ಮೇಷ
ಕುಟುಂಬದಲ್ಲಿ ಉದ್ವಿಗ್ನ ಸ್ಥಿತಿ ಮೂಡಿದ್ದರೆ ಮೊದಲು ಅದನ್ನು ಸರಿಪಡಿಸಿ. ವೃತ್ತಿಯಲ್ಲಿ ಉನ್ನತಿ ಪಡೆಯುವ ಹಾದಿ ಕಠಿಣವೆನಿಸಲಿದೆ.
ವೃಷಭ
ನಿಮ್ಮ ಸುತ್ತಲಿರುವ ಮಂದಿ ಕಣ್ಣಿಗೆ ಕಂಡಂತಲ್ಲ. ಕೆಲವರಲ್ಲಿ ದುರುದ್ದೇಶ ಇರಬಹುದು. ಅವರ ಜತೆ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿರಿ. ಧನವ್ಯಯ.
ಮಿಥುನ
ಸಂಗಾತಿ ಜತೆ ತಪ್ಪಭಿಪ್ರಾಯ ಉಂಟಾದೀತು. ವೃತ್ತಿಯಲ್ಲಿ ಕಠಿಣ ಗುರಿ ಸಾಧಿಸುವಿರಿ. ಹಿತಕರ ಆಹಾರವಷ್ಟೆ ಸೇವಿಸಿ. ಖರ್ಚು ಕಡಿಮೆ.
ಕಟಕ
ನಿಮ್ಮ ಮೌನ ಧೋರಣೆಯಿಂದಾಗಿ ಮನೆಯಲ್ಲಿ ತಪ್ಪು ಭಾವನೆ ಉಂಟಾದೀತು. ಮುಕ್ತವಾಗಿ ಮಾತನಾಡಿ, ಪರಿಸ್ಥಿತಿ ತಿಳಿಗೊಳಿಸಿ.
ಸಿಂಹ
ಆರ್ಥಿಕ ಸ್ಥಿರತೆ. ಆತ್ಮೀಯರ ಜತೆ ಸಂಬಂಧ ಸ್ಥಿರ. ತಪ್ಪಭಿಪ್ರಾಯ ನಿವಾರಣೆ. ವೃತ್ತಿಯಲ್ಲಿ ಒತ್ತಡ ಹೆಚ್ಚಿದರೂ ಅದನ್ನು ನಿಭಾಯಿಸುವಿರಿ.
ಕನ್ಯಾ
ವಸ್ತು ಅಥವಾ ಆಸ್ತಿ ಖರೀದಿ ಯೋಜನೆ ಫಲಿಸಲಿದೆ. ಹವಾಮಾನ ಸಂಬಂಧ ಅನಾರೋಗ್ಯ ಕಾಡಬಹುದು. ಹಣಕಾಸು ಸಮಸ್ಯೆ ಪರಿಹಾರ.
ತುಲಾ
ಮನೆಯವರ ಭಾವನೆ ಅರಿತುಕೊಳ್ಳಿ. ಸಣ್ಣಪುಟ್ಟ ಸಂಘರ್ಷದಲ್ಲಿ ತೊಡಗದಿರಿ. ಅಽಕ ಒತ್ತಡದ ಹೊರತಾಗಿಯೂ ಕಾರ್ಯ ಸಾಧಿಸುವಿರಿ.
ವೃಶ್ಚಿಕ
ಮಾತಿನ ಚಕಮಕಿ ನಡೆದೀತು. ನಿಮ್ಮ ತಾಳ್ಮೆ ಕಳಕೊಳ್ಳದಿದ್ದರೆ ಎಲ್ಲ ಶಾಂತವಾಗುವುದು. ವಿದ್ಯಾರ್ಥಿಗಳು ಜಡತ್ವ ತ್ಯಜಿಸಬೇಕು.
ಧನು
ಕುಟುಂಬದಲ್ಲಿ ಉತ್ತಮ ಹೊಂದಾಣಿಕೆ. ಹಾಗಾಗಿ ಯಾವುದೇ ಅಪಸ್ವರ ಏಳದು. ವೃತ್ತಿಯಲ್ಲಿ ಮಾತ್ರ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾದೀತು.
ಮಕರ
ನಿಮ್ಮ ಸುತ್ತ ಶಾಂತ ವಾತಾವರಣ ಕಾಪಾಡಲು ಕೋಪ ನಿಯಂತ್ರಣ ಅವಶ್ಯ. ಸಂಧಿ ನೋವು ಕಾಡಬಹುದು. ಹಣಕಾಸು ಒತ್ತಡ ಹೆಚ್ಚಲಿದೆ.
ಕುಂಭ
ಸಮಯದಲ್ಲಿ ಕಾರ್ಯ ಮುಗಿಸಲು ಕಷ್ಟ ಪಡುವಿರಿ. ಆದರೂ ದಿನದ ಅಂತ್ಯಕ್ಕೆ ತೃಪ್ತಿ ಕಾಣುವಿರಿ. ವಿದ್ಯಾರ್ಥಿಗಳಿಗೆ ಯಶಸ್ಸು ದೊರಕಲಿದೆ.
ಮೀನ
ಸಂಗಾತಿ ಜತೆ ಸೌಹಾರ್ದ ಸಂಬಂಧ ಉಳಿಯಬೇಕೆ, ಪ್ರಾಮಾಣಿಕವಾಗಿ ವರ್ತಿಸಿ. ಕೆಲಸದಲ್ಲಿ ಟೀಕೆ ಎದುರಿಸುವಿರಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ