ದಿನಭವಿಷ್ಯ: ನಿಮಗೇ ಗೊತ್ತಿಲ್ಲದಂತೆ ನಿಮ್ಮಲ್ಲೇ ಏನೋ ಬದಲಾವಣೆ ಕಾಣುವ ದಿನವಿದು

ಮೇಷ.
ಒಳ್ಳೆ ದಿನ ಬಂದೀತು ಎಂದು ಲೆಕ್ಕಾ ಹಾಕುತ್ತಾ ಕೂರದಿರಿ. ಪ್ರಯತ್ನವೂ ಇರಲಿ. ಕೆಲದಿನಗಳಲ್ಲೆ ಒಳಿತಾಗಲಿದೆ. ಸಮಸ್ಯೆ ನಿವಾರಣೆ ಕಾಣಲಿದೆ.
ವೃಷಭ
ಹಿರಿಯರ ಜತೆ ವ್ಯವಹಾರದಲ್ಲಿ ವಿವೇಕ ಇರಲಿ. ನಿಮ್ಮದೇ ಹಠ ಹಿಡಿಯಬೇಡಿ.   ಸಂಗಾತಿಯ ಭಾವನೆಗೆ ಗಮನ ಕೊಡಿ.
ಮಿಥುನ
ಕುಟುಂಬ ಸದಸ್ಯರ ಸಮಸ್ಯೆ ಪರಿಹಾರಕ್ಕೆ ಆಸ್ಥೆ ವಹಿಸಿ. ಉದಾಸೀನತೆ ಸರಿಯಲ್ಲ.  ಸಣ್ಣಪುಟ್ಟ ಜಗಳಕ್ಕೆ ಹೋಗದಿರಿ.  ಅನಿರೀಕ್ಷಿತ ಖರ್ಚು.
ಕಟಕ
ಆಹಾರದಲ್ಲಿ ಸಮತೋಲನ ಸಾಧಿಸಿ. ಆರೋಗ್ಯ ಕೆಡದಂತೆ ನೋಡಿಕೊಳ್ಳಿ. ವೃತ್ತಿಯಲ್ಲಿ ನಿಮ್ಮ ಶ್ರಮಕ್ಕೆ ಸೂಕ್ತ ಪ್ರತಿ-ಲ ದೊರಕುವುದು.
ಸಿಂಹ
ನಿಮ್ಮೊಳಗೆ ಏನೋ ಬದಲಾವಣೆ ಉಂಟಾದೀತು. ಆತ್ಮವಿಶ್ವಾಸ ಹೆಚ್ಚಲಿದೆ. ಧಾರ್ಮಿಕ ಭಾವದಿಂದ ಮನಸ್ಸಿಗೆ ನೆಮ್ಮದಿ, ನಿರಾಳತೆ.
ಕನ್ಯಾ
ಕಲಹ, ವಾಗ್ವಾದ, ಬೇಸರ ಇಂದು ನಿಮ್ಮ ದಿನಚರಿಯಾಗಲಿದೆ. ಸಂಜೆ ವೇಳೆ ಮನಸ್ಸು ತಹಬಂದಿಗೆ ಬರುವುದು. ಧ್ಯಾನದಿಂದ ನೆಮ್ಮದಿ.
ತುಲಾ
ವ್ಯವಹಾರ  ತೃಪ್ತಿಕರ. ಕಾರ್ಯಗಳು ಸುಗಮ. ಕೌಟುಂಬಿಕ ಒತ್ತಡ. ಎಲ್ಲರನ್ನು ಒಟ್ಟಾಗಿ ಮುಂದುವರಿಸುವ ಹೊಣೆ ನಿಮ್ಮದಾಗಲಿದೆ.
ವೃಶ್ಚಿಕ
ನೀವು ಬಯಸಿದ ರೀತಿ ದಿನ ಸಾಗದು. ಬೇಸರ, ವಿಫಲತೆ ಎದುರಿಸುವಿರಿ. ಶಾಂತ ಮನಸ್ಥಿತಿ ಅವಶ್ಯ. ಕೌಟುಂಬಿಕ ಅಸಮಾಧಾನ.
ಧನು
ದೈಹಿಕ ಆರೋಗ್ಯದಷ್ಟೆ ಮಾನಸಿಕ ಆರೋಗ್ಯವೂ ಮುಖ್ಯ. ಅತಿ ಭಾವುಕತೆ ನಿಮ್ಮ ವಿವೇಕವನ್ನು ಮಸುಕಾಗಿಸಬಹುದು. ಅದಕ್ಕೆ ಆಸ್ಪದ ನೀಡದಿರಿ.
ಮಕರ
ನಿಮಗೆದುರಾಗುವ ಸಮಸ್ಯೆಯಿಂದ ಧೃತಿ ಕೆಡಬೇಡಿ. ಪರಿಹಾರವೂ ಅದರ ಬೆನ್ನಿಗೇ ಇರಲಿದೆ. ಖರ್ಚು ಕಡಿಮೆಗೊಳಿಸಿರಿ.  ಕೌಟುಂಬಿಕ ಸೌಹಾರ್ದ.
ಕುಂಭ
ದಂಪತಿ ಮಧ್ಯೆ ವಿರಸ ತಲೆದೋರೀತು. ಆದರೆ ಬೇಗನೆ ಅದು ಶಮನವಾಗುವುದರಿಂದ ಚಿಂತೆ ಅನವಶ್ಯ.  ಖರ್ಚು ನಿಯಂತ್ರಿಸಬೇಕು.
ಮೀನ
ನಿಮ್ಮ ಮೇಲೆ ನೀವೇ ಹೆಚ್ಚು ಒತ್ತಡ ಹೇರಿಕೊಳ್ಳಬೇಡಿ. ಅನ್ಯರ ಜತೆ ವಿನಯದಿಂದ ವರ್ತಿಸಿ. ಸಮಸ್ಯೆ ಬಗ್ಗೆ ಅತಿಯಾಗಿ ಚಿಂತಿಸದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!