ದಿನಭವಿಷ್ಯ: ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ, ಇಂದು ಖುಷಿಯ ದಿನ!

ಮೇಷ
ಅದೃಷ್ಟವನ್ನೆ ನಂಬಿ ಕೂರಬೇಡಿ. ನಿಮ್ಮ ಪ್ರಯತ್ನಕ್ಕೆ ಆದ್ಯತೆ ಕೊಡಿ. ಆರೋಗ್ಯ ಸುಸ್ಥಿರ, ಚಿಂತೆ ಅನವಶ್ಯ. ಕೌಟುಂಬಿಕ ಮನಸ್ತಾಪ ನಿವಾರಣೆ.

ವೃಷಭ
ಹಿರಿಯರ ಜತೆ ವ್ಯವಹಾರದಲ್ಲಿ ವಿವೇಕ ಪ್ರದರ್ಶಿಸಿ.  ಸಂಗಾತಿಯ ಭಾವನೆಗೆ ಗಮನ ಕೊಡಿ. ಅನವಶ್ಯ ಖರ್ಚು ಜೇಬಿಗೆ ತೂತು ಕೊರೆದೀತು.

ಮಿಥುನ
ಕುಟುಂಬಸ್ಥರ ದೈನಂದಿನ ಸಮಸ್ಯೆ ಪರಿಹಾರಕ್ಕೆ ಆಸ್ಥೆ ವಹಿಸಿ. ಉದಾಸೀನತೆ ಸರಿಯಲ್ಲ.  ಸಣ್ಣಪುಟ್ಟ ಜಗಳಕ್ಕೆ ಹೋಗದಿರಿ.

ಕಟಕ
ಆಹಾರದಲ್ಲಿ ಸಮತೋಲನ ಸಾಧಿಸಿ. ಆರೋಗ್ಯ ಕಾಯಲು ಅದು ಮುಖ್ಯ.  ವೃತ್ತಿಯಲ್ಲಿ ನಿಮ್ಮ ಶ್ರಮಕ್ಕೆ ಸೂಕ್ತ ಪ್ರತಿಫಲ ದೊರಕುವುದು.

ಸಿಂಹ
ದಂಪತಿ ಮಧ್ಯೆ ವಿರಸ ತಲೆದೋರೀತು. ಆದರೆ ಬೇಗನೆ ಅದು ಶಮನವಾಗುವುದರಿಂದ ಚಿಂತೆ ಅನವಶ್ಯ.  ಖರ್ಚು ನಿಯಂತ್ರಿಸಬೇಕು.

ಕನ್ಯಾ
ನಿಮ್ಮ ಮೇಲೆ ನೀವೇ ಹೆಚ್ಚು ಒತ್ತಡ ಹೇರಿಕೊಳ್ಳಬೇಡಿ. ಅನ್ಯರ ಜತೆ ವಿನಯದಿಂದ ವರ್ತಿಸಿ. ಸಮಸ್ಯೆ ಬಗ್ಗೆ ಅತಿಯಾದ ಚಿಂತೆ ಬಿಡಿ.

ತುಲಾ
ವ್ಯವಹಾರ ನಿಮಗೆ ತೃಪ್ತಿಕರವಾಗಿ ನಡೆಯಲಿದೆ. ಅಧಿಕ ಹೊಣೆಗಾರಿಕೆ, ಆದರೆ ಒತ್ತಡಕ್ಕೆ ಒಳಗಾಗಬೇಡಿ. ಕೋಪ ನಿಯಂತ್ರಣ ಅವಶ್ಯ.

ವೃಶ್ಚಿಕ
ವ್ಯವಹಾರ ನೀವು ಬಯಸಿದ ರೀತಿ ಸಾಗದಿದ್ದರೆ ಅಸಹನೆ ಬೇಡ. ಶಾಂತ ಮನಸ್ಥಿತಿ ಅವಶ್ಯ. ಪರಾಮರ್ಶೆಗೆ ಒಡ್ಡಿಕೊಳ್ಳಿ.

ಧನು
ದೈಹಿಕ ಆರೋಗ್ಯದಷ್ಟೆ ಮಾನಸಿಕ ಆರೋಗ್ಯವೂ ಮುಖ್ಯ. ಅತಿ ಭಾವುಕತೆ ನಿಮ್ಮ ನಿರ್ಧಾರದ ಮೇಲೆ ಪರಿಣಾಮ ಬೀರಬಹುದು. ಖುಷಿ ದಿನ.

ಮಕರ
ನಿಮಗೆದುರಾಗುವ ಸಮಸ್ಯೆಯಿಂದ ಧೃತಿ ಕೆಡಬೇಡಿ. ಹದಗೆಟ್ಟ ಸಂಬಂಧ ಸಂಜೆ ವೇಳೆಗೆ ಸರಿಯಾಗಲಿದೆ. ಖರ್ಚು ಕಡಿಮೆಗೊಳಿಸಿರಿ.

ಕುಂಭ
ನಿಮ್ಮೊಳಗೆ ಏನೋ ಬದಲಾವಣೆ ಉಂಟಾದೀತು. ಆತ್ಮವಿಶ್ವಾಸ ಹೆಚ್ಚಲಿದೆ. ಧಾರ್ಮಿಕ ಭಾವದಿಂದ ಮನಸ್ಸಿಗೆ ನೆಮ್ಮದಿ.

ಮೀನ
ಕುಟುಂಬ ಸದಸ್ಯರ ಜತೆ ಹೆಚ್ಚು ಬೆರೆಯಿರಿ. ಅವರ ಬೇಕುಬೇಡ ಆಲಿಸಿರಿ. ಬದುಕಿನ ಬಗ್ಗೆ ಆಶಾವಾದ ಇರಲಿ. ಚಿಂತೆ ತೊರೆಯಿರಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!