ದಿನಭವಿಷ್ಯ: ನಿರ್ದಿಷ್ಟ ಗುರಿ ಸಾಧನೆಗೆ ಮನಸ್ಸು ಮಾಡಿದ್ದೀರಿ, ಯಾವ ಕಾರಣಕ್ಕೂ ಹಿಂದೆ ನೋಡಬೇಡಿ!

ಮೇಷ.
ನಿರ್ದಿಷ್ಟ ಗುರಿ ಸಾಧಿಸುವುದಕ್ಕೆ ನಿಮ್ಮ ಆದ್ಯತೆ. ಅವಸರ ಬೇಡ. ತಾಳ್ಮೆಯಿಂದ ಕಾದರೆ ಫಲವಿದೆ.  ದುಡುಕಿನ ವರ್ತನೆ ಬೇಡ.
ವೃಷಭ
ವೃತ್ತಿಯಲ್ಲೂ ಮನೆಯಲ್ಲೂ ನಿಮಗೆ ಪೂರಕ ಪರಿಸ್ಥಿತಿ. ಸಮಸ್ಯೆ ನೀಗಿಸುವಲ್ಲಿ ಸ-ಲತೆ. ನಿಮಗಾಗದವರು ಸೋಲು ಕಾಣುವರು.
ಮಿಥುನ
ವ್ಯವಹಾರದಲ್ಲಿ ಅಡ್ಡಿ. ಅದನ್ನು ನೀಗಿಕೊಳ್ಳಲು ನಿಮ್ಮಿಂದ ಹೆಚ್ಚುವರಿ ಶ್ರಮ ಬೇಕು. ನಿರ್ಲಕ್ಷ್ಯ ಧೋರಣೆ ಬಿಟ್ಟುಬಿಡಿ. ಗಂಭೀರವಾಗಿ ಪರಿಗಣಿಸಿ.
ಕಟಕ
ಹಣ ಗಳಿಕೆಯ ಹೊಸ ಅವಕಾಶಕ್ಕೆ ಹುಡುಕಾಟ ನಡೆಸುವಿರಿ. ಆತುರದ ಕ್ರಮ ತೆಗೆದುಕೊಳ್ಳದಿರಿ. ಸ್ನೇಹಿತರಿಂದ ಸೂಕ್ತ ನೆರವು ಸಿಗಲಿದೆ. ಧನಪ್ರಾಪ್ತಿ.
ಸಿಂಹ
ಬಹುಮುಖ್ಯ ವಿಷಯದಲ್ಲಿ ಮಾನಸಿಕ ತಾಕಲಾಟ. ಅನಿರೀಕ್ಷಿತ ಸಮಸ್ಯೆ ಉದ್ಭವ.  ಆತ್ಮೀಯರ ಸಹಕಾರ ಪಡೆದು ಮುನ್ನಡಿಯಿಡಿ.
ಕನ್ಯಾ
ಸಣ್ಣ ವಿಷಯ ನಿಮ್ಮ ಮನಶ್ಯಾಂತಿ ಹಾಳು ಮಾಡಲಿದೆ. ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಆದ್ಯತೆ ನೀಡಿ. ನಿರ್ಲಕ್ಷ್ಯ ಮಾಡಬೇಡಿ.
ತುಲಾ
ಕೆಲವು ಬಿಕ್ಕಟ್ಟು  ಪರಿಹಾರದಲ್ಲೇ ದಿನ ಕಳೆಯಲಿದೆ. ಸೂಕ್ತ ಸಹಕಾರವೂ ದೊರಕದು.  ಆರ್ಥಿಕ ಸಮಸ್ಯೆ ಪರಿಹಾರ ಕಾಣಲಿದೆ.
ವೃಶ್ಚಿಕ
ಮನೆ, ಕಚೇರಿಯಲ್ಲಿ  ಸಂತೋಷದ ವಾತಾವರಣ. ಬಂಧುಗಳ  ಸಹಕಾರ. ಕೌಟುಂಬಿಕ ಬದ್ಧತೆ ಈಡೇರಿಕೆ. ಹಣದ ಕೊರತೆ ನೀಗಲಿದೆ.
ಧನು
ಉದ್ದೇಶಿತ ಕಾರ್ಯ ಸಾಧಿಸುವಿರಿ. ಆದರೆ ಕೆಲವರ ವಿರೋಧ, ಟೀಕೆ ಎದುರಾದೀತು. ಕೌಟುಂಬಿಕ ಒತ್ತಡ ಹೆಚ್ಚುವ ಪ್ರಸಂಗ.
ಮಕರ
ವೃತ್ತಿ ಕ್ಷೇತ್ರದಲ್ಲಿ ವಾಗ್ವಾದ ನಡೆದೀತು. ತಾಳ್ಮೆ ಕಳಕೊಳ್ಳದಿರಿ. ನಿಮ್ಮ ಬಹುಮುಖ್ಯ ಉದ್ದೇಶ ಶೀಘ್ರವೇ ಈಡೇರಲಿದೆ. ಆರ್ಥಿಕ ಪ್ರಗತಿ.
ಕುಂಭ
ಯಾರ ವಿರುದ್ಧವೂ ವೈಯಕ್ತಿಕ ನಿಂದನೆಯ ದಾರಿ ಹಿಡಿಯಬೇಡಿ. ಪ್ರತಿಕೂಲ ಪರಿಸ್ಥಿತಿಯನ್ನು ನಿರ್ಲಿಪ್ತವಾಗಿ ನಿಭಾಯಿಸಿ.  ಧಾರ್ಮಿಕ ಆಸಕ್ತಿ.
ಮೀನ
ಮನೆಯೊಳಗಿನ  ಭಿನ್ನಮತ ಬಗೆಹರಿಸಿ.  ನೀವೇ ಸ್ವಲ್ಪ ಬಗ್ಗಿದರೂ ಪರವಾಗಿಲ್ಲ. ಸೌಹಾರ್ದ ಕಾಯ್ದುಕೊಳ್ಳುವುದು ಎಲ್ಲಕ್ಕಿಂತ ಮುಖ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!