಸಮಸ್ಯೆಯಾದೀತು. ಎಣ್ಣೆ ತಿಂಡಿಯಿಂದ ದೂರವಿರಿ.
ವೃಷಭ
ಹಲವಾರು ಕಾರ್ಯ ಇಂದೇ ಮುಗಿಸಬೇಕಾದ ಒತ್ತಡ. ಆರ್ಥಿಕ ಪರಿಸ್ಥಿತಿ ತೃಪ್ತಿ ತರದು. ನಿಮ್ಮನ್ನು ಮೆಚ್ಚುವ ವ್ಯಕ್ತಿಯ ಭೇಟಿ, ಸಂಬಂಧ ಬೆಳೆದೀತು.
ಮಿಥುನ
ಬಿಡುವಿಲ್ಲದ ದಿನ. ಎಲ್ಲರು ನಿಮ್ಮ ಸಮಸ್ಯೆ ಅರ್ಥ ಮಾಡಿಕೊಂಡರೂ ಅವರ ನೆರವು ಅಲಭ್ಯ. ಆಹಾರ ಸೇವನೆ ಆರೋಗ್ಯಕರವಾಗಿರಲಿ.
ಕಟಕ
ತುಂಬಾ ಸಮಯ ತೆಗೆದುಕೊಂಡ ಯೋಜನೆ ಪೂರ್ಣಗೊಳ್ಳಲಿದೆ. ಪುರಸ್ಕಾರ, ಶ್ಲಾಘನೆ ನಿಮಗೆ ಕಾದಿದೆ. ಪ್ರೀತಿಪಾತ್ರರ ವರ್ತನೆಯಿಂದ ಬೇಸರ.
ಸಿಂಹ
ನಿಮ್ಮ ಪತನ ಬಯಸುವ ವ್ಯಕ್ತಿಗಳಿಂದ ದೂರವಿರಿ. ಆರ್ಥಿಕ ಸಮಸ್ಯೆ ನಿವಾರಣೆ. ವೃತ್ತಿ ಕ್ಷೇತ್ರದಲ್ಲಿ ಭಾವುಕ ಸನ್ನಿವೇಶ ಎದುರಿಸುವಿರಿ.
ಕನ್ಯಾ
ನಿಮಗೆ ಪೂರಕ ದಿನ. ಕಾರ್ಯ ಪೂರ್ಣ. ಮೆಚ್ಚುಗೆ ಲಭ್ಯ. ಮನೆಯಲ್ಲಿ ಹರ್ಷದ ವಾತಾವರಣ. ಬಂಧುಗಳ ಜತೆ ಕಾಲಕ್ಷೇಪ.
ತುಲಾ
ನಿಮ್ಮ ಭಾವನೆ ಮುಕ್ತವಾಗಿ ವ್ಯಕ್ತಪಡಿಸಿ. ಆಗ ಮಾತ್ರವೇ ಸಂಬಂಧ ವೃದ್ಧಿ. ಯಾವುದನ್ನೂ ಮುಚ್ಚಿಟ್ಟು ಕೂರದಿರಿ. ವಾದದಿಂದ ದೂರವಿರಿ.
ವೃಶ್ಚಿಕ
ಮನೆಯಲ್ಲಿ ಆತ್ಮೀಯ ಸಂಬಂಧ ಇಟ್ಟುಕೊಳ್ಳಲು ಆದ್ಯತೆ ಕೊಡಿ. ರೇಗುವಿಕೆ, ಕೋಪ ಕಡಿಮೆ ಮಾಡಿ. ಹೊರಗಿನ ಟೀಕೆ ಮನಸ್ಸು ಕೆಡಿಸೀತು.
ಧನು
ವೃತ್ತಿಯಲ್ಲಿ ನಿಮ್ಮ ಎಲ್ಲಾ ಶ್ರಮ ಹಾಕಿ ಕಾರ್ಯವೆಸಗಿ. ಶಾಪಿಂಗ್ ಹೊರಟರೆ ಅಧಿಕ ಖರ್ಚು ಖಂಡಿತ. ಕೌಟುಂಬಿಕ ಭಿನ್ನಮತ ನಿವಾರಿಸಿಕೊಳ್ಳಿ.
ಮಕರ
ವೃತ್ತಿಯಲ್ಲಿ ಮಹತ್ವದ ನಿರ್ಧಾರ ಇಂದು ತಾಳದಿರಿ. ಸ್ವಲ್ಪ ಕಾಲ ಕಾಯಿರಿ. ಏಕಾಂಗಿಗಳಿಗೆ ವಿವಾಹ ಭಾಗ್ಯ ಒದಗೀತು. ಆರ್ಥಿಕ ಉನ್ನತಿ.
ಕುಂಭ
ನಿಮ್ಮ ಪ್ರಗತಿಗೆ ಅಡ್ಡಿಯಾದ ಸಂಬಂಧ ಪೂರ್ಣ ಕಡಿದು ಹಾಕಲು ಸಕಾಲ. ಹಿತೈಷಿಗಳ ಬೆಂಬಲ ಪಡೆಯಿರಿ. ದುಬಾರಿ ವಸ್ತು ಖರೀದಿ.
ಮೀನ
ನಿಮ್ಮ ನಾಯಕತ್ವ ಗುಣದಿಂದ ಎಲ್ಲರ ಮೆಚ್ಚುಗೆ ಪಡೆಯುವಿರಿ. ಹವಾಮಾನ ಬದಲಾವಣೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರೀತು.