Sunday, December 3, 2023

Latest Posts

ದಿನಭವಿಷ್ಯ: ನಿಮ್ಮ ಕಾರ್ಯಗಳು ವಿಳಂಬವಾಗಬಹುದು, ಸರಿಯಾಗಿ ಯೋಜಿಸಿ ಕಾರ್ಯವೆಸಗಿ..

ಮೇಷ
ವೃತ್ತಿ ಬದುಕು ಮತ್ತು ಖಾಸಗಿ ಬದುಕಿನ ಮಧ್ಯೆ ಸಮನ್ವಯ ಸಾಧಿಸಿ. ಇಲ್ಲವಾದರೆ ಒಂದರ ಸಮಸ್ಯೆ ಮತ್ತೊಂದರ ಮೇಲೆ ಪರಿಣಾಮ ಬೀರಬಹುದು.

ವೃಷಭ
ಕೆಲವು ಪ್ರಮುಖ ಕಾರ್ಯ ಎಸಗುವಿರಿ. ಇದರಿಂದ ನಿಮ್ಮ ಪ್ರತಿಷ್ಠೆ ಹೆಚ್ಚುವುದು. ಬಂಧುಗಳಿಂದ ಆದರಾಭಿಮಾನ ಪಡೆಯುವಿರಿ.

ಮಿಥುನ
ಅತಿಯಾದ ಒತ್ತಡದ ದಿನ. ಅಂತ್ಯಕ್ಕೆ ನೀವು ತೀರಾ ಬಸವಳಿಯುವಿರಿ. ವಿಶ್ರಾಂತಿ ನಿಮಗೆ ಅವಶ್ಯ. ಹಣದ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳದಿರಿ.

ಕಟಕ
ನಿಮ್ಮ ಕಾರ್ಯಗಳು ವಿಳಂಬವಾಗಬಹುದು. ಸರಿಯಾಗಿ ಯೋಜಿಸಿ ಕಾರ್ಯವೆಸಗಿ. ಮನೆಯಲ್ಲಿ ಭಿನ್ನಾಭಿಪ್ರಾಯ ಉಂಟಾದೀತು.

ಸಿಂಹ
ವೃತ್ತಿಗೆ ಸಂಬಂಧಿಸಿ ನಿರ್ಧಾರ ತಾಳುವಾಗ ಹೆಚ್ಚು ವಿವೇಕ ವಹಿಸಿ. ಸಹನೆ ಮುಖ್ಯ. ತಕ್ಷಣವೇ ಕಾರ್ಯ ಆಗಬೇಕೆಂಬ ಆತುರ ತೋರದಿರಿ.

ಕನ್ಯಾ
ಹಿರಿಯರಿಂದ ಹೆಚ್ಚು ಒತ್ತಡ ಎದುರಿಸುವಿರಿ. ಕೌಟುಂಬಿಕ ಭಿನ್ನಮತ ಮಾತುಕತೆಯಿಂದ ಪರಿಹರಿಸಿ. ಅದು ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಿ.

ತುಲಾ
ಕುಟಂಬ ಸದಸ್ಯರು ನಿಮಗೆ ಸಲಹೆ ನೀಡಿದರೆ ಅದನ್ನು ಸ್ಪೂರ್ತಿಯಿಂದ ಸ್ವೀಕರಿಸಿ. ನಿರ್ಲಕ್ಷ್ಯ ಬೇಡ. ಎಲ್ಲರೂ ನಿಮ್ಮ ಹಿತ ಬಯಸುವವರು ಎಂಬ ಅರಿವಿರಲಿ.

ವೃಶ್ಚಿಕ
ಕೆಲವು ಸಮಸ್ಯೆಗಳು ನಿಮ್ಮನ್ನು ಭಾವನಾತ್ಮಕ  ಬೇಗುದಿಗೆ ತಳ್ಳಬಹುದು.  ತಪ್ಪು ನಿರ್ಧಾರ ತಾಳಲು ಕಾರಣವಾಗಬಹುದು. ಎಚ್ಚರಿಂದ ವರ್ತಿಸಿ, ಹಿರಿಯರ ಮಾತು ಕೇಳಿ.

ಧನು
ನಿಮ್ಮ ಇತ್ತೀಚಿನ ನಿರ್ವಹಣೆಯು  ಮೆಚ್ಚುಗೆ ಪಡೆಯುವುದು. ಸಾಂಸಾರಿಕ ವಿಷಯ ಸಮಸ್ಯೆಯಾಗಿ ಕಂಡರೂ ಅಂತ್ಯದಲ್ಲಿ ಎಲ್ಲ ನಿರಾಳ.

ಮಕರ
ಕೆಲಸದಲ್ಲಿ ವಿಘ್ನಗಳು. ನಿಮಗಿಂತ ಕಿರಿಯರಿಗೆ ಸರಿಯಾದ ನಿರ್ದೇಶ ನೀಡಿ ಕೆಲಸ ತೆಗೆಯಿರಿ. ವಿವಾಹಾಕಾಂಕ್ಷಿಗಳಿಗೆ ಶುಭ ಬೆಳವಣಿಗೆ ಉಂಟಾದೀತು.

ಕುಂಭ
ಅತ್ಮೀಯ ಸಂಬಂಧ ಹದಗೆಡಬಹುದು.ಅದನ್ನು ಉಳಿಸಲು ಆದ್ಯತೆ ಕೊಡಿ. ವದಂತಿಗಳನ್ನು ನಂಬದಿರಿ. ಆರ್ಥಿಕ ಒತ್ತಡ ಹೆಚ್ಚಳ.

ಮೀನ
ಕೆಲಸದ ಒತ್ತಡ ಕಡಿಮೆ. ಹಾಗಾಗಿ ಬಾಕಿ ಇರುವ ಕಾರ್ಯಗಳೆಲ್ಲ ಸಂಪೂರ್ಣ. ಕೌಟುಂಬಿಕ ಸಂಬಂಧ ಹಾಳಾಗಲು ಅವಕಾಶ ಕೊಡದಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!