ಮೇಷ.
ಖಾಸಗಿ ಬದುಕಲ್ಲಿ ಮಹತ್ವದ ಬೆಳವಣಿಗೆ. ಪ್ರೀತಿಯಲ್ಲಿ ಯಶಸ್ಸು. ಕೌಟುಂಬಿಕ ಸಾಮರಸ್ಯ. ಉದ್ಯೋಗ ಸಮಾಧಾನ. ಆರ್ಥಿಕ ತೃಪ್ತಿ.
ವೃಷಭ
ಎಲ್ಲಾ ದಿನಗಳು ಒಂದೇ ಸಮನಲ್ಲ. ಏರುಪೇರು ಇದ್ದುದೆ. ಈ ವಾಸ್ತವತೆ ಅರಿತರೆ ನೀವು ನೆಮ್ಮದಿ ಕಂಡುಕೊಳ್ಳಲು ಸಾಧ್ಯ. ಆರ್ಥಿಕ ಸ್ಥಿರತೆ.
ಮಿಥುನ
ಕಠಿಣ ಶ್ರಮಕ್ಕೆ ಎಂದೂ ಉತ್ತಮ -ಲವಿದೆ. ಅದು ನಿಮಗೆ ಅರಿವಿಗೆ ಬರಲಿದೆ. ಶಾಪಿಂಗ್‌ಗೆ ಅತಿಯಾಗಿ ಖರ್ಚು ಮಾಡಬೇಡಿ.
ಕಟಕ
ವೃತ್ತಿಯಲ್ಲಿ ಕಚೇರಿ ರಾಜಕೀಯದಿಂದ ದೂರ ಇರಿ. ದಂಪತಿ ಮಧ್ಯೆ ಕಲಹವಾದೀತು. ಹೊಟ್ಟೆ ಸಂಬಂಽ ಅನಾರೋಗ್ಯ ಕಾಡಬಹುದು.
ಸಿಂಹ
ಕೆರಿಯರ್‌ಗೆ ಸಂಬಂಽಸಿ ಪೂರಕ ಬೆಳವಣಿಗೆ. ಇಂದು ಸಾಲ ಕೊಡಲು ಹೋಗಬೇಡಿ. ತಿರುಗಿ ಬಾರದು. ದಂಪತಿ ಮಧ್ಯೆ ಸಾಮರಸ್ಯ ಅವಶ್ಯ.
ಕನ್ಯಾ
ನಿಮ್ಮ ಸಹನೆ ಪರೀಕ್ಷಿಸುವ ಪರಿಸ್ಥಿತಿ ಏರ್ಪಡಲಿದೆ. ಸಂಬಂಧದ ಮೌಲ್ಯ ಅರಿಯಿರಿ. ಖಾಸಗಿ ವಿಷಯ ಎಲ್ಲರಲ್ಲೂ ಹೇಳಬೇಡಿ.
ತುಲಾ
ನಿಮ್ಮ ಭಾವನೆ ಬುದ್ಧಿವಂತಿಕೆಯಿಂದ ವ್ಯಕ್ತಪಡಿಸಿ. ತಪ್ಪರ್ಥ ಮೂಡದಂತೆ ನೋಡಿ. ಅನಾರೋಗ್ಯ ನಿವಾರಣೆ. ಆಧ್ಯಾತ್ಮಿಕ ಒಲವು.
ವೃಶ್ಚಿಕ
ವೃತ್ತಿಯಲ್ಲಿ ಶ್ಲಾಘನೆ. ಧನಪ್ರಾಪ್ತಿ. ಹಳೆಯ ಹೂಡಿಕೆಯಲ್ಲಿ ಲಾಭ ಸಿಗಲಿದೆ. ಕೌಟುಂಬಿಕ ಸಾಮರಸ್ಯದಿಂದ ಒತ್ತಡ ನಿವಾರಣೆ.
ಧನು
ಕೌಟುಂಬಿಕ ವಿಚಾರದಲ್ಲಿ ಜಿಗುಟು ನಿಲುವು ಬಿಡಿ. ಕೌಟುಂಬಿಕ ಶಾಂತಿ ಹಾಳಾದೀತು. ಆಪ್ತರ ಜತೆ ಚಿಂತೆ ಹಂಚಿಕೊಂಡರೆ ನಿರಾಳತೆ.
ಮಕರ
ನಿಮ್ಮ ಸುತ್ತಲಿನ ಜನರನ್ನು ಪ್ರಭಾವಿಸುವಿರಿ. ಎಷ್ಟೇ ಚಿಂತೆ ಇದ್ದರೂ ಉತ್ಸಾಹದಿಂದ ನಡಕೊಳ್ಳಿ. ಗುಣಾತ್ಮಕ ಚಿಂತನೆ ಬದಲಾವಣೆ ತರಲಿದೆ.
ಕುಂಭ
ಸುಲಭದಲ್ಲಿ ಉತ್ಸಾಹ ಕಳಕೊಳ್ಳದಿರಿ. ಸಣ್ಣ ಹಿನ್ನಡೆಗೆ ಅಂಜದಿರಿ. ಮನೆಯಲ್ಲಿ ಶಾಂತಿ, ಸೌಹಾರ್ದ ನೆಲೆಸಲಿದೆ. ಆರ್ಥಿಕ ಸ್ಥಿರತೆ.
ಮೀನ
ಆಪ್ತರು ನಿಮ್ಮ ಮನಸ್ಸನ್ನು ಅರಿಯುತ್ತಿಲ್ಲ ಎಂಬ ಬೇಸರ ಕಾಡಲಿದೆ. ಅವರಿಗೆ ಅರ್ಥ ಮಾಡಿಕೊಡಲು ಯತ್ನಿಸಿ. ಆರ್ಥಿಕ ಉನ್ನತಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ