ಮೇಷ
ಉದ್ಯೋಗದಲ್ಲಿ ಮೂಡಿರುವ ಚಿಂತೆ ಬೇಗನೆ ಪರಿಹಾರ ಕಾಣಲಿದೆ. ಇಷ್ಟದೇವರ ಪ್ರಾರ್ಥನೆ ಮಾಡಿ. ಕೌಟುಂಬಿಕ ಸಹಕಾರ.
ವೃಷಭ
ಈ ದಿನ ನಿಮ್ಮಿಂದ ಹೆಚ್ಚಿನ ಪ್ರಯತ್ನ ಅಪೇಕ್ಷಿಸುತ್ತದೆ. ಗುರಿ ಸಾಧನೆಗೆ ಈಗಿನ ಪ್ರಯತ್ನ ಸಾಲದು. ತೊಡೆಯಲ್ಲಿ ನೋವು ಕಾಣಿಸೀತು.
ಮಿಥುನ
ನಿಮ್ಮ ಮೇಲೆ ನೀವೇ ಹೆಚ್ಚಿನ ಒತ್ತಡ ಹಾಕಿಕೊಳ್ಳುವಿರಿ. ಲಘು ವಿಚಾರಗಳನ್ನು ಗಂಭೀರ ವಾಗಿ ಪರಿಗಣಿಸುವುದೇ ಇದಕ್ಕೆ ಕಾರಣ.
ಕಟಕ
ನಿಮ್ಮ ಕಾರ್ಯದಲ್ಲಿ ಇಂದು ತೊಡಕು ಮೂಡಿ ಬರಲಿದೆ. ಸರಿಯಾಗಿ ನಿಭಾಯಿಸಿ. ಆತುರದ ಕ್ರಮ ಸಲ್ಲದು. ಆಪ್ತರ ಅವಗಣನೆ, ಬೇಸರ.
ಸಿಂಹ
ಕೆಲವರು ನಿಮ್ಮ ಪ್ರಾಮುಖ್ಯತೆಯನ್ನು ಅರಿವು ಮೂಡಿಸಲಿದ್ದಾರೆ. ನಿಮ್ಮ ಕುರಿತಾದ ಕೀಳರಿಮೆ ಬಿಡಿ. ಅನಾರೋಗ್ಯ ಇಂದು ಪರಿಹಾರ.
ಕನ್ಯಾ
ಪ್ರತಿಕೂಲ ಪರಿಸ್ಥಿತಿ ಎದುರಿಸುವಿರಿ. ನಿಮ್ಮ ದೈನಂದಿನ ವ್ಯವಹಾರ ಇದರಿಂದ ಕುಂಠಿತ ಆದೀತು. ಸಾಂಸಾರಿಕ ಸಾಮರಸ್ಯಕ್ಕೆ ಧಕ್ಕೆ.
ತುಲಾ
ಹಣಕ್ಕೆ ಸಂಬಂಽಸಿ ಪ್ರಮುಖ ನಿರ್ಧಾರ ತಾಳಲು ಸೂಕ್ತ ದಿನವಲ್ಲ. ಬಂಧುಗಳ ಜತೆ ಸಂಬಂಧ ಕೆಡಬಹುದು. ಅಪಾತ್ರರಿಗೆ ನೆರವು ನೀಡದಿರಿ.
ವೃಶ್ಚಿಕ
ಕೆಲಸದಲ್ಲಿ ಏರುಪೇರು ಎದುರಿಸುವಿರಿ. ತಾಳ್ಮೆಯಿಂದ ನಿಭಾಯಿಸಿ. ಹಿತಶತ್ರುಗಳ ಕುರಿತು ಎಚ್ಚರದಿಂದಿರಿ. ನಿಮ್ಮ ರಹಸ್ಯ ಬಿಟ್ಟುಕೊಡಬೇಡಿ.
ಧನು
ಕಳೆದ ಕೆಲ ದಿನಗಳಿಂದ ನಿಮ್ಮ ಘನತೆ ಹೆಚ್ಚುತ್ತಿದೆ. ಇದೇ ಮಟ್ಟ ಕಾಯ್ದುಕೊಳ್ಳಿ. ನಿಮ್ಮ ಜೀವನದ ಪ್ರಮುಖ ವ್ಯಕ್ತಿಯ ಭೇಟಿ ಸಂಭವ.
ಮಕರ
ಪ್ರೀತಿಪಾತ್ರರ ಜತೆ ಹೆಚ್ಚು ಕಾಲ ಕಳೆಯಿರಿ. ಭಿನ್ನಾಭಿಪ್ರಾಯ ನಿವಾರಿಸಲು ಇದು ಅವಶ್ಯ. ಸಣ್ಣ ಆರೋಗ್ಯ ಸಮಸ್ಯೆ ಕಾಣಿಸೀತು.
ಕುಂಭ
ಆರಂಭಿಸಿದ ಕಾರ್ಯ ಅರ್ಧದಲ್ಲೆ ಬಿಡಬೇಡಿ. ಭಾವುಕತೆ ನಿಮ್ಮನ್ನು ವಾಸ್ತವದಿಂದ ದೂರವಿರಿಸದಂತೆ ಎಚ್ಚರಿಕೆ ವಹಿಸಿರಿ.
ಮೀನ
ಸವಾಲಿನ ದಿನ. ಮನೆಯಲ್ಲೂ ವೃತ್ತಿಯಲ್ಲೂ ಹೊಣೆ ಹೆಚ್ಚಳ. ಇಷ್ಟವಿಲ್ಲದ ಪ್ರಯಾಣ ಸಂಭವ. ಸಂಗಾತಿ ಜತೆ ವಾಗ್ವಾದಕ್ಕೆ ಆಸ್ಪದ ಕೊಡಬೇಡಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ