ದಿನಭವಿಷ್ಯ: ಕೋಣೆಯೊಳಗಿನ ಕೆಲಸವೊಂದೇ ಜೀವನವಲ್ಲ, ಹೊರಬಂದು ಸಂತೋಷ ಅನುಭವಿಸಿ

ಮೇಷ
ಮುಂದಿನ ದಿನಗಳಲ್ಲಿ ಒತ್ತಡ ಹೆಚ್ಚಲಿದೆ. ಕುಟುಂಬಸ್ಥರಿಗೆ ಇಷ್ಟವೆನಿಸುವ ಕಾರ್ಯ ಎಸಗಿ. ಮಕ್ಕಳ  ಆರೋಗ್ಯದ ಬಗ್ಗೆ ಗಮನ ಹರಿಸಿರಿ.

ವೃಷಭ
ಲೌಕಿಕದಿಂದ ದೂರವಾದ ಚಿಂತನೆ ಹುಟ್ಟಿಕೊಂಡೀತು.  ನಿಮ್ಮ ಸಮಸ್ಯೆಗೆ ಪರಿಹಾರ ನಿಮ್ಮಲ್ಲೇ ಇದೆ. ಬೇರೆಯವರನ್ನು ಅದಕ್ಕೆ ಬೊಟ್ಟು ಮಾಡದಿರಿ.

ಮಿಥುನ
ಪ್ರೀತಿ ತುಂಬಿದ ದಿನವಿದು. ಪ್ರೀತಿಪಾತ್ರರ ಇಷ್ಟದಂತೆ ನಡಕೊಳ್ಳಿ. ಶಾಪಿಂಗ್ ಸಾಧ್ಯತೆಯಿದೆ. ಖರ್ಚು ಹೆಚ್ಚಿದರೂ ಅದು ದೊಡ್ಡ ವಿಷಯವೆನಿಸದು.

ಕಟಕ
ಸಾಹಸಮಯ  ಕೆಲಸಕ್ಕೆ ಮನಸ್ಸು ಮುಂದಾದೀತು. ಪಿಕ್‌ನಿಕ್ ಸಾಧ್ಯತೆ. ಹೊಸ ವ್ಯಕ್ತಿಯೊಬ್ಬರು ನಿಮ್ಮ ಜೀವನ ಪ್ರವೇಶಿಸಬಹುದು.

ಸಿಂಹ
ಏನೆಲ್ಲ ಮಾಡಬೇಕು ಎಂದು ಭಾವಿಸಿದ್ದೀರೋ ಅದನ್ನೆಲ್ಲ ಪೂರೈಸಿ. ಇನ್ನೂ ಅವನ್ನು ಬಾಕಿ ಇರಿಸಿಕೊಳ್ಳುವುದು ತರವಲ್ಲ. ವದಂತಿ ನಂಬಬೇಡಿ.

ಕನ್ಯಾ
ಅದೃಷ್ಟದ ದಿನ. ನಿಮ್ಮ ಸಮಸ್ಯೆಗಳಿಗೆ ಪರಿಹಾರದ ದಾರಿ ತೋರುವುದು. ಆತ್ಮವಿಶ್ವಾಸ ಹೆಚ್ಚಳ. ಪ್ರೀತಿಪಾತ್ರರ ಜತೆ ಕಾಲಕ್ಷೇಪ.  ಧನಲಾಭ ಸಂಭವ.

ತುಲಾ
ಭಾವನಾತ್ಮಕವಾಗಿ ನಿಮಗೆ ಹರ್ಷ ತರುವ ಬೆಳವಣಿಗೆ. ಸ್ನೇಹಿತರು, ಕುಟುಂಬಸ್ಥರು ಇಂದು ನಿಮ್ಮ ಜತೆಗೆ ಇರುತ್ತಾರೆ. ಪ್ರೀತಿಯ ವಿಷಯದಲ್ಲಿ  ಶುಭ ಬೆಳವಣಿಗೆ.

ವೃಶ್ಚಿಕ
ಹಣದ ವಿಚಾರದಲ್ಲಿ ಮುಖ್ಯ ನಿರ್ಧಾರ ತಳೆಯಲು ಹಿಂಜರಿಕೆ ಬೇಡ. ನಿಮಗೆ ಒಳಿತಾಗುವುದು. ಆಪ್ತರ ಜತೆ ಮೋಜಿನ ಕಾಲ ಕಳೆಯುವಿರಿ.

ಧನು
ಕೋಣೆಯೊಳಗಿನ ಕೆಲಸದಿಂದ ವಿರಾಮ ಪಡೆದು ಹೊರಗಿನ ಸಂತೋಷ ಅನುಭವಿಸಿ. ಎಲ್ಲ ಚಿಂತೆ ಮರೆತು ನಿರಾಳವಾಗಿರಿ. ಬಂಧುಗಳ ಒಡನಾಟ.

ಮಕರ
ಆದಾಯದ  ಹೊಸ ಮೂಲದಿಂದ ಅನಿರೀಕ್ಷಿತ ಧನವೃದ್ಧಿ. ಆರೋಗ್ಯ ಸಮಸ್ಯೆ ಇದ್ದರೆ ಅದನ್ನು ಕಡೆಗಣಿಸಬೇಡಿ. ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.

ಕುಂಭ
ಆತ್ಮವಿಶ್ವಾಸ ಒಳಿತು. ಆದರೆ ದುರಭಿಮಾನ ಬೇಡ. ನಿಮ್ಮ ದೃಷ್ಟಿಕೋನ ಇತರರ ಮೇಲೆ ಹೇರಲು ಹೋಗಬೇಡಿ. ವ್ಯವಹಾರದಲ್ಲಿ ವಿನಯ ಒಳ್ಳೆಯದು.

ಮೀನ
ಸಹೋದ್ಯೋಗಿಯಿಂದ ಸಮಸ್ಯೆ ಸಂಭವ. ವಾದಕ್ಕೆ ಇಳಿಯದಿರಿ. ಹಾಗೆಂದು ನಿಮ್ಮ ನಿಲುವಿನಿಂದ ಸಡಿಲಿಕೆ ಬೇಡ. ಹಿತಮಿತ ಆಹಾರ ಸೇವಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!