ದಿನಭವಿಷ್ಯ: ಭಾವುಕರಾಗಿ ಪ್ರತಿಕ್ರಿಯೆ ನೀಡಿದರೆ ಮಾನಸಿಕ ನೆಮ್ಮದಿ ಹಾಳಷ್ಟೇ, ದೃಢವಾಗಿರಿ

ಮೇಷ.
ಕೆಲ ವಿಷಯಗಳಿಗೆ ತುಂಬಾ ಭಾವುಕರಾಗಿ ಪ್ರತಿಕ್ರಿಯಿಸುವಿರಿ. ಅದರಿಂದ ಮಾನಸಿಕ ನೆಮ್ಮದಿ ಹಾಳು. ದೃಢ ಮನಸ್ಸು ಬೆಳೆಸಿಕೊಳ್ಳಿ.
ವೃಷಭ
ಕಾರಣವಿಲ್ಲದೇ ಆತಂಕ ಪಡುವಿರಿ. ಋಣಾತ್ಮಕ ಚಿಂತನೆ ಬಿಡಿ. ಎಲ್ಲವನ್ನು ಗುಣಾತ್ಮಕವಾಗಿ ಸ್ವೀಕರಿಸಿ. ಗುರಿ ಸಾಧನೆ ನಿಮಗೆ ಕಷ್ಟವೇನಲ್ಲ.
ಮಿಥುನ
ವೃತ್ತಿಯ ಒತ್ತಡ ಕಡಿಮೆಯಾಗಲಿದೆ.   ಮನಸ್ಸಿಗೆ ನಿರಾಳತೆ. ಕೌಟುಂಬಿಕ ಹೊಣೆಗಾರಿಕೆ ನಿಭಾಯಿಸಲು ಸಮಯ ಸಿಗಲಿದೆ.
ಕಟಕ
ಹಣ ವ್ಯವಹಾರದಲ್ಲಿ ಹಿನ್ನಡೆ ಉಂಟಾದೀತು. ಎಚ್ಚರಿಕೆಯ ಹೆಜ್ಜೆಯಿಡಿ. ಮನೆಯ ಆವಶ್ಯಕತೆ ಪೂರೈಸಲು ತುರ್ತು ಗಮನ ಹರಿಸಿ.
ಸಿಂಹ
ಖಾಸಗಿ ಬದುಕಲ್ಲಿ ಹೊಸ ಸಮಸ್ಯೆ ಸೃಷ್ಟಿ. ಅದನ್ನು ಆದ್ಯತೆಯಲ್ಲಿ ಪರಿಹರಿಸಿ. ಉಲ್ಬಣಿಸಲು ಅವಕಾಶ ಕೊಡಬೇಡಿ. ಬಂಧುಗಳ ಸಹಕಾರ.
ಕನ್ಯಾ
ವೃತ್ತಿಯಲ್ಲಿ ಹೊಣೆ ಹೆಚ್ಚಳ. ಅದನ್ನು ಸರಿಯಾಗಿ ನಿಭಾಯಿಸಲು ಕಷ್ಟಪಟ್ಟರೂ ಯಶಸ್ಸು ಸಿಗಲಿದೆ. ಕೌಟುಂಬಿಕ ಸಮಾಧಾನ.
ತುಲಾ
ಬೇಕಾದುದೆಲ್ಲ ಇದೆ, ಆದರೂ ತೃಪ್ತಿ ಇಲ್ಲ ಎಂಬಂತಹ ಮನಸ್ಥಿತಿ.  ಅಧ್ಯಾತ್ಮದತ್ತ ಮನಸ್ಸು ವಾಲಬಹುದು. ಇಷ್ಟಬಂಧುವಿನ ಭೇಟಿ.
ವೃಶ್ಚಿಕ
ಕೆಲವು ಪ್ರಮುಖ ಕಾರ್ಯ ಬಾಕಿ ಉಳಿಸಿದ್ದೀರಿ. ಮೊದಲಿಗೆ ಅದನ್ನು ಮುಗಿಸಿರಿ. ಉದ್ಯೋಗದಲ್ಲಿ ನಿಮಗೆ ಪೂರಕ ಬೆಳವಣಿಗೆ.
ಧನು
ಮನೆ ಮತ್ತು ವೃತ್ತಿ ಕ್ಷೇತ್ರದಲ್ಲಿ ನಿಮಗೆ ಜವಾಬ್ದಾರಿ ಹೆಚ್ಚುವುದು. ಹಣದ ವ್ಯವಹಾರದಲ್ಲಿ ತೆಗೆದುಕೊಳ್ಳುವ ನಿರ್ಧಾರ ಉತ್ತಮ ಫಲ ನೀಡಲಿದೆ.
ಮಕರ
ಅಗತ್ಯಕ್ಕೆ ತಕ್ಕಂತೆ ಕ್ಷಿಪ್ರ ನಿರ್ಧಾರ ತಾಳುವಲ್ಲಿ ಸಫಲರಾಗುವಿರಿ. ಕೌಟುಂಬಿಕ ಭಿನ್ನಮತ ನಿವಾರಣೆ. ಬಂಧುವಿನ ಕಿರಿಕಿರಿ ಪರಿಹಾರ.
ಕುಂಭ
ವೃತ್ತಿಯಲ್ಲಿ ನಿಮ್ಮಿಂದ ತಪ್ಪು ಘಟಿಸಬಹುದು. ಎಚ್ಚರದಿಂದ ಕಾರ್ಯ ನಿರ್ವಹಿಸಿ. ಆತ್ಮೀಯರ ಅಸಹಕಾರದಿಂದ ಅಸಹನೆ ಹೆಚ್ಚುವುದು.
ಮೀನ
ಮನಸ್ಸಿನ ನೆಮ್ಮದಿ ಕಲಕಿದ್ದ ಸಮಸ್ಯೆಯೊಂದರ ಪರಿಹಾರ. ಚಿಂತೆ ಮಾಯ. ಇತರರ ಭಾವನೆ ಅರ್ಥ ಮಾಡಿಕೊಂಡು ವ್ಯವಹರಿಸಿರಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!