ಮೇಷ
ಹೆಚ್ಚು ಜವಾಬ್ದಾರಿ. ದಿನವಿಡೀ ಕೆಲಸ. ವೃತ್ತಿ ಸಂಬಂಧ ಪ್ರಯಾಣ ಸಂಭವ. ಆರ್ಥಿಕ ಅಡಚಣೆ ಮುಗಿದು ಹಣ ಹರಿವು ಶುರುವಾಗಲಿದೆ.
ವೃಷಭ
ಒತ್ತಡರಹಿತ ದಿನ. ಏಕಾಂಗಿಗಳಿಗೆ ಆಪ್ತ ಸ್ನೇಹಿತರು ಸಿಗಬಹುದು. ಸಂಗಾತಿ ಜತೆ ಸಣ್ಣ ವಾಗ್ವಾದವಾದರೂ ಒಲವು ಅದನ್ನು ಮರೆಸಲಿದೆ.
ಮಿಥುನ
ಪಾಸಿಟಿವ್ ಮನಸ್ಥಿತಿಯಿಂದ ದಿನ ಆರಂಭ. ಕಾರ್ಯ ಸಫಲ. ದಿನದಂತ್ಯಕ್ಕೆ ಸಂತೋಷ ಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ. ಧನಲಾಭ.
ಕಟಕ
ಉದ್ವೇಗ, ಆವೇಶ ನಿಯಂತ್ರಿಸಿ. ಕೆಲ ವಿಷಯಗಳಿಗೆ ಅತಿರೇಕದ ಪ್ರತಿಕ್ರಿಯೆ ಬಿಡಿ. ಕೌಟುಂಬಿಕ ಸಾಮರಸ್ಯಕ್ಕೆ ಹೆಚ್ಚು ಆದ್ಯತೆ ಕೊಡಿ.
ಸಿಂಹ
ಏನೋ ಕಳಕೊಂಡ ಭಾವ ಕಾಡಲಿದೆ. ಹತಾಶೆ. ಅತಿಯಾದ ಚಿಂತೆಯಿಂದ ತಲೆನೋವು ಸಂಭವ. ಸಮಚಿತ್ತ ಕಾಯುವುದು ನಿಮಗಿಂದು ಅಗತ್ಯ.
ಕನ್ಯಾ
ನಿಮ್ಮೊಳಗಿನ ಹತಾಶೆ ನಿಮ್ಮಿಂದ ಕಟು ಮಾತು ಹೊರಡಿಸಬಹುದು. ಇದರಿಂದ ಆತ್ಮೀಯ ಸಂಬಂಧಕ್ಕೆ ಧಕ್ಕೆ. ಬೆನ್ನು ನೋವು ಕಾಡಬಹುದು.
ತುಲಾ
ನಿಮ್ಮ ಮಾತಿನ ಕಲೆಯಿಂದ ಆಪ್ತರ ಮನ ಗೆಲ್ಲುವಿರಿ. ಆತ್ಮವಿಶ್ವಾಸ ಹೆಚ್ಚಳ. ಕೌಟುಂಬಿಕ ಬಿಕ್ಕಟ್ಟು ಸೌಹಾರ್ದ ಪರಿಹಾರ ಕಾಣಲಿದೆ.
ವೃಶ್ಚಿಕ
ವೃತ್ತಿ ಮತ್ತು ಖಾಸಗಿ ಬದುಕಲ್ಲಿ ಸಾಧಾರಣ ದಿನ. ಹೆಚ್ಚಿನದ್ದನ್ನು ನಿರೀಕ್ಷಿಸಬೇಡಿ. ವಾಗ್ವಾದ ದಿಂದ ದೂರವಿರಿ. ಹಳೆ ಹೂಡಿಕೆಯಿಂದ ಲಾಭ.
ಧನು
ಹೊಣೆಗಾರಿಕೆಯ ಭಾರದಿಂದ ಬಳಲುವಿರಿ. ನಿಮ್ಮ ಭಾವುಕ ಸ್ವಭಾವವು ಮಾನಸಿಕ ನೋವಿಗೆ ಕಾರಣವಾಗಲಿದೆ. ಆಪ್ತರ ಅಗಲಿಕೆಯ ಬೇಸರ.
ಮಕರ
ಗುರಿ ಸಾಧನೆಗೆ ಸೂಕ್ತ ದಿನ. ಅಂದುಕೊಂಡಂತೆ ನಡೆಯಲಿದೆ. ಸಂಗಾತಿ ಜತೆಗೆ ಅನವಶ್ಯ ಸಂಘರ್ಷ ದಲ್ಲಿ ತೊಡಗದಿರಿ. ಹೊಂದಾಣಿಕೆಯಿರಲಿ.
ಕುಂಭ
ಕೆಲ ವಿಚಾರ ಗಂಭೀರವಾಗಿ ಕಂಡರೂ ನಿಜವಾಗಿ ಹಾಗಿಲ್ಲ. ಸಮಾಧಾನದಿಂದ ವರ್ತಿಸಿರಿ. ಕೌಟುಂಬಿಕ ಸಾಮರಸ್ಯ ಕಾಯ್ದುಕೊಳ್ಳಿ.
ಮೀನ
ಈ ದಿನ ಕೆಲಸದಲ್ಲಿ ತಪ್ಪಾಗದಂತೆ ನೋಡಿಕೊಳ್ಳಿ. ಅಹಿತ ಸಂಭವಿಸಬಹುದು ಎಂದು ಗ್ರಹಗತಿ ಹೇಳುತ್ತಿದೆ. ಕುಟುಂಬದ ಸಹಕಾರ ಪಡೆಯಿರಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ