ಮೇಷ
ಆತ್ಮಸಂತೃಪ್ತಿ ಮತ್ತು ಜನಪ್ರಿಯತೆ ಎರಡೂ ನಿಮಗಾಗುವುದು. ಕೆಲಸದಲ್ಲಿ ನೀವು ಬಯಸಿದ ಸಾಧನೆ ತೋರುವಿರಿ. ಎಲ್ಲರಿಂದ ಮೆಚ್ಚುಗೆ.
ವೃಷಭ
ನಿಮ್ಮ ವ್ಯವಹಾರದಲ್ಲಿ ಹಠಾತ್ ತಿರುವು ಸಂಭವಿಸಬಹುದು. ಆರ್ಥಿಕ ಪರಿಸ್ಥಿತಿ ನಿಮಗೆ ಅನುಕೂಲಕರ.ಬಿಕ್ಕಟ್ಟು ಪರಿಹಾರಕ್ಕೆ ಬಂಧುಗಳ ಸಹಕಾರ.
ಮಿಥುನ
ಕುಟುಂಬಸ್ಥರ ಜತೆ ಹೆಚ್ಚು ಸಮಯ ಕಳೆಯುವ ಅವಕಾಶ. ಸಣ್ಣಪುಟ್ಟ ಭಿನ್ನಮತ ಉಂಟಾದರೂ ಒಟ್ಟಿನಲ್ಲಿ ನೆಮ್ಮದಿಯ ದಿನ. ಆರ್ಥಿಕ ಉನ್ನತಿ. ಖರ್ಚು ಸೀಮಿತ.
ಕಟಕ
ಇಂದು ತಾಳ್ಮೆಯಿಂದ ವರ್ತಿಸಿದರೆ
ಕಠಿಣ ಕೆಲಸವನ್ನೂ ಪೂರೈಸಬಲ್ಲಿರಿ. ಇತರರ ಪ್ರಭಾವಕ್ಕೆ ಸಿಲುಕದೆ ನಿಮ್ಮದೇ ಸ್ವಂತ ನಿರ್ಧಾರ ತಾಳಿ.
ಸಿಂಹ
ಮನಸ್ಸಿಗೆ ನೆಮ್ಮದಿ ತರುವಂತಹ ಬೆಳವಣಿಗೆ. ಕೆಲದಿನಗಳಿಂದ ಕಾಡುತ್ತಿದ್ದ ಚಿಂತೆ ನಿವಾರಣೆ. ಆಪ್ತರ ಜತೆಗಿನ ವೈಮನಸ್ಸು ಪರಿಹಾರ.
ಕನ್ಯಾ
ನ್ಯಾಯವಾದ ವಿಷಯ ಬೆಂಬಲಿಸಲು ಹಿಂಜರಿಕೆ ತೋರದಿರಿ. ಇದರಿಂದ ಕೆಲವರ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆಯಿದೆ. ಆ ಬಗ್ಗೆ ಚಿಂತಿಸದಿರಿ. ದೃಢವಾಗಿರಿ.
ತುಲಾ
ಇಂದು ವ್ಯವಹಾರದಲ್ಲಿ ಲಾಭ. ಖರ್ಚು ಮಾಡಲು ಯಾವುದೇ ಅಡ್ಡಿ ಇಲ್ಲ. ಕುಟುಂಬ ಸದಸ್ಯರಲ್ಲಿ ಮೂಡಿದ್ದ ಅಸಮಾಧಾನ ನಿವಾರಣೆ, ಸಂತೃಪ್ತಿ.
ವೃಶ್ಚಿಕ
ನಿಮಗೆ ಸಂಬಂಧಿಸಿದ ವಿಷಯವೊಂದು ದ್ವಂದ್ವ ಹುಟ್ಟಿಸುವುದು. ಯಾವ ದಾರಿ ಹಿಡಿಯಬೇಕೆಂದು ಅರಿಯದೆ ಗೊಂದಲ. ಮನಸ್ಸಿಗೆ ಕಿರಿಕಿರಿ. ಸರಿಯಾಗಿ ಯೋಚಿಸಿ.
ಧನು
ಕೆಲ ವಿಷಯಗಳಲ್ಲಿ ತಕ್ಷಣದ ನಿರ್ಧಾರ ತಾಳಲು ಮನಸ್ಸನ್ನು ಸಿದ್ಧ ಪಡಿಸಬೇಕು. ಇಂದು ಅಂತಹ ಪ್ರಸಂಗ ಉಂಟಾದೀತು. ಇತರರ ನೆರವು ಪಡೆಯಿರಿ.
ಮಕರ
ನಿಮ್ಮ ತಾಳ್ಮೆ ಕೆಡಿಸುವ ಪ್ರಸಂಗ ಉಂಟಾದೀತು. ಕೆಲವರ ಅಸಹಕಾರ ಎದುರಿಸುವಿರಿ. ಆಪ್ತ ಸಂಬಂಧದ ವಿಚಾರ ದಲ್ಲಿ ಪ್ರತಿಕೂಲ ಬೆಳವಣಿಗೆ.
ಕುಂಭ
ಮಾನಸಿಕ ನೋವು, ಬೇಸರ ಅನುಭವಿಸುವಿರಿ. ಅದಕ್ಕೆ ಭಾವನಾತ್ಮಕ ಏರುಪೇರು ಕಾರಣವಾಗುವುದು. ಇಂದು ಮನಸ್ಸು ಗೊಂದಲದ ಗೂಡು.
ಮೀನ
ಮನೆಯಲ್ಲಿ ನಿಮ್ಮ ಹೊಣೆಗಾರಿಕೆ ನಿಭಾಯಿಸುವಲ್ಲಿ ಸಮಸ್ಯೆ ಎದುರಿಸುವಿರಿ. ಸಣ್ಣ ವಿಷಯಗಳನ್ನು ದೊಡ್ಡ ವಿವಾದವಾಗಿ ಪರಿವರ್ತಿಸದಿರಿ.