ಮೇಷ
ಇತರರ ಜತೆ ವ್ಯವಹಾರದಲ್ಲಿ ಪ್ರಾಮಾಣಿಕವಾಗಿ ವರ್ತಿಸಿ. ಇಲ್ಲವಾದರೆ ಬಿಕ್ಕಟ್ಟಿಗೆ ಸಿಲುಕುವಿರಿ. ವೃತ್ತಿಯ ಬಿಕ್ಕಟ್ಟು ಪರಿಹಾರ.
ವೃಷಭ
ಪ್ರತಿಕೂಲ ಸನ್ನಿವೇಶ ಎದುರಿಸುವಿರಿ. ತಾಳ್ಮೆ ಮತ್ತು ವಿವೇಕದಿಂದ ವರ್ತಿಸಿ. ಮನೆಯಲ್ಲಿನ ಸಾಮರಸ್ಯ ಕಾಪಾಡಲು ಆದ್ಯತೆ ಕೊಡಿ.
ಮಿಥುನ
ಪ್ರಮುಖ ವ್ಯವಹಾರ ಕಾರ್ಯಗತ ಮಾಡುವ ಯೋಜನೆ ನಿಮ್ಮದಾಗಿದ್ದರೆ ತುಸು ಕಾಯಿರಿ. ಕಾಲ ಪ್ರಶಸ್ತವಾಗಿಲ್ಲ. ಕಟಕ
ಅನವಶ್ಯ ವಿಷಯ ಚಿಂತಿಸುತ್ತಾ ನೆಮ್ಮದಿ ಹಾಳು ಮಾಡಿಕೊಳ್ಳುವಿರಿ. ಯಶಸ್ಸಿನ ಹಾದಿ ನಿಮ್ಮ ಮುಂದಿದೆ. ಅದಕ್ಕೆ ಪೂರಕ ಹೆಜ್ಜೆಯಿಡಿ.
ಸಿಂಹ
ಹೆಚ್ಚುತ್ತಿರುವ ಖರ್ಚು ಚಿಂತೆಗೆ ಕಾರಣವಾಗುತ್ತದೆ. ಖರ್ಚು ಕಡಿಮೆ ಮಾಡುವ ಯತ್ನ ಸದ್ಯಕ್ಕೆ -ಲಿಸದು. ಕೌಟುಂಬಿಕ ಸಹಕಾರ ಪಡೆದುಕೊಳ್ಳಿ.
ಕನ್ಯಾ
ಪ್ರಮುಖ ಕಾರ್ಯಕ್ಕೆ ಬಂಧು ನೆರವು. ವೃತ್ತಿಯಲ್ಲಿ ಗೌರವಾದರ ಗಳಿಸುವಿರಿ. ಹೂಡಿಕೆಯಿಂದ ಲಾಭ. ಸಂಗಾತಿ ಜತೆ ವಿರಸ.ಸಹನೆಯ ನಡೆ ಅಗತ್ಯ.
ತುಲಾ
ನಿಮ್ಮ ಸಂತೋಷ ಹಾಳು ಮಾಡುವ ಬೆಳವಣಿಗೆ ಉಂಟಾದೀತು. ಅದಕ್ಕೆ ಇತರರು ಕಾರಣರಾಗುತ್ತಾರೆ. ಸಂಯಮದಿಂದ ವರ್ತಿಸಿ.
ವೃಶ್ಚಿಕ
ಉತ್ಸಾಹದ ದಿನ. ಉದ್ಯೋಗ ಬಯಸುವವರಿಗೆ ಪೂರಕ ಬೆಳವಣಿಗೆ. ಆರ್ಥಿಕ ಸಂಕಷ್ಟ ನೀಗಿ ಧನಪ್ರಾಪ್ತಿ ಕೌಟುಂಬಿಕ ಸಹಕಾರ.
ಧನು
ತಲೆನೋವು ಅಥವಾ ಅಜೀರ್ಣದ ಸಮಸ್ಯೆ ಉಂಟಾದೀತು. ಉತ್ಸಾಹ ಕುಂದಲಿದೆ. ಕುಟುಂಬ ಸದಸ್ಯರ ಭಾವನೆ ಅರ್ಥೈಸಿ ಅದಕ್ಕೆ ಸ್ಪಂದಿಸಿ.
ಮಕರ
ಯಾರದೋ ವಿಷಯದಲ್ಲಿ ಹಸ್ತಕ್ಷೇಪ ನಡೆಸಲು ಹೋಗಿ ಕೈಸುಟ್ಟುಕೊಳ್ಳದಿರಿ. ಆಪ್ತರಿಂದ ಟೀಕೆ ಕೇಳುವಿರಿ. ಧನವ್ಯಯ ಅಧಿಕ.
ಕುಂಭ
ಕಾರ್ಯ ಸಾಧನೆಗೆ ಸುಲಭ ದಾರಿ ಸಿಗದು. ವ್ಯವಹಾರದಲ್ಲಿ ಅಡ್ಡಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹೊಟ್ಟೆ ಸಮಸ್ಯೆ ಉಂಟಾದೀತು.
ಮೀನ
ಹೆಚ್ಚು ಹೊಣೆಗಾರಿಕೆ. ಅದನ್ನು ನಿಭಾಯಿಸಲು ಕಷ್ಟವಾದೀತು. ಸಾಂಸಾರಿಕ ಸಮಸ್ಯೆಯಿಂದ ಉತ್ಸಾಹ ನಷ್ಟ. ಆಪ್ತರಿಂದ ಆರ್ಥಿಕ ನೆರವು ಯಾಚನೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ