ಮೇಷ
ಕಾರ್ಯ ಸಾಧನೆಗೆ ಕೌಟುಂಬಿಕ ಸಹಕಾರ ಅಗತ್ಯ. ಮನೆ ಖರ್ಚು ಅಧಿಕ. ಒಬ್ಬ ಸಹೋದ್ಯೋಗಿ ನಿಮ್ಮ ತಾಳ್ಮೆ ಕೆಣಕುವ ವರ್ತನೆ ತೋರುವರು.
ವೃಷಭ
ಭಾವುಕ ವಿಷಯಗಳಲ್ಲಿ ಹೆಚ್ಚು ಪ್ರಾಕ್ಟಿಕಲ್ ಆಗಿ ವರ್ತಿಸುವಿರಿ. ಅದರಿಂದ ನೋವು ದೂರ. ಮನೆಯಲ್ಲಿ ಸಂಪ್ರದಾಯ ಪಾಲನೆಗೆ ಆದ್ಯತೆ ಕೊಡುವಿರಿ.
ಮಿಥುನ
ಬದುಕು ಆನಂದಿಸಲು ಖಾಸಗಿ ಬದುಕು ಮತ್ತು ವೃತ್ತಿ ಬದುಕಿನ ಮಧ್ಯೆ ಸಮತೋಲನ ಅಗತ್ಯ. ಬಂಧುಗಳ ಜತೆ ಜಗಳಕ್ಕೆ ಹೋಗದಿರಿ. ಟೀಕೆ ಕಡೆಗಣಿಸಿರಿ.
ಕಟಕ
ಕೆಲವು ವಿಷಯ ಲಘುವಾಗಿ ಪರಿಗಣಿಸದಿರಿ. ಅದುವೇ ದೊಡ್ಡ ಸಮಸ್ಯೆ ಸೃಷ್ಟಿಸಬಹುದು. ಆತ್ಮೀಯರ ಜತೆ ವೈಮನಸ್ಸು ಮೂಡೀತು.
ಸಿಂಹ
ಹೆಚ್ಚುವರಿ ಹೊಣೆಗಾರಿಕೆ. ಅದನ್ನು ಸರಿಯಾಗಿ ನಿಭಾಯಿಸಿ. ಅತಿಯಾದ ಆಹಾರ ಸೇವನೆ ಆರೋಗ್ಯ ಕೆಡಿಸಬಹುದು. ಆರ್ಥಿಕ ಬಿಕ್ಕಟ್ಟು ಸಂಭವ.
ಕನ್ಯಾ
ಬಾಕಿ ಉಳಿದ ಯೋಜನೆ ಪೂರ್ಣಗೊಳಿಸಿ. ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡಲು ಸಕಾಲ. ಸಮಸ್ಯೆ ಪರಿಹರಿಸಲು ಆತ್ಮೀಯರಿಂದ ನೆರವು ಒದಗುವುದು.
ತುಲಾ
ಕೆಲವು ವಿಷಯಗಳಲ್ಲಿ ಸಮಸ್ಯೆ ಕಾಡುವುದು. ಅದನ್ನು ಕೂಡಲೇ ಪರಿಹರಿಸಿ. ಆಪ್ತರ ಜತೆಗಿನ ಸಂಬಂಧದಲ್ಲಿ ಬಿರುಕು ಉಂಟಾದೀತು. ಸಂಯಮ ಅವಶ್ಯ.
ವೃಶ್ಚಿಕ
ಇತರರ ಒಳ್ಳೆ ಕಾರ್ಯವನ್ನು ಶ್ಲಾಘಿಸಿರಿ. ಅವರ ಎದೆಗುಂದಿಸದಿರಿ. ಹಳೆಯ ಸ್ನೇಹಿತರ ಭೇಟಿ ನೆನಪು ಕೆದಕಬಹುದು. ಕೌಟುಂಬಿಕ ಅಸಮಾಧಾನ ನಿವಾರಣೆ.
ಧನು
ನಿಮ್ಮನ್ನು ಗೊಂದಲಕ್ಕೆ ತಳ್ಳುವ ಹಲವು ಮಂದಿ ನಿಮ್ಮ ಸುತ್ತ ಇದ್ದಾರೆ. ಅವರ ಋಣಾತ್ಮಕ ಮಾತುಗಳಿಗೆ ಹೆಚ್ಚು ಕಿವಿಗೊಡಬೇಡಿ. ಮುಕ್ತ ಮನಸ್ಸು ಮುಖ್ಯ.
ಮಕರ
ಇಂದು ನಿರುತ್ಸಾಹ ತುಂಬಿದ ದಿನ. ಕೆಲವರ ವರ್ತನೆ ಬೇಗುದಿ ಹೆಚ್ಚಿಸುವುದು. ಸಾಂಸಾರಿಕ ತಾಪತ್ರಯ ಬೇಸರ ತರುವುದು. ಇಂದು ಸಾಲ ನೀಡದಿರಿ.
ಕುಂಭ
ಆತ್ಮೀಯ ಸಂಬಂಧ ಕಾಯ್ದುಕೊಳ್ಳಲು ಕಷ್ಟ ಪಡುವಿರಿ. ಅವರ ಭಾವನೆಗೂ ಬೆಲೆ ಕೊಡಿ. ಅವರ ಕುರಿತಾದ ಪೂರ್ವಗ್ರಹ ತ್ಯಜಿಸಬೇಕು.
ಮೀನ
ಬಿಡುವಿಲ್ಲದ ಕಾರ್ಯದ ಮಧ್ಯೆಯೂ ಕುಟುಂಬದ ಕಡೆ ಗಮನ ಕೊಡಲು ಮರೆಯದಿರಿ. ಹಳೆಯ ಹೂಡಿಕೆಯಿಂದ ಲಾಭ ಸಿಗಲಿದೆ. ಸಾಂಸಾರಿಕ ಸಮಾಧಾನ.