ಮೇಷ.
ಇಂದು ಮಹತ್ವದ ಬೆಳವಣಿಗೆ ಉಂಟಾದೀತು. ವೃತ್ತಿ ಮತ್ತು ಖಾಸಗಿ ಬದುಕು ಕೆಲ ಬದಲಾವಣೆ ಕಂಡೀತು. ಹೊಂದಿಕೊಳ್ಳಲು ಯತ್ನಿಸಿ.
ವೃಷಭ
ಕರ್ತವ್ಯದಲ್ಲಿ ಲೋಪ ಆಗದಂತೆ ಎಚ್ಚರ ವಹಿಸಿ. ಕುಟುಂಬದಲ್ಲಿ ಅಪ್ರಿಯ ಪರಿಸ್ಥಿತಿ ಎದುರಿಸಬೇಕಾದೀತು. ಸಹನೆಯ ನಡೆಯಿರಲಿ.
ಮಿಥುನ
ಒತ್ತಡದಿಂದಾಗಿ ನಿಮ್ಮ ಕಾರ್ಯ ಸಮರ್ಥ ವಾಗಿ ಮಾಡಲು ವಿ-ಲರಾಗುವಿರಿ. ಅನುಚಿತ ಮಾತು ಸಂಬಂಧ ಕೆಡಿಸಬಹುದು.
ಕಟಕ
ನಿಮ್ಮ ಸ್ಪರ್ಧಿ ಮೇಲುಗೈ ಸಾಧಿಸುವಿರಿ. ಇದರಿಂದ ಹತಾಶೆ. ಪ್ರೀತಿಯ ಹಾದಿ ಸುಗಮವಾಗಿ ಕಾಣದು. ಖರ್ಚು ಹೆಚ್ಚಲಿದೆ.
ಸಿಂಹ
ಈ ದಿನ ನಿಮಗೆ ಪ್ರತಿಕೂಲವೆಂಬಂತೆ ಕಂಡೀತು. ಆದರೆ ನಿಜವಾಗಿ ಅದು ನಿಮ್ಮ ಮನಸಿನ ಭಾವನೆ. ವಾಸ್ತವದಲ್ಲಿ ಪೂರಕವೇ ಆದೀತು.
ಕನ್ಯಾ
ಸಂಗಾತಿ ಜತೆಗೆ ಸೌಹಾರ್ದ ಸಂಬಂಧ ಕಾಯ್ದುಕೊಳ್ಳುವುದು ಕಷ್ಟವಾದೀತು. ಇಬ್ಬರೂ ಹೊಂದಿಕೊಳ್ಳುವುದಕ್ಕೆ ಕಲಿಯಬೇಕು.
ತುಲಾ
ಕೆಲಸದ ಜಾಗದಲ್ಲಿ ತಪ್ಪಭಿಪ್ರಾಯ ಉಂಟಾದೀತು. ಇದು ದ್ವೇಷ, ಅಸೂಯೆ ಹುಟ್ಟಿಸೀತು. ಆರೋಗ್ಯ ಸಮಸ್ಯೆ ನಿವಾರಣೆ.
ವೃಶ್ಚಿಕ
ಕೆಲ ವಿಷಯಗಳು ನಿಮ್ಮನ್ನು ಹತಾಶೆಗೆ ತಳ್ಳಬಹುದು. ಅಡ್ಡಿಗಳಿಗೆ ಅಂಜದಿರಿ. ಎದುರಿಸುವ ಧೈರ್ಯ ತೋರಿ. ಕೆಮ್ಮಿನ ಸಮಸ್ಯೆ ಬಾಧಿಸೀತು.
ಧನು
ಕಳೆದ ಕೆಲ ದಿನಗಳ ಚಿಂತೆಯೊಂದು ಪರಿಹಾರ. ಅನಿರೀಕ್ಷಿತ ನೆರವು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು. ಕೌಟುಂಬಿಕ ಪರಿಸ್ಥಿತಿ ತೃಪ್ತಿಕರ.
ಮಕರ
ವೃತ್ತಿ ಒತ್ತಡದ ನಡುವೆಯೂ ನಿಮ್ಮ ಹೊಣೆ ಸಮರ್ಥವಾಗಿ ಪೂರೈಸುವಿರಿ. ಆದಾಯ, ವೆಚ್ಚ ಎರಡೂ ಅಽಕವೆ. ಆರೋಗ್ಯ ಸುಸ್ಥಿರ.
ಕುಂಭ
ವೃತ್ತಿಯಲ್ಲಿ ತೀವ್ರ ಪ್ರತಿಸ್ಪರ್ಧೆ. ನಿರೀಕ್ಷಿತ ಲಾಭ ಸಿಗಲಾರದು. ಕೌಟುಂಬಿಕ ಜಂಜಾಟ ಹೆಚ್ಚು. ಮನಶ್ಯಾಂತಿಗಾಗಿ ತೊಳಲಾಡುವಿರಿ.
ಮೀನ
ಈ ದಿನ ಎರಡೆರಡು ಬಾರಿ ಯೋಚಿಸಿ ನಿರ್ಧಾರ ತಾಳಿ. ಅದರಿಂದ ಪ್ರತಿಕೂಲ ಪರಿಣಾಮ ಉಂಟಾಗದಂತೆ ಎಚ್ಚರ ವಹಿಸಿ. ಧನ ವ್ಯಯ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ