ಮೇಷ
ಪುಟ್ಟ ಬಿಕ್ಕಟ್ಟು ಎದುರಾದರೆ ಕೂಡಲೇ ಪರಿಹರಿಸಿ. ಹಾಗೇ ಬಿಟ್ಟರೆ ದೊಡ್ಡದಾದೀತು. ಗ್ರಹಗತಿ ಪೂರಕ. ಇಷ್ಟಾರ್ಥ ಸಿದ್ಧಿ. ಬಂಧುವಿನ ಸಹಕಾರ.
ವೃಷಭ
ಹೆಚ್ಚು ಕೆಲಸ, ಹೆಚ್ಚು ಒತ್ತಡ. ಆದರೆ ದಿನದಂತ್ಯಕ್ಕೆ ಎಲ್ಲವೂ ಸಮಾಧಾನಕರ. ಆತ್ಮೀಯರ ಸಂಗದಲ್ಲಿ ಎಲ್ಲ ಒತ್ತಡಗಳನ್ನು ಮರೆಯುವಿರಿ.
ಮಿಥುನ
ವೃತ್ತಿಯಲ್ಲಿ ಹೆಚ್ಚು ಒತ್ತಡ. ಕೆಲವರ ಅಸಹಕಾರ ಕ್ಷೆಭೆ ಹೆಚ್ಚಿಸುವುದು. ವಾಗ್ವಾದಕ್ಕೆ ಎಡೆಕೊಡದಿರಿ.ಕೌಟುಂಬಿಕ ಸಮಾಧಾನ. ಮನೆಯಲ್ಲಿ ಸಂಭ್ರಮ.
ಕಟಕ
ಆತ್ಮೀಯರ ಜತೆಗಿನ ಭಿನ್ನಮತ ನಿವಾರಣೆಗೆ ಆದ್ಯತೆ ಕೊಡಿ. ಆರ್ಥಿಕ ಒತ್ತಡ ನಿವಾರಣೆ. ಮನೆಯಲ್ಲಿ ಸಂಭ್ರಮ. ಬಂಧುಬಳಗ ಭೇಟಿ.
ಸಿಂಹ
ಸಣ್ಣ ವಿಷಯ ವಾಗ್ವಾದಕ್ಕೆ ಕಾರಣವಾಗ ಬಹುದು. ಮಾತಿಗೆ ಮಾತು ಬೆಳೆಸಬೇಡಿ. ಎಲ್ಲರ ಜತೆ ಸಂಭ್ರಮದಲ್ಲಿ ಪಾಲ್ಗೊಳ್ಳಿ. ಆದಾಯ ಹೆಚ್ಚಳ.
ಕನ್ಯಾ
ಪ್ರಲೋಭನೆಗೆ ಬಲಿಯಾಗದಿರಿ. ಆಪ್ತರ ಕುರಿತಾದ ವದಂತಿ ನಂಬಬೇಡಿ. ವಿವೇಕದಿಂದ ನಡಕೊಳ್ಳಿ. ಇತರರ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕೊಡಿ.
ತುಲಾ
ಎಲ್ಲವೂ ಇದ್ದೂ ಅತೃಪ್ತಿ ಕಾಡುವುದು. ಮನೋಬೇಗುದಿ. ಇತ್ತೀಚಿನ ಬೆಳವಣಿಗೆ ಅದಕ್ಕೆ ಕಾರಣ. ಶೀಘ್ರ ಎಲ್ಲ ಸರಿಹೋಗಲಿದೆ.
ವೃಶ್ಚಿಕ
ಮನಶ್ಯಾಂತಿ ಕೆಡಿಸುವ ಪ್ರಸಂಗ.ಅದನ್ನು ದಿಟ್ಟವಾಗಿ ಎದುರಿಸಿ. ಅನ್ಯರ ಅಧೈರ್ಯದ ಮಾತು ಕೇಳಲು ಹೋಗಬೇಡಿ. ಕುಟುಂಬದ ಸಹಕಾರ.
ಧನು
ಸ್ವಂತ ಹಿತಾಸಕ್ತಿಗೆ ಹೆಚ್ಚು ಗಮನ ಕೊಡಿ. ಕೆಲವರು ನಿಮ್ಮ ಕೆಲಸ ಕೆಡಿಸಲು ಯತ್ನಿಸುವರು. ಖರೀದಿ ಹುಮ್ಮಸ್ಸು, ಖರ್ಚು ಅಽಕ.
ಮಕರ
ವೃತ್ತಿಗಿಂತಲೂ ಖಾಸಗಿ ವಿಚಾರಗಳತ್ತ ಗಮನ ಹರಿಸುವಿರಿ. ವಿಷಯವೊಂದು ಚಿಂತೆಗೆ ಕಾರಣವಾಗುವುದು. ಬೇಗ ಪರಿಹಾರ ಸಿಗಲಿದೆ.
ಕುಂಭ
ಪ್ರಮುಖ ವಿಷಯದ ಬಗ್ಗೆ ನಿರ್ಧರಿಸುವಾಗ ವಿವೇಕದಿಂದ ಯೋಚಿಸಿ. ಭಾವುಕತೆ ಬೇಡ. ಕಟು ನಿರ್ಧಾರ ಅವಶ್ಯ. ಬಂಧು ಕಲಹ ಉಂಟಾದೀತು.
ಮೀನ
ವೃತ್ತಿಯಲ್ಲಿ ಅಹಿತಕರ ಬೆಳವಣಿಗೆ. ಕೌಟುಂಬಿಕ ಪರಿಸರದಲ್ಲಿ ಸಮಾಧಾನ ಸಿಗುವುದು. ಆಪ್ತರಿಂದ ಒಳ್ಳೆಯ ಸುದ್ದಿ ಸಿಗುವುದು.
ದಿನಭವಿಷ್ಯ: ಇಂದು ಯಾವ ಪುಟ್ಟ ಸಮಸ್ಯೆಯನ್ನೂ ನಿರ್ಲಕ್ಷ್ಯ ಮಾಡದಿರಿ
