ದಿನಭವಿಷ್ಯ: ನಿಮ್ಮ ಕೆಲಸಕ್ಕೆ ಶ್ಲಾಘನೆ ಸಿಗುವುದು, ಹುಮ್ಮಸ್ಸಿನಿಂದ ದಿನ ಆರಂಭಿಸಿ

ಮೇಷ.
ಮೇಲಧಿಕಾರಿ ಮುಂದೆ ವಿನಯದಿಂದ ವರ್ತಿಸಿ. ಕುಟುಂಬದ ಹಿತಾಸಕ್ತಿಗೆ ಗಮನ ಹರಿಸಿ. ಅನವಶ್ಯ ವೆಚ್ಚಗಳಿಗೆ ಕಡಿವಾಣ ಹಾಕಿರಿ.

ವೃಷಭ
ಸಂತೋಷದ ಮನಸ್ಥಿತಿ. ಕಾರ್ಯಕ್ಕೆ ಶ್ಲಾಘನೆ. ಆರ್ಥಿಕ ಪುರಸ್ಕಾರ. ವಿವಾಹಿತರ ಮಧ್ಯೆ ಅನವಶ್ಯ ವಿಷಯಕ್ಕೆ ಸಂಘರ್ಷವಾದೀತು.

ಮಿಥುನ
ಗ್ರಹಗತಿಯು ನಿಮಗೆ ಕುಟುಂಬ ಸದಸ್ಯರ ಬೆಂಬಲ ಸೂಚಿಸುತ್ತಿದೆ. ಹಾಗಾಗಿ ಕೌಟುಂಬಿಕ ಖೇದವಿರದು. ಎಲ್ಲವೂ ಅನುಕೂಲಕರ.

ಕಟಕ
ಮಾತಿನ ಮೇಲೆ ಹಿಡಿತವಿರಲಿ. ಕಟುಮಾತು ಇತರರ ಮೇಲೆ  ಶಾಶ್ವತ ಪರಿಣಾಮ ಬೀರಬಹುದು. ಕೌಟುಂಬಿಕ ಸಮ್ಮಿಲನ.

ಸಿಂಹ
ಕೆಲಸದಲ್ಲಿ ಅಡ್ಡಿ. ಸುಗಮವಾಗಿ ಯಾವ ಕೆಲಸವೂ ಸಾಗದು. ತಪ್ಪುಗಳಿಂದ ಪಾಠ ಕಲಿಯಿರಿ. ಹಠಮಾರಿ ಧೋರಣೆ ಬಿಟ್ಟಬಿಡಿ.

ಕನ್ಯಾ
ಕೆಲವು ನೆನಪು ನೋವು ತರಬಹುದು. ಹಳೆಯದನ್ನು ಮರೆತು ಮುಂದೆ ಸಾಗುವುದು ಹಿತಕರ. ಕುಟುಂಬಸ್ಥರ ಬೆಂಬಲ ಪಡೆಯಿರಿ.

ತುಲಾ
ಶಿಸ್ತು ಮತ್ತು ಸಹನೆ ಇಂದಿನ ಅಗತ್ಯ. ಅದರಿಂದ ಮಾತ್ರ ನಿಮ್ಮ ಗುರಿ ಈಡೇರಿಕೆ. ಕೌಟುಂಬಿಕ ಒತ್ತಡ ಮನಸ್ಥಿತಿ ಕೆಡಿಸದಂತೆ ನೋಡಿ.

ವೃಶ್ಚಿಕ
ಹಣದ ವಿಷಯದಲ್ಲಿ ದುಸ್ಸಾಹಸ ಬೇಡ. ವಿವೇಚನೆ  ಇಲ್ಲದೆ ಹಣ ಹೂಡಬೇಡಿ. ಆಪ್ತರ ಹಿತವಚನಕ್ಕೆ ಕಿವಿಗೊಡಿ. ಆರೋಗ್ಯ ಸಮಸ್ಯೆ.

ಧನು
ಕುಟುಂಬ ಸದಸ್ಯರ ಜತೆಗಿನ ಭಿನ್ನಮತ ಸೌಹಾರ್ದದಿಂದ ಪರಿಹರಿಸಿ. ಆರೋಗ್ಯ ಸುಸ್ಥಿರ. ಆರ್ಥಿಕ ಸಮಸ್ಯೆ ನಿವಾರಣೆ.

ಮಕರ
ಕ್ಷುಲ್ಲಕ ಕಲಹದಿಂದ ದೂರವಿರಿ. ನಿಮ್ಮ ಕೋಪತಾಪ ನಿಯಂತ್ರಿಸಿ. ಹಿನ್ನಡೆಗಳು ನಿಮ್ಮ ಎದೆಗುಂದಿಸದಿರಲಿ. ಆರ್ಥಿಕ ಒತ್ತಡ ಅಧಿಕ.

ಕುಂಭ
ಪ್ರತಿಕೂಲ ವಿಷಯಕ್ಕೆ ಭಾವಾವೇಶದಿಂದ ಪ್ರತಿಕ್ರಿಯೆ ತೋರಬೇಡಿ. ಅದು ಕೋಲಾಹಲ ಸೃಷ್ಟಿಸಬಹುದು. ಸಂಯಮ ಅಗತ್ಯ.

ಮೀನ
ಚಟುವಟಿಕೆಯ ದಿನವಿದು. ದಿನವಿಡೀ ಏನಾದರೊಂದು ಹೊಣೆ ನಿಭಾಯಿಸಬೇಕಾದ ಒತ್ತಡ. ಮನೆಯಲ್ಲಿ ಸೌಹಾರ್ದತೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!