ದಿನಭವಿಷ್ಯ: ವೃತ್ತಿ ಜೀವನದಲ್ಲಿ ಇಂದು ಶುಭಸುದ್ದಿ ಸಿಗಲಿದೆ, ಶ್ರದ್ಧೆಯಿಂದ ಕೆಲಸ ಮಾಡಿ

ಮೇಷ
ವ್ಯವಹಾರ ಸುಗಮ. ಕೆಲಸದ ಜಾಗದಲ್ಲಿ ವದಂತಿ ಹರಡುವವರಿಂದ ದೂರವಿರಿ. ಅನಿರೀಕ್ಷಿತ ಧನಪ್ರಾಪ್ತಿ. ಆರೋಗ್ಯದ ಕಾಳಜಿ ವಹಿಸಿರಿ.
ವೃಷಭ
ಸಾಂಸಾರಿಕ ಬಿಕ್ಕಟ್ಟು ಕಾಡಿದರೂ ಬಳಿಕ ಅದು ಪರಿಹಾರ ಕಾಣಲಿದೆ. ಸಂಬಂಧದಲ್ಲಿ ಹೊಂದಾಣಿಕೆ ಮುಖ್ಯ. ಆರ್ಥಿಕ ಒತ್ತಡ ಹೆಚ್ಚು.
ಮಿಥುನ
ವೃತ್ತಿಯಲ್ಲಿ ನಿಮ್ಮ ಇಂದಿನ  ಗುರಿ ಸಾಽಸಲ್ಪಡಲಿದೆ. ಸಂಗಾತಿಯ ಭಾವನೆ ನಿರ್ಲಕ್ಷಿಸಬೇಡಿ. ಅವರ ಅಭಿಪ್ರಾಯ ಆಲಿಸಿ.
ಕಟಕ
ಸಕಾಲದಲ್ಲಿ ಕಾರ್ಯ ಮುಗಿಸಿ. ಇಲ್ಲವಾದರೆ ಹೆಚ್ಚಿನ ಒತ್ತಡ ಎದುರಿಸುವಿರಿ. ಧನಪ್ರಾಪ್ತಿ. ಅವಿವಾಹಿತರಿಗೆ ಸಂಗಾತಿ ಸಿಗಬಹುದು.
ಸಿಂಹ
ಕೆಟ್ಟ ಮನಸ್ಥಿತಿಯಿಂದ ಹೊರಬನ್ನಿ. ಹೊಸ ಅವಕಾಶದತ್ತ ಗಮನ ಹರಿಸಿ. ವೃತ್ತಿಯಲ್ಲಿ  ಹೊಸ ಸವಾಲು. ಬೆನ್ನು ನೋವು ಕಾಡಬಹುದು.
ಕನ್ಯಾ
ವ್ಯವಹಾರದಲ್ಲಿ ತೊಡಕು ಉಂಟಾದರೂ ಬಳಿಕ ಪರಿಹಾರ. ಸೂಕ್ತ ನೆರವು ಲಭ್ಯ. ಕೌಟುಂಬಿಕ ಕಲಹ ನೆಮ್ಮದಿ ಕೆಡಿಸಬಹುದು.
ತುಲಾ
ಹಲವಾರು ಹೊಣೆ ಪೂರೈಸಲು ಬಾಕಿ ಇದೆ. ಅದರತ್ತ ಗಮನ ಹರಿಸಿ. ಉದ್ಯಮದಲ್ಲಿ ಹಣದ ತೊಡಕು. ಅದನ್ನು ಸರಿಯಾಗಿ ನಿಭಾಯಿಸಿ.
ವೃಶ್ಚಿಕ
ದೈನಂದಿನ ವ್ಯವಹಾರ ಸುಲಲಿತವಾಗಿ ಸಾಗದು.  ಅನಿರೀಕ್ಷಿತ ಅಡ್ಡಿ ಸಂಭವ. ಅದನ್ನು ವಿವೇಚನೆಯಿಂದ ನಿಭಾಯಿಸಿ. ಬಲ್ಲವರ ಸಹಾಯ ಪಡೆಯಿರಿ.
ಧನು
ಎಂದಿನಂತೆ ಸಾಮಾನ್ಯ ದಿನ. ಕೆಲವರು ನಿಮ್ಮ ಮೇಲೆ ಹೆಚ್ಚು ಒತ್ತಡ ಹೇರಿಯಾರು. ಅದು ನಿಮಗೆ ಬಾಧಕವೆನಿಸದು. ಸಾಂಸಾರಿಕ ನೆಮ್ಮದಿ.
ಮಕರ
ಉತ್ಸಾಹಪೂರ್ಣ ದಿನ. ಮಹತ್ವದ ಕಾರ್ಯ ನೆರವೇರಿಸಿದ ನೆಮ್ಮದಿ. ಆದಾಯ- ವೆಚ್ಚ ಎರಡೂ ನಿಮ್ಮ ನಿಯಂತ್ರಣದಲ್ಲಿ. ಕೌಟುಂಬಿಕ ಸಮ್ಮಿಲನ.
ಕುಂಭ
ವೃತ್ತಿಗೆ ಸಂಬಂಽಸಿ ಸಾಮಾನ್ಯ ದಿನ. ಖರ್ಚು ನಿಯಂತ್ರಿಸಿ. ಉದ್ಯಮಿಗಳಿಗೆ ತುಸು ನಷ್ಟ ಸಂಭವಿಸಬಹುದು. ದಂಪತಿಗಳಿಗೆ ಶುಭಕರ.
ಮೀನ
ದಿನವಿಡೀ ಏನೋ ಕೊರಗು, ಅಸಹನೆ. ನಿಮಗೆ ಸಂಬಂಽಸದ ವಿಚಾರಕ್ಕೂ ಬೇಸರ ಪಡುವಿರಿ. ಆರ್ಥಿಕ ಪರಿಸ್ಥಿತಿ ಸ್ಥಿರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!