ಮೇಷ.
ಕೆಲಸದಲ್ಲಿ ಏಕಾಗ್ರತೆ ತಪ್ಪಿ ನಿಮ್ಮಿಂದ ತಪ್ಪು ಉಂಟಾದೀತು, ಎಚ್ಚರ. ಸಂಗಾತಿ ಜತೆಗೆ ವಿರಸ ಸಂಭವ. ಅಧಿಕ ಖರ್ಚಿಗೆ ಕಡಿವಾಣ ಹಾಕಿರಿ.
ವೃಷಭ
ವೃತ್ತಿಯಲ್ಲಿ ಉನ್ನತಿ. ಹೊಸತನಕ್ಕೆ ಹಾತೊರೆಯುವಿರಿ. ಆದರೆ ಖಾಸಗಿ ಬದುಕಲ್ಲಿ ಹಿನ್ನಡೆ ಉಂಟಾದೀತು. ಹೊಂದಾಣಿಕೆ ಮುಖ್ಯ.
ಮಿಥುನ
ನಿಮ್ಮ ಸ್ಪರ್ಧಿಗಳು ಉನ್ನತಿ ಸಾಧಿಸುವರು. ಇದು ನಿಮಗೆ ಸಮಸ್ಯೆ ಸೃಷ್ಟಿಸಲಿದೆ. ಆತ್ಮೀಯರ ಬೇಕುಬೇಡಗಳಿಗೆ ಹೆಚ್ಚಿನ ಗಮನ ಕೊಡಬೇಕು.
ಕಟಕ
ದಿನವಿಡೀ ಕೆಲಸದ ಒತ್ತಡ. ಹಿರಿಯರು ನಿಮ್ಮಿಂದ ಹೆಚ್ಚಿನದ್ದನ್ನು ನಿರೀಕ್ಷಿಸುತ್ತಾರೆ. ದಿನದ ಅಂತ್ಯಕ್ಕೆ ತೃಪ್ತಿ ಕಾಣುವಿರಿ. ಆರೋಗ್ಯ ಸುಸ್ಥಿರ.
ಸಿಂಹ
ಸಂಬಂಧದಲ್ಲಿ ಮೂಡಿದ್ದ ತೊಡಕು ನಿವಾರಣೆ. ಸೌಹಾರ್ದತೆ. ಉಪಯುಕ್ತ ಕಾರ್ಯಕ್ಕೆ ಹಣ ವ್ಯಯಿಸಲು ಹಿಂಜರಿಕೆ ಬೇಡ.
ಕನ್ಯಾ
ವೃತ್ತಿಯಲ್ಲಿ ತೃಪ್ತಿಕರ ಬೆಳವಣಿಗೆ. ಸಂಗಾತಿ ಜತೆಗೆ ಚಕಮಕಿ ನಡೆದರೂ ಅದು ಅಲ್ಪಕಾಲೀನ. ಇದು ಸಂಬಂಧ ಗಟ್ಟಿ ಮಾಡಲು ನೆರವಾಗುವುದು.
ತುಲಾ
ಕಾರ್ಯ ವಿಳಂಬ. ತಾಳ್ಮೆ ಅವಶ್ಯ. ಒಲವು ಗಳಿಕೆಗೆ ಹೊಂದಾಣಿಕೆ ಅವಶ್ಯ. ಭಾವುಕತೆ ನಿಯಂತ್ರಿಸಿ. ಚರ್ಮದ ಅಲರ್ಜಿ ಕಾಣಿಸೀತು.
ವೃಶ್ಚಿಕ
ಫಲಪ್ರದ ದಿನ. ಕಾಲಹರಣ ಮಾಡದಿರಿ. ಅನಿರೀಕ್ಷಿತ ಖರ್ಚು ಬರಬಹುದು. ಏಕಾಂಗಿಗಳಿಗೆ ಸಂಗಾತಿ ದೊರಕಬಹುದು.
ಧನು
ನಿಮ್ಮ ಕೆಲಸವಾಗಲು ಹೆಚ್ಚುವರಿ ಶ್ರಮ ಬೇಕು. ನಿರ್ಲಕ್ಷ್ಯ ತೋರದಿರಿ. ಕೌಟುಂಬಿಕ ಬೆಂಬಲ ವಿಶ್ವಾಸ ಹೆಚ್ಚಿಸುವುದು. ಸೀಮಿತ ಧನಪ್ರಾಪ್ತಿ.
ಮಕರ
ಇಂದು ಏಳುಬೀಳು ಎರಡನ್ನೂ ಕಾಣುವಿರಿ. ವೃತ್ತಿ ಕ್ಷೇತ್ರದ ರಾಜಕೀಯ ರೇಜಿಗೆ ತರುವುದು. ಖಾಸಗಿ ಬದುಕಲ್ಲಿ ಹುಳಿ ಹಿಂಡಲು ಕೆಲವರ ಯತ್ನ.
ಕುಂಭ
ವೃತ್ತಿಯಲ್ಲಿ ಪ್ರತಿಕೂಲ ದಿನ. ಎರಡೆರಡು ಬಾರಿ ಯೋಚಿಸಿ ಕಾರ್ಯ ಎಸಗಿ. ಮನಸ್ತಾಪವನ್ನು ಮುಕ್ತ ಮಾತುಕತೆಯಿಂದ ಪರಿಹರಿಸಿಕೊಳ್ಳಿ.
ಮೀನ
ಹೆಚ್ಚು ಪ್ರಗತಿ ಕಾಣದ ದಿನ. ದಿನವಿಡೀ ಅಸಹನೀಯತೆ ಕಾಡಲಿದೆ. ಸಂಗಾತಿ ಜತೆಗೆ ಮನಸ್ತಾಪ. ಆರ್ಥಿಕ ಪರಿಸ್ಥಿತಿ, ಸ್ಥಿರ. ಉಳಿತಾಯ ಹೆಚ್ಚಿಸಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ