ದಿನಭವಿಷ್ಯ: ಇಂದು ನಿಮಗೆ ಪೂರಕ ದಿನವಾಗಿದೆ, ಎಲ್ಲ ಇಷ್ಟಾರ್ಥ ಸಿದ್ಧಿಯಾಗಲಿದೆ

ಮೇಷ
ವೃತ್ತಿ ಕ್ಷೇತ್ರದಲ್ಲಿ ನಿಮ್ಮ ವಿರುದ್ಧ ವದಂತಿ ಹರಡಬಹುದು, ಎಚ್ಚರವಿರಿ.  ನಿಮ್ಮ ಕೆಲವು ವಿಷಯಗಳಲ್ಲಿ ಗೌಪ್ಯತೆ ಕಾಪಾಡಿರಿ.
ವೃಷಭ
ಯಾವುದೋ ಶುಭ ಸುದ್ದಿ ಕೇಳಲು ಕಾತರರಾಗಿರುವಿರಿ. ಅದು ಇಂದು ಸಿಗಬಹುದು. ಮನೆಯಲ್ಲಿ ಸ್ವಲ್ಪ ಮಟ್ಟಿನ ಉದ್ವಿಗ್ನತೆ ಸೃಷ್ಟಿ.
ಮಿಥುನ
ಗ್ರಹಗತಿ ಇಂದು ನಿಮಗೆ ಸುಗಮ ದಿನವನ್ನು ಸೂಚಿಸುತ್ತಿದೆ. ವೃತ್ತಿಯಲ್ಲಿ ಮನೆಯಲ್ಲಿ ನೀವು ಬಯಸಿದಂತೆ ಸಾಗುವುದು.
ಕಟಕ
ಕೆಲವಾರು ಬೆಳವಣಿಗೆ ಇಂದು ಸಂಭವಿಸಬಹುದು. ನಿಮಗೆ ಅದು ಒಳಿತೂ ಕೆಡುಕೂ ಎರಡನ್ನೂ ತರಬಹುದು.
ಸಿಂಹ
ನಿಮಗೆ ಪೂರಕ ದಿನ. ಇಷ್ಟಾರ್ಥ ಸಿದ್ಧಿ. ವಿಶೇಷ ಕಾರ್ಯ ಮಾಡಲು ಸುದಿನ. ಆಪ್ತರಿಂದ ಧನಸಹಾಯ ಸಿಗಬಹುದು.
ಕನ್ಯಾ
ನಡೆನುಡಿಯಲ್ಲಿ ಸಂಯಮ ಸಾಧಿಸಿ. ಇಲ್ಲವಾದರೆ ಸಂಘರ್ಷ ನಡೆದೀತು. ದಂಪತಿ ಮಧ್ಯೆ ವಿರಸ ಸಂಭವ. ಖರ್ಚು ಹೆಚ್ಚುವುದು.
ತುಲಾ
ಗೊಂದಲದ ಮನಸ್ಥಿತಿ. ತುರ್ತು ನಿರ್ಧಾರ ತಾಳಬೇಕಾದ ಅನಿವಾರ್ಯತೆ. ಸಮಸ್ತರ ಹಿತ ಕಾಪಾಡುವಂತಿರಲಿ ನಿಮ್ಮ ನಿರ್ಧಾರ.
ವೃಶ್ಚಿಕ
ಒತ್ತಡವನ್ನೆಲ್ಲ ಮರೆತುಬಿಡಿ. ಈ ದಿನ ಆನಂದಿಸಲು ಇರುವುದು. ಆಪ್ತರೊಂದಿಗೆ ದಿನ ಕಳೆಯಿರಿ. ವ್ಯವಹಾರದಲ್ಲಿ ಆರ್ಥಿಕ ಲಾಭ.
ಧನು
ಒಬ್ಬರನ್ನು ಮೆಚ್ಚಿಸುವ ಉದ್ದೇಶ ನಿಮ್ಮದು.  ಅದಕ್ಕೆ ತಕ್ಕಂತೆ ಕಾರ್ಯಾಚರಿಸಿ. ಎಡವಟ್ಟು ಮಾಡದಿರಿ.  ಬಂಧುಗಳ ಸಹಕಾರ. ಧನಪ್ರಾಪ್ತಿ.
ಮಕರ
ಮಾತಿನಲ್ಲಿ ಹಿಡಿತ ಇರಲಿ. ನಿಮ್ಮ ಯೋಜನೆ ಅನ್ಯರಲ್ಲಿ ಹಂಚಿಕೊಳ್ಳದಿರಿ. ಸಂಬಂಧದಲ್ಲಿ ತೊಡಕು ಮೂಡಬಹುದು. ಸಹನೆಯ ನಡೆ ಅಗತ್ಯ.
ಕುಂಭ
ಆಪ್ತ ಸಂಬಂಧ ಮುಂದುವರಿಯಲು ನೀವು ಸಹನೆ ಕಾಯುವುದು ಅಗತ್ಯ. ಆಹಾರದಿಂದ ಅಲರ್ಜಿ ಉಂಟಾದೀತು.
ಮೀನ
ನಿಮ್ಮ ಕಾರ್ಯಕ್ಕೆ ಮೆಚ್ಚುಗೆ ಪಡೆಯವಿರಿ. ಆಪ್ತ ವ್ಯಕ್ತಿಗಳ ಜತೆ ಸಂವಾದ. ಕಾಡುವ ಸಮಸ್ಯೆಗೆ ಶೀಘ್ರ ಪರಿಹಾರ ದೊರಕಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!