ಮೇಷ
ಕಾಡುವ ಸಮಸ್ಯೆ ಯೊಂದು ಪರಿಹಾರ. ಆಪ್ತ ಬಂಧುವಿನ ಭೇಟಿ. ಮನೆಯಲ್ಲಿ ಅಶಾಂತಿ ಮೂಡಿದರೂ ಬೇಗ ನಿವಾರಣೆ.
ವೃಷಭ
ಇತರರ ಜತೆ ಭಿನ್ನಮತ, ವಾಗ್ವಾದ ಉಂಟಾದೀತು. ಅದನ್ನು ತಾಳ್ಮೆಯಿಂದ ನಿಭಾಯಿಸಿ. ಹಣದ ಕೊರತೆಯ ಸಮಸ್ಯೆ ಪರಿಹಾರ.
ಮಿಥುನ
ಇಂದು ಮುಖ್ಯ ವಿಷಯದಲ್ಲಿ ಹಿನ್ನಡೆ ಕಾಣುವಿರಿ. ಪ್ರೀತಿಯ ವ್ಯಕ್ತಿಗೆ ನಿಮ್ಮ ಭಾವನೆ ತಿಳಿಸಲು ಹಿಂಜರಿಕೆ ತೋರಬೇಕಿಲ್ಲ.
ಕಟಕ
ಆಶಾವಾದದಿಂದ ದಿನ ಆರಂಭಿಸಿ. ಕಠಿಣ ಕಾರ್ಯ ಸಾಧ್ಯವಾಗಲಿದೆ.ಹಣ ಹೂಡಿಕೆಯಲ್ಲಿ ಎಚ್ಚರ ವಹಿಸಿ. ಕುಟುಂಬ ಸದಸ್ಯರ ಸಲಹೆ ಪಡೆಯಿರಿ.
ಸಿಂಹ
ನಿಮ್ಮ ದಕ್ಷ ಕೆಲಸಕ್ಕೆ ಸೂಕ್ತ ಪ್ರತಿಫಲ. ಬಾಯಿ ಚಪಲಕ್ಕೆ ಕಡಿವಾಣ ಹಾಕಿ. ಸಿಕ್ಕಿದ್ದನ್ನು ತಿನ್ನಬೇಡಿ. ಆರೋಗ್ಯ ಕಾಪಾಡಲು ಗಮನ ಕೊಡಿ.
ಕನ್ಯಾ
ನೀವು ಕಾತರಿಸುತ್ತಿದ್ದ ಬೆಳವಣಿಗೆ ಇಂದು ಸಾಧ್ಯವಾಗಲಿದೆ. ಪ್ರೀತಿಯಲ್ಲಿ ಯಶಸ್ಸು. ಸಣ್ಣ ಆರೋಗ್ಯ ಸಮಸ್ಯೆ ನಿವಾರಣೆಯಾಗಲಿದೆ.
ತುಲಾ
ಆರ್ಥಿಕ ವ್ಯವಹಾರ ಸಾಧಾರಣ ಫಲ ನೀಡುವುದು. ಚಿಂತೆಗೆ ಕಾರಣವಿಲ್ಲ. ಇದು ತಾತ್ಕಾಲಿಕ ಪರಿಸ್ಥಿತಿ. ಕೌಟುಂಬಿಕ ಸಹಕಾರ.
ವೃಶ್ಚಿಕ
ಇಷ್ಟದ ವ್ಯಕ್ತಿಯನ್ನು ಭೇಟಿಯಾಗಿ ಅವರನ್ನು ಪ್ರಭಾವಿತಗೊಳಿಸಲು ಯತ್ನಿಸುವಿರಿ. ದೊಡ್ಡ ಖರ್ಚಿನ ಸಾಧ್ಯತೆ ಮೂಡಿಬರಲಿದೆ.
ಧನು
ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿದ್ದೀರಿ. ಅದರಿಂದ ಹೊರಬರಲು ಪ್ರಯತ್ನಿಸಿ. ಮನಸ್ಸಿದ್ದರೆ ಮಾರ್ಗವಿದೆ ಎಂದು ಅರಿತುಕೊಳ್ಳಿ.
ಮಕರ
ನಿಮ್ಮ ಬದುಕಲ್ಲಿ ಹೊಸ ವ್ಯಕ್ತಿ ಪ್ರವೇಶಿಸ ಬಹುದು. ಅವರಿಂದ ಸಂತೋಷ. ವೃತ್ತಿಯಲ್ಲಿ ಸಮಾಧಾನಕರ ಬೆಳವಣಿಗೆ.
ಕುಂಭ
ಏಕತಾನತೆಯನ್ನು ತೊಡೆದು ಹಾಕಿ. ಹೊಸತನಕ್ಕೆ ಬಾಗಿಲು ತೆರೆಯಿರಿ. ದೈಹಿಕ ಆಲಸ್ಯ ತೊರೆಯುವುದು ಮುಖ್ಯ. ಕ್ಷಿಪ್ರ ಕಾರ್ಯ ಲೇಸು.
ಮೀನ
ಸಂತೋಷ ನೀಡುವ ಜನರ ಜತೆ ಕಾಲ ಕಳೆಯಿರಿ. ಉದ್ವಿಗ್ನತೆ ಶಮನಕ್ಕೆ ಇದು ಸಹಕಾರಿ. ದೇವರ ಪಾರ್ಥನೆಯಿಂದ ಒಳಿತಾದೀತು.