ದಿನಭವಿಷ್ಯ: ಒಂದು ವಿಷಯ ನಿಮ್ಮನ್ನು ಕಾಡುತ್ತಿದೆ, ಕುಲದೇವರ ಪ್ರಾರ್ಥನೆ ಮಾಡಿದರೆ ಎಲ್ಲದಕ್ಕೂ ಪರಿಹಾರ

ಮೇಷ
ವಿಷಯವೊಂದು ಕೊರಗಾಗಿ ಕಾಡುತ್ತಿದೆ. ಅದಕ್ಕೆ ಪರಿಹಾರ ಸಿಗುವ ದಿನ ದೂರವಿಲ್ಲ. ತಾಳ್ಮೆಯಿಂದ ಕಾಯಿರಿ. ಕುಲದೇವರ ಪ್ರಾರ್ಥಿಸಿ.
ವೃಷಭ
ಕೌಟುಂಬಿಕ ಸಾಮರಸ್ಯ. ಹಾಗಾಗಿ ಬಿಕ್ಕಟ್ಟಿನ ವಿಷಯ ಸುಲಭದಲ್ಲಿ ಪರಿಹಾರ.   ಎಲ್ಲರ ಸಹಕಾರ ಲಭ್ಯ. ಆರ್ಥಿಕ ಒತ್ತಡ ಕಡಿಮೆ.
ಮಿಥುನ
ಸಂತೋಷ, ಸಮಾಧಾನದ ದಿನ. ನೀವು ನಿರೀಕ್ಷಿಸಿದ ಕಾರ್ಯ ಈಡೇರಿಕೆ. ಆಪ್ತರ ಜತೆಗಿನ ಭಿನ್ನಮತ ನಿವಾರಣೆ. ಕೌಟುಂಬಿಕ ಸೌಹಾರ್ದ.
ಕಟಕ
ನಿಮ್ಮ ಸುತ್ತ ಬಿಗುವಿನ ವಾತಾವರಣ ತೋರಿದ್ದರೆ ಅದನ್ನು ನೀವೇ ಸಡಿಲಿಸಬೇಕು. ಬಿಗುಮಾನ ಬಿಟ್ಟು ನಯವಾಗಿ ವ್ಯವಹರಿಸಿ.
ಸಿಂಹ
ಮನದಿಚ್ಛೆ ನೆರವೇರಿಕೆ. ಮಾನಸಿಕ ನಿರಾಳತೆ. ಕೌಟುಂಬಿಕ ಸೌಹಾರ್ದ. ಬಂಧುಗಳ ಕಿರಿಕಿರಿ ದೂರವಾಗಲಿದೆ. ಧನಪ್ರಾಪ್ತಿ.
ಕನ್ಯಾ
ಯಶಸ್ಸಿಗೆ ತಪ್ಪುದಾರಿ ಹಿಡಿಯಬೇಡಿ. ನಡೆನುಡಿ ಪ್ರಾಮಾಣಿಕವಾಗಿರಲಿ.  ಆಪ್ತರ ಜತೆ ಜಗಳ ಕಾಯಬೇಡಿ. ಸಂಯಮ ಕಾಪಾಡಿಕೊಳ್ಳಿ.
ತುಲಾ
ನಿಮ್ಮ ಸಾಧನೆ ಇತರರನ್ನು ಪ್ರಭಾವಿಸಲಿದೆ. ವ್ಯವಹಾರದಲ್ಲಿ ತೊಡಕು ನಿವಾರಣೆ. ಕೌಟುಂಬಿಕ ಬೇಗುದಿ ಶಮನ ಕಾಣಲಿದೆ.
ವೃಶ್ಚಿಕ
ಎಲ್ಲ ವಿಷಯದಲ್ಲಿ  ನಿಮಗಿಂದು ಯಶಸ್ಸು. ಆಪ್ತರ ಜತೆಗಿನ ವಿರಸ ನಿವಾರಣೆ. ಹೊಂದಾಣಿಕೆಯಿಂದ ಎಲ್ಲವೂ ಸಲೀಸು.
ಧನು
ಆಪ್ತರ ವರ್ತನೆ ಅಸಹನೀಯ ಎನಿಸೀತು. ಅವರು ನಿಮ್ಮ ವಿರುದ್ಧ ಸಾಗುತ್ತಿದ್ದಾರೆ ಎಂಬ ಭಾವನೆ.   ತಪ್ಪು ಕಲ್ಪನೆಗೆ ಅವಕಾಶ ಕೊಡಬೇಡಿ.
ಮಕರ
ಸಂಗಾತಿ ಜತೆಗೆ ಭಿನ್ನಾಭಿಪ್ರಾಯ ಸಂಭವ.ಸಮಾಧಾನದಿಂದ ನಿಭಾಯಿಸಿ. ಕೋಪತಾಪ ಒಳಿತಲ್ಲ. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು.
ಕುಂಭ
ನಿಮ್ಮ ಸಾಮರ್ಥ್ಯದ ಅಭಿವ್ಯಕ್ತಿಗೆ ಅವಕಾಶ ಸಿಗುವುದು. ಆರ್ಥಿಕ ಸ್ಥಿರತೆ. ಬಂಧುಗಳ ಜತೆ ವಿರಸ ಸಂಭವ. ಸಂಯಮದ ನಡೆ ಅವಶ್ಯ.
 ಮೀನ
ಸಂವಹನದ ಕೊರತೆಯಿಂದ ಆಪ್ತರ ಜತೆ ಭಿನ್ನಾಭಿಪ್ರಾಯ. ತಪ್ಪು ಗ್ರಹಿಕೆ ನೀಗಲು ಆದ್ಯತೆ ಕೊಡಿ. ಸಂಘರ್ಷಕ್ಕೆ ಅವಕಾಶ ಕೊಡದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!