ಮೇಷ.
ನಿಮ್ಮಿಂದ ಇತರರು ಪ್ರಭಾವಿತರಾಗುವರು. ಆದರೆ ನಿಮ್ಮ ನಡೆ ಸರಿಯಾಗಿದೆಯೆ ಯೋಚಿಸಿ. ಖಾಸಗಿ ಸಮಸ್ಯೆ ಮೊದಲು ಪರಿಹರಿಸಿಕೊಳ್ಳಿ.
ವೃಷಭ
ಇಂದು ಮಹತ್ವದ ಬೆಳವಣಿಗೆ ಉಂಟಾದೀತು. ಆರ್ಥಿಕ ಸ್ಥಿತಿ, ಕೆರಿಯರ್, ಖಾಸಗಿ ಬದುಕು ಬದಲಾವಣೆ ಕಂಡೀತು. ದೃಢ ನಿಲುವು ಅವಶ್ಯ.
ಮಿಥುನ
ಯಾವುದೇ ಪ್ರಸಂಗ ಉದ್ಭವಿಸಿದರೂ ಅದನ್ನು ನಿಮ್ಮ ಉಪಯೋಗಕ್ಕೆ ಬಳಸಿಕೊಳ್ಳಿ. ಚಿಂತಿಸುತ್ತಾ ಕೂರದಿರಿ. ಪ್ರಯತ್ನವಿಲ್ಲದೆ -ಲವಿಲ್ಲ ಎಂದರಿಯಿರಿ.
ಕಟಕ
ಇತರರ ಮೇಲೆ ಮೇಲುಗೈ ಸಾಧಿಸುವದನ್ನು ನೀವು ಬಯಸುವಿರಿ. ಆದರೆ ಇಂದು ಅದಕ್ಕೆ ತದ್ವಿರುದ್ಧ. ನೀವೇ ಇತರರ ಮೇಲುಗೈ ಒಪ್ಪುವಿರಿ.
ಸಿಂಹ
ವೃತ್ತಿಯಲ್ಲಿ ತೀವ್ರ ಪ್ರತಿಸ್ಪರ್ಧೆ. ನಿರೀಕ್ಷಿತ ಲಾಭ ಸಿಗಲಾರದು. ಕೌಟುಂಬಿಕ ಜಂಜಾಟ ಹೆಚ್ಚು. ಮನಶ್ಯಾಂತಿಗಾಗಿ ತೊಳಲಾಡುವಿರಿ.
ಕನ್ಯಾ
ಈ ದಿನ ನಿಮಗೆ ಪ್ರತಿಕೂಲವೆಂಬಂತೆ ಕಂಡೀತು. ಆದರೆ ನಿಜವಾಗಿ ಅದು ನಿಮ್ಮ ಮನಸಿನ ಭಾವನೆ. ವಾಸ್ತವದಲ್ಲಿ ಪೂರಕವೇ ಆದೀತು.
ತುಲಾ
ಬಾಕಿ ಇರುವ ಕಾರ್ಯ ಮುಗಿಸಲು ಗಮನ ಕೊಡಿ. ಕೆಲವರ ಜತೆಗಿನ ತಪ್ಪಭಿಪ್ರಾಯ ನಿವಾರಿಸಲು ಪ್ರಯತ್ನಿಸಿ. ಆರೋಗ್ಯಸಮಸ್ಯೆ ಸಂಭವ.
ವೃಶ್ಚಿಕ
ನಿಮ್ಮ ಸುತ್ತ ಹಲವಾರು ಬದಲಾವಣೆ ಉಂಟಾದೀತು. ಮನಸ್ಸು ವಿಚಲಿತಗೊಳ್ಳಲು ಅವಕಾಶ ಕೊಡದಿರಿ. ಎಲ್ಲವನ್ನು ಧೈರ್ಯದಿಂದ ಎದುರಿಸಿ.
ಧನು
ಕಾರ್ಯಕ್ಕೆ ಅಡ್ಡಿ. ಸಂವಹನದ ಕೊರತೆ. ಅದರಿಂದಾಗಿ ಭಿನ್ನಾಭಿಪ್ರಾಯ. ಬಂಧುಗಳ ಜತೆ ವಾಗ್ವಾದ, ಅಸಹನೆ ಹೆಚ್ಚಳ.
ಮಕರ
ಎಲ್ಲ ಕ್ಷೇತ್ರಗಳಲ್ಲಿ ಇಂದು ಸ-ಲತೆ. ವೃತ್ತಿಯಲ್ಲಿ ಉನ್ನತಿ. ಖಾಸಗಿ ಬದುಕಲ್ಲಿ ಅಭೀಷ್ಟ ಸಿದ್ಧಿ. ಹಣಕಾಸು ಹರಿವು ಹೆಚ್ಚಳ. ಬಂಧು ಭೇಟಿ.
ಕುಂಭ
ಕೆಲಸದ ಒತ್ತಡ ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳಿ. ಸಂಬಂಧದ ವಿಚಾರದಲ್ಲಿ ಮುಚ್ಚುಮರೆ ಬೇಡ. ಮುಕ್ತ ಮನಸ್ಸು ಮುಖ್ಯ.
ಮೀನ
ವೃತ್ತಿಯಲ್ಲಿ ನಿಮಗೆ ಪೂರಕವಾಗದು. ಪ್ರತಿಕೂಲ ಸನ್ನಿವೇಶ ಎದುರಿಸುವಿರಿ. ಆತ್ಮೀಯರ ಜತೆ ಮುಕ್ತವಾಗಿ ಮನಸ್ಸು ಹಂಚಿಕೊಳ್ಳಿ.