ದಿನಭವಿಷ್ಯ: ಇಂದು ಹೊಸ ಕೆಲಸ ಆರಂಭಿಸುತ್ತಿದ್ದೀರಿ, ವಿಶ್ವಾಸವಿರಲಿ, ಯಶಸ್ಸು ನಿಮ್ಮದೇ!

ಮೇಷ
ಅನುಕೂಲಕರ ದಿನ. ಹೊಸ ಸ್ನೇಹ ಬೆಳೆಯಬಹುದು. ವೃತ್ತಿಯಲ್ಲಿ ಯಶಸ್ಸು. ಆದರೆ ಮನೆಯಲ್ಲಿ ಒತ್ತಡ ಹೆಚ್ಚುವುದು.
ವೃಷಭ
ಆದಾಯ ಹೆಚ್ಚಳದ ಸಾಧ್ಯತೆ. ನಿಮ್ಮ ಸ್ವಭಾವ ಎಲ್ಲರಿಂದ ಮೆಚ್ಚುಗೆಗೆ ಒಳಗಾಗಲಿದೆ. ಆರೋಗ್ಯ ಕೆಡಿಸುವ ಆಹಾರ ದೂರವಿಡಿ.
ಮಿಥುನ
ಉತ್ಸಾಹದ ದಿನ. ಹಾಗಾಗಿ ಕೆಲಸದಲ್ಲಿ  ಹುರುಪು ತೋರುವಿರಿ. ಉದ್ದಿಮೆಯಲ್ಲಿ ಯಶ. ಕೌಟುಂಬಿಕ ಕ್ಲೇಶ ನಿವಾರಣೆ, ನಿರಾಳತೆ.
ಕಟಕ
ಯಾವುದೇ ಕೆಲಸ ವಿಶ್ವಾಸದಿಂದ ಆರಂಭಿಸಿ. ಯಶ ಸಿಗುವುದು. ಕುಟುಂಬದ ಜತೆ ಹೆಚ್ಚು ಕಾಲ ಕಳೆಯಿರಿ. ಆರೋಗ್ಯ ಸಮಸ್ಯೆ ನಿವಾರಣೆ.
ಸಿಂಹ
ಎಲ್ಲವನ್ನೂ ನಿಮ್ಮದೇ ದೃಷ್ಟಿಕೋನದಲ್ಲಿ ನೋಡುತ್ತೀರಿ. ನಿಮ್ಮ ಹಠಮಾರಿ ಧೋರಣೆ ವಾಗ್ವಾದಕ್ಕೆ ಹೇತುವಾದೀತು.
ಕನ್ಯಾ
ನಿಮ್ಮ ಇಷ್ಟದ ವ್ಯಕ್ತಿಯಲ್ಲಿ ಭಾವನೆ ಅಭಿವ್ಯಕ್ತಿಸಲು ಹಿಂಜರಿಕೆ ಬೇಡ.  ಪೂರಕ ಸ್ಪಂದನೆ ದೊರಕಲಿದೆ. ಈ ದಿನ ಖರ್ಚು ಹೆಚ್ಚಬಹುದು.
ತುಲಾ
ಗುರಿ ಸಾಧನೆಯ ಹಾದಿ ಕಷ್ಟವೆಂದು ತೋರಿದರೂ ನಿಜವಾಗಿ ಹಾಗಿಲ್ಲ. ಅಂದುಕೊಂಡ ಕಾರ್ಯ ಸುಲಲಿತವಾಗಿ ಸಾಗಲಿದೆ. ಧನಪ್ರಾಪ್ತಿ.
ವೃಶ್ಚಿಕ
ಕೆಲಸ ಮಾಡುವುದಷ್ಟೆ ಮುಖ್ಯವಲ್ಲ. ಅದರಲ್ಲಿ ಗುಣಮಟ್ಟವೂ ಬೇಕು. ಇದನ್ನು ಅರಿಯಿರಿ. ಇಂದು ಕೌಟುಂಬಿಕ ವಾಗ್ವಾದ ಉಂಟಾದೀತು.
ಧನು
ಇತ್ತೀಚಿನ ಹೂಡಿಕೆ ಯೊಂದು ಉತ್ತಮ ಫಲ ನೀಡಲಿದೆ. ಬಂಧುಗಳ ಸಹಕಾರ. ಸಾಂಸಾರಿಕ ಸಮಸ್ಯೆ ನೀಗುವುದು. ಹಣದ ಬಿಕ್ಕಟ್ಟು ಪರಿಹಾರ.
ಮಕರ
ವಾಗ್ವಾದ, ಸಂಘರ್ಷ ಇಂದಿನ ಬೆಳವಣಿಗೆ. ಅದನ್ನು ತಪ್ಪಿಸುವುದೇ ನಿಮ್ಮ ಆದ್ಯತೆಯಾಗಲಿ. ಹೆಸರು ಕೆಡದಂತೆ ವರ್ತಿಸುವುದು ಅಗತ್ಯ.
ಕುಂಭ
ವ್ಯಕ್ತಿಯೊಬ್ಬರ ಬಗ್ಗೆ ಅತೀವ ಆಸಕ್ತಿ ತೋರುವಿರಿ. ಅದು ಪ್ರೀತಿಗೆ ತಿರುಗೀತು. ನೀವಿರುವ ಬಿಗು ಪರಿಸರ ಅಸಹನೀಯ ಎನಿಸಲಿದೆ.
ಮೀನ
ಆಸ್ತಿ ಖರೀದಿಗೆ ಯೋಜಿಸಿದ್ದರೆ ಅದು ಫಲ ನೀಡಲಿದೆ. ಕೆಟ್ಟ ಆಹಾರ ಸೇವನೆಯಿಂದ ಹೊಟ್ಟೆ ಕೆಡಬಹುದು. ಬಂಧುಗಳ ಅಸಹಕಾರ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!