ದಿನಭವಿಷ್ಯ: ವೃತ್ತಿಯ ಒತ್ತಡ, ಮನೆಯ ಪರಿಸರ ಕಲಕದಿರಿ, ಅದರಿಂದ ನೆಮ್ಮದಿ ಹಾಳಾಗಬಹುದು

ಮೇಷ
ಸಹೋದ್ಯೋಗಿ ಕಿರುಕುಳ. ಅವರ ಟೀಕೆ ಕಡೆಗಣಿಸಿ. ಕೌಟುಂಬಿಕ ಸಾಮರಸ್ಯ ಕಾಯಲು ಆದ್ಯತೆ ಕೊಡಿ. ಶಾಂತವಾಗಿ ವ್ಯವಹರಿಸಿ.
ವೃಷಭ
ಭಿನ್ನಾಭಿಪ್ರಾಯ ಉಂಟಾದರೆ ಅದನ್ನು ಸಮಾಧಾನದಿಂದ ನಿವಾರಿಸಿಕೊಳ್ಳಿ. ದ್ವೇಷ ಸಾಧನೆ ಬೇಡ. ಖರೀದಿ ಉತ್ಸಾಹ ಕಡಿಮೆ ಮಾಡಿ.
ಮಿಥುನ
ವ್ಯವಹಾರದಲ್ಲಿ ಆತುರ, ದುಡುಕು ಬೇಡ. ಯೋಚಿಸಿ ಕಾರ್ಯ ಎಸಗಿ. ಕುಟುಂಬಸ್ಥರ ಭಾವನೆ ಗೌರವಿಸಿ. ಹೊಂದಾಣಿಕೆಯೆ ಒಳಿತು.
ಕಟಕ
ಅನಪೇಕ್ಷಿತ ಬೆಳವಣಿಗೆ ಚಿಂತೆಗೆ ಕಾರಣವಾಗಲಿದೆ. ಸುಲಭ ಪರಿಹಾರ ಗೋಚರಿಸದು. ತಾಳ್ಮೆಯಿಂದ ಕಾದರೆ ದಾರಿ ತೋರಬಹುದು.
ಸಿಂಹ
ಆಪ್ತರೊಡನೆ ಮನಸ್ತಾಪ ಸಂಭವ. ಕಾರಣವಿಲ್ಲದೆ ಆರೋಪ ಹೊರಿಸದಿರಿ. ಅರಿತು ವ್ಯವಹರಿಸುವುದು ಮುಖ್ಯ. ಧನವ್ಯಯ.
ಕನ್ಯಾ
ಕೆಲವಾರು ಕಾರಣಗಳಿಂದ ಅಶಾಂತಿ ಕಾಡಲಿದೆ. ಸಮಸ್ಯೆ ಪರಿಹಾರಕ್ಕೆ ತಕ್ಷಣ ಮುಂದಾಗಿರಿ. ವಿಳಂಬ ಧೋರಣೆ ತರವಲ್ಲ.
ತುಲಾ
ವೃತ್ತಿಯ ಒತ್ತಡ ಮನೆಯ ಪರಿಸರ ಕಲಕದಿರಲಿ. ಅವರೆಡರ ಮಧ್ಯೆ ಸಮನ್ವಯ ಸಾಧಿಸಿ. ಧನಾಗಮ ಸುಗಮ. ವಸ್ತು ಖರೀದಿ ಸಂಭವ.
ವೃಶ್ಚಿಕ
ಕೆಲಸದ ಒತ್ತಡ ಹೆಚ್ಚು. ಆದರೂ ಕುಟುಂಬ ಸದಸ್ಯರ ಜತೆ ಆತ್ಮೀಯ ಕಾಲಕ್ಷೇಪಕ್ಕೆ ಅವಕಾಶ. ವ್ಯವಹಾರದಲ್ಲಿ ಪ್ರಗತಿ. ಆರ್ಥಿಕ ಲಾಭ.
ಧನು
ಯಾವುದೋ ಕೊರಗು ಕಳೆಯಲಿದೆ. ಅಸಹನೆ ನೀಗಲಿದೆ. ಇತ್ತೀಚಿನ ಕೆಲ ಬೆಳವಣಿಗೆಗಳು ಇದಕ್ಕೆ ಕಾರಣವಾಗಲಿದೆ.
ಮಕರ
ಕೌಟುಂಬಿಕ ತೊಡಕಿನಲ್ಲಿ ಸಿಲುಕಿ ಕೊಂಡಿದ್ದರೆ ಇಂದು ನಿರಾಳತೆ ಸಿಗುವುದು. ವಿರೋಧ ಕೊನೆಗೊಂಡು ಸಮರಸ ಉಂಟಾಗಲಿದೆ.
ಕುಂಭ
ಎಲ್ಲರ ಜತೆ ಹೊಂದಾಣಿಕೆ ಸಾಧಿಸಿ. ನಿಮ್ಮ ನಿಲುವಿನಲ್ಲಿ ಕಠಿಣ ಧೋರಣೆ ಬಿಡಿ. ಇತರರ ಮಾತು ಆಲಿಸುವ ವ್ಯವಧಾನವಿರಲಿ.
ಮೀನ
ಭವಿಷ್ಯದ ಕುರಿತಂತೆ ಆತಂಕ. ಮನಸ್ಸಿಗೆ ವ್ಯಾಕುಲ. ಆಪ್ತರೊಬ್ಬರ ವರ್ತನೆ ಅಸಮಾಧಾನ ಮೂಡಿಸಲಿದೆ. ತಾಳ್ಮೆಯಿಂದ ವ್ಯವಹರಿಸಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!