ಮೇಷ
ಸಂಗಾತಿ ಜತೆ ಪ್ರಾಮಾಣಿಕತೆಯಿಂದ ವರ್ತಿಸಿ. ಆಗ ಮನೆಯ ಶಾಂತಿ ಕದಡದು. ಆರೋಗ್ಯ ಸಮಸ್ಯೆ, ಚಿಕಿತ್ಸೆ ಪಡೆಯಿರಿ.
ವೃಷಭ
ಪ್ರತಿಕೂಲ ಸನ್ನಿವೇಶವನ್ನು ತಾಳ್ಮೆ ಮತ್ತು ವಿವೇಕದಿಂದ ನಿಭಾಯಿಸಿ. ಮನೆಯಲ್ಲಿನ ಸೌಹಾರ್ದತೆ ಕಾಪಾಡಲು ಆದ್ಯತೆ ಕೊಡಿ.
ಮಿಥುನ
ದೊಡ್ಡ ಯೋಜನೆ ಯೊಂದನ್ನು ಕಾರ್ಯಗತ ಮಾಡುವ ಯೋಜನೆ ನಿಮ್ಮದು. ಆರಂಭದಲ್ಲಿ ಕಷ್ಟ ಪಟ್ಟರೂ ಅದರ ಫಲ ಉತ್ತಮವಾಗಲಿದೆ.
ಕಟಕ
ಅನವಶ್ಯ ಚಿಂತೆ ನಿಮ್ಮ ನೆಮ್ಮದಿ ಹಾಳು ಮಾಡದಿರಲಿ. ನೆಗೆಟಿವ್ ಚಿಂತನೆ ಬಿಡಿ. ಯಶಸ್ಸಿನ ಹಾದಿ ನಿಮ್ಮ ಮುಂದಿದೆ. ಆರ್ಥಿಕ ಉನ್ನತಿ.
ಸಿಂಹ
ಹೆಚ್ಚುತ್ತಿರುವ ಖರ್ಚು ಚಿಂತೆಗೆ ಕಾರಣವಾಗುತ್ತದೆ. ಉಪಯುಕ್ತ ಕಾರಣಕ್ಕೇ ಹಣ ವ್ಯಯಿಸಿದ ಸಮಾಧಾನ ಮಾಡಿಕೊಳ್ಳಿ. ಕೌಟುಂಬಿಕ ಸಹಕಾರ.
ಕನ್ಯಾ
ವಿವಾಹಿತರಿಗೆ ಅಪೇಕ್ಷೆ ಈಡೇರಿಕೆ. ಬಂಧು ನೆರವು. ವೃತ್ತಿಯಲ್ಲಿ ಗೌರವಾದರ ಗಳಿಸುವಿರಿ. ಹೂಡಿಕೆಯಿಂದ ಲಾಭ. ಪ್ರೀತಿಯಲ್ಲಿ ಯಶಸ್ಸು.
ತುಲಾ
ಪುಟ್ಟ ಸಮಸ್ಯೆಗಳು ನಿಮ್ಮ ಸಂತೋಷವನ್ನು ಹಾಳು ಮಾಡುವವು. ವೃಥಾ ತಲೆಕೆಡಿಸಿಕೊಳ್ಳದಿರಿ. ಸಮಸ್ಯೆಗೆ ಪರಿಹಾರ ಖಂಡಿತಾ ಸಾಧ್ಯವಿದೆ.
ವೃಶ್ಚಿಕ
ಉತ್ಸಾಹದ ದಿನ. ಸಂತಾನಭಾಗ್ಯ ಅಪೇಕ್ಷಿಸುವ ದಂಪತಿಗೆ ಶುಭ ಬೆಳವಣಿಗೆ. ವಿದ್ಯಾರ್ಥಿಗಳಿಗೆ ಯಶಸ್ಸು. ಆರ್ಥಿಕ ಅಭಿವೃದ್ಧಿ.
ಧನು
ತಲೆನೋವು ಅಥವಾ ಅಜೀರ್ಣದ ಸಮಸ್ಯೆ ಕಾಣುವಿರಿ. ಕುಟುಂಬ ಸದಸ್ಯರ ಭಾವನೆ ಅರ್ಥೈಸಿ ಅದಕ್ಕೆ ಸ್ಪಂದಿಸಿ. ಅದರಿಂದ ಕೌಟುಂಬಿಕ ಸಾಮರಸ್ಯ.
ಮಕರ
ಪ್ರತಿಯೊಂದು ಕೆಲಸ ಇಂದು ಸ-ಲತೆ ಕಾಣಲಿದೆ. ಉದ್ಯಮಿಗಳಿಗೆ ಧನಲಾಭ. ಕೌಟುಂಬಿಕ ಸಮಸ್ಯೆ ಪರಿಹಾರ ಕಾಣಲಿದೆ.
ಕುಂಭ
ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹೊಟ್ಟೆ ಅಥವಾ ಚರ್ಮದ ಸಮಸ್ಯೆ ಉಂಟಾದೀತು. ವ್ಯವಹಾರದಲ್ಲಿ ಸುಲಭ ಫಲ ದೊರೆಯದು.
ಮೀನ
ಹೆಚ್ಚು ಹೊಣೆಗಾರಿಕೆ ಅದನ್ನು ನಿಭಾಯಿಸಲು ಕಷ್ಟವಾದೀತು. ದಿನದಂತ್ಯಕ್ಕೆ ಸುಸ್ತು. ಸಾಂಸಾರಿಕ ಸಮಸ್ಯೆಯಿಂದ ಮನಶ್ಯಾಂತಿ ಹಾಳು.