ಮೇಷ.
ಸಮಸ್ಯೆ ಪರಿಹಾರಕ್ಕೆ ಹಲವರಿಂದ ಸಲಹೆ ಬಂದೀತು. ಅನಿರೀಕ್ಷಿತ ಬೆಳವಣಿಗೆ ನಿಮ್ಮ ಪಾಲಿಗೆ ವರವಾಗಬಹುದು. ಹಣದ ಒತ್ತಡ ನಿವಾರಣೆ.
ವೃಷಭ
ವಿವಿಧ ವಿಷಯ ಗಳಲ್ಲಿ ಇಂದು ವ್ಯಸ್ತರಾಗುವಿರಿ. ಹಾಗಾಗಿ ಮುಖ್ಯ ವಿಷಯಗಳಿಗೆ ಗಮನ ಕೊಡಲು ಸಾಧ್ಯವಾಗದು. ಅವುಗಳನ್ನು ಕಡೆಗಣಿಸದಿರಿ.
ಮಿಥುನ
ಒತ್ತಡ, ಉದ್ವಿಗ್ನತೆ ಇಂದು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರುವುದು.ಪ್ರೀತಿಯಲ್ಲಿ ವೈಫಲ್ಯ. ಆಪ್ತರ ಸಾಂತ್ವನ ಕ್ಕಾಗಿ ಹಾತೊರೆಯುವಿರಿ.
ಕಟಕ
ಇತರರಿಗೆ ಸಂಬಂಽ ಸಿದ ವಿಷಯವೊಂದು ನಿಮ್ಮ ಮನಸ್ಸನ್ನು ಕೊರೆಯುವುದು. ಅದನ್ನು ಇತ್ಯರ್ಥ ಪಡಿಸಲು ಸಮಯ ವಿನಿಯೋಗಿಸಿ.
ಸಿಂಹ
ವೃತ್ತಿ ಅಥವಾ ಖಾಸಗಿ ಬದುಕಲ್ಲಿ ಸವಾ
ಲಿಗೆ ಅಂಜಿ ಓಡದಿರಿ. ಧೈರ್ಯದಿಂದ ಎದುರಿಸಿ. ಸಹಾಯವೂ ದೊರಕುವುದು.
ಕನ್ಯಾ
ಆಪ್ತವಲಯದ ವ್ಯಕ್ತಿಯೊಬ್ಬರು ನಿಮ್ಮ ಜತೆ ಇಂದು ನಿಷ್ಟುರವಾಗಿ ವರ್ತಿಸಬಹುದು. ಸಹನೆ ಇರಲಿ. ಬಂಧು ಆಕಸ್ಮಿಕ ಭೇಟಿ.
ತುಲಾ
ಕೌಟುಂಬಿಕ ವಿಷಯದಲ್ಲಿ ಸಮಸ್ಯೆ. ಸಮಸ್ಯೆ ನಿವಾರಣೆಗೆ ನಿಮ್ಮಲ್ಲೇ ದಾರಿಯಿದೆ. ಕೆಲವರ ಮನ ನೋಯುವುದೆಂದು ಹಿಂಜರಿಯದಿರಿ.
ವೃಶ್ಚಿಕ
ನಿಮ್ಮ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭವಾಗಬಹುದು. ಕಹಿಯೆನಿಸುವ ಹಳೆಯ ವಿಷಯ ವನ್ನು ಮರೆತುಬಿಡಿ. ಭವಿಷ್ಯಕ್ಕೆ ಆದ್ಯತೆ ಕೊಡಿ.
ಧನು
ನಿಮಗಿಂದು ಉತ್ಸಾಹದ ದಿನ. ಸಂತೋಷ. ಕೌಟುಂಬಿಕ ಬಿಕ್ಕಟ್ಟು, ಮನಸ್ತಾಪ ನಿವಾರಣೆ. ಆತ್ಮೀಯರ ಭೇಟಿ, ಮಾತುಕತೆ.
ಮಕರ
ಖಾಸಗಿ ಸಮಸ್ಯೆ ಪರಿಹರಿಸಲು ಆದ್ಯತೆ ಕೊಡಿ. ಸಣ್ಣ ಸಮಸ್ಯೆ ದೊಡ್ಡದಾದೀತು. ಅದಕ್ಕೆ ಅವಕಾಶ ಕೊಡದಿರಿ. ಕೌಟುಂಬಿಕ ಅಸಹಕಾರ.
ಕುಂಭ
ನಿಮ್ಮ ಮನಸ್ಥಿತಿಯಲ್ಲಿ ಏರುಪೇರಾಗಬಹುದು. ಸಾಧ್ಯವಾದಷ್ಟು ಸಂತೋಷ ದಿಂದ ಇರಲು ಯತ್ನಿಸಿ. ಸಣ್ಣ ವಿಷಯ ಮನಸ್ಸು ಕಲಕಲು ಆಸ್ಪದಕೊಡದಿರಿ.
ಮೀನ
ನಿಮ್ಮ ಕಠಿಣ ಶ್ರಮಕ್ಕೆ ಸೂಕ್ತ ಫಲ ಇಂದು ದೊರಕುವುದು. ಹಣದ ವಿಷಯದಲ್ಲಿ ನಿಮಗೆ ಪೂರಕ ಬೆಳವಣಿಗೆ. ಆಪ್ತರ ಜತೆಗೆ ಮುನಿಸು ಶಮನ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ