ಮೇಷ
ಖಾಸಗಿ ಮತ್ತು ವೃತ್ತಿ ಬದುಕಲ್ಲಿ ಹೊಸ ಬೆಳವಣಿಗೆ. ಅದು ನಿಮಗೆ ಪೂರಕವಾಗಲಿದೆ. ಆಪ್ತರ ಆರೋಗ್ಯ ಸುಧಾರಣೆ. ಖರ್ಚು ನಿಯಂತ್ರಣ.
ವೃಷಭ
ನಿಮ್ಮ ಸಾಧನೆ ಎಲ್ಲರ ಗಮನ ಸೆಳೆಯಲಿದೆ. ಹೂಡಿಕೆಯಿಂದ ಲಾಭ. ಆರೋಗ್ಯ ಸುಧಾರಣೆ. ಖರ್ಚು ಕಡಿಮೆ ಮಾಡಲು ಆದ್ಯ ಗಮನ ಕೊಡಿ.
ಮಿಥುನ
ಎಲ್ಲವೂ ಇಂದು ಸುಗಮವಾಗಿ ಸಾಗುವುದು. ವಿರೋಧ ಕೊನೆಗಾಣಲಿದೆ. ದೈಹಿಕ ಸ್ವಾಸ್ಥ್ಯ ತೃಪ್ತಿಕರ. ಖರ್ಚು ನಿಯಂತ್ರಿಸುವಿರಿ.
ಕಟಕ
ಎಲ್ಲಾ ವಿಷಯಗಳಲ್ಲಿ ಇಂದು ನಿಮಗೆ ಸುದಿನ. ಕಾರ್ಯೋತ್ಸಾಹ ಹೆಚ್ಚು. ಕೌಟುಂಬಿಕ ಸಂತೃಪ್ತಿ. ಮಕ್ಕಳ ಸಾಧನೆ ಸಂಭ್ರಮ ತರಲಿದೆ.
ಸಿಂಹ
ದಿನವು ನಿಮಗೆ ಪೂರಕವಾಗಿ ಸಾಗಬೇಕಾದರೆ ನಿಮ್ಮಿಂದ ಪ್ರಯತ್ನ ಅಗತ್ಯ. ಸುಮ್ಮಗೆ ಕೂತರೆ ಯಾವುದೇ ಒಳಿತಾಗದು.
ಕನ್ಯಾ
ನಿಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸಲು ಮರೆಯದಿರಿ. ಇಲ್ಲವಾದರೆ ಇಕ್ಕಟ್ಟಿಗೆ ಸಿಲುಕುವಿರಿ. ಹಳೆಯ ಹೂಡಿಕೆಯ ಲಾಭ ಸಿಗಲಿದೆ.
ತುಲಾ
ದೃಢತೆ ಹೊಂದಿದ್ದರೆ ಯಶ ಪಡೆಯುವಿರಿ. ಹಿಂಜರಿದರೆ ಹಿನ್ನಡೆ ಕಾಣುವಿರಿ. ಹಾಗಾಗಿ ಯೋಚಿಸಿ ಮುನ್ನಡೆಯಿರಿ. ಅಲರ್ಜಿ ಸಮಸ್ಯೆ ಸಂಭವ.
ವೃಶ್ಚಿಕ
ಎಂದಿಗಿಂತ ಹೆಚ್ಚಿನ ಹಿನ್ನಡೆ ಎದುರಿಸುವಿರಿ. ಇದು ನಿಮ್ಮನ್ನು ಸುಸ್ತು ಮಾಡಲಿದೆ. ತಾಳ್ಮೆಯಿಂದ ವ್ಯವಹರಿಸುವುದು ಅವಶ್ಯ. ಕೌಟುಂಬಿಕ ಉದ್ವಿಗ್ನತೆ.
ಧನು
ನಿಮಗೆ ವಹಿಸಿದ ಕಾರ್ಯ ಸಕಾಲದಲ್ಲಿ ಪೂರೈಸುವಿರಿ. ಹಣಕಾಸು ಪರಿಸ್ಥಿತಿ ತೃಪ್ತಿಕರ. ನಿಮ್ಮ ಸಾಮರ್ಥ್ಯದ ಅನಾವರಣಕ್ಕೆ ಅವಕಾಶ.
ಮಕರ
ನಿಮ್ಮ ಕಾರ್ಯಶೈಲಿ ಟೀಕೆಗೆ ಗುರಿಯಾಗಲಿದೆ. ಅನವಶ್ಯ ವಿಚಾರದಲ್ಲಿ ಕುಟುಂಬದ ಜತೆ ಚರ್ಚೆ ಮಾಡದಿರಿ. ವಿವಾಹ ಪ್ರಸ್ತಾಪ ಸಫಲತೆ ಕಾಣಲಿದೆ.
ಕುಂಭ
ಪ್ರತಿ ವಿಷಯದಲ್ಲಿ ಎಚ್ಚರಿಕೆ ವಹಿಸಿರಿ. ಅನವಶ್ಯ ವಿವಾದ ಸುತ್ತಿಕೊಳ್ಳಬಹುದು. ನಡೆನುಡಿಯಲ್ಲಿ ಜಾಗ್ರತೆ ವಹಿಸಿರಿ.
ಮೀನ
ಉತ್ಸಾಹದ ದಿನ. ಸಮಸ್ಯೆ ಕಳೆದು ನಿರಾಳತೆ. ಆತ್ಮೀಯರ ಜತೆ ಸಮಯ ಕಳೆಯಲು ಅವಕಾಶ. ಆಹಾರ ಹಿತಮಿತ ಆಗಿರಲಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ