ದಿನಭವಿಷ್ಯ
ಮೇಷ
ಹಲವಾರು ಬದ್ಧತೆಗಳು ಇಂದು ನಿಮ್ಮ ಹೆಗಲೇರುತ್ತವೆ. ಕುಟುಂಬಸ್ಥರು, ಸ್ನೇಹಿತರು ಹಲವು ಬೇಡಿಕೆ ಸಲ್ಲಿಸುತ್ತಾರೆ. ಆರ್ಥಿಕ ಕೊರತೆ.
ವೃಷಭ
ನಿಮ್ಮ ಉನ್ನತಿಗೆ ಇಂದು ಹಲವು ಅವಕಾಶಗಳು ದೊರಕುವುವು. ಅವನ್ನು ಸದುಪಯೋಗ ಮಾಡಿ ಕೊಳ್ಳಿ. ಸಣ್ಣ ಆರೋಗ್ಯ ಸಮಸ್ಯೆಯೂ ಕಾಡಬಹುದು.
ಮಿಥುನ
ಅದೃಷ್ಟದ ದಿನ. ಕೆಲಸದಲ್ಲಿ ಸಫಲತೆ. ಕುಟುಂಬದಲ್ಲಿ ಶುಭ ಬೆಳವಣಿಗೆ. ಬಂಧು ಮಿತ್ರರೊಂದಿಗೆ ಫಲಪ್ರದ ಕಾಲಕ್ಷೇಪ. ಅನಿರೀಕ್ಷಿತ ಆರ್ಥಿಕ ಲಾಭ.
ಕಟಕ
ನಿಮ್ಮ ಸಲಹೆಗಳಿಗೆ ಇಂದು ಬೆಲೆ ಸಿಗುವುದಿಲ್ಲ. ಹಾಗಾಗಿ ಯಾರಿಗೂ ಸಲಹೆ ಕೊಡಲು ಹೋಗದಿರಿ. ಮನೆಯಲ್ಲಿನ ಪರಿಸ್ಥಿತಿ ತಿಳಿಗೊಳ್ಳುವುದು.
ಸಿಂಹ
ನಿಮ್ಮ ಕೆಲಸದ ಮೇಲೆ ಪೂರ್ಣ ಗಮನ ಕೊಡಿ. ಮನಸ್ಸು ಹಾಳು ಗೆಡಹುವ ಪ್ರಸಂಗ ಉದ್ಭವಿಸಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು.
ಕನ್ಯಾ
ನಿಮ್ಮ ಇತ್ತೀಚಿನ ಕಾರ್ಯಗಳನ್ನು ಪರಾಮರ್ಶಿಸಿ. ತಪ್ಪುಗಳಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳಿ. ಇಲ್ಲವಾದರೆ ಮುಂದಕ್ಕೆ ಸಮಸ್ಯೆ ಬಂದೀತು.
ತುಲಾ
ವಿಧೇಯತೆ ಒಳ್ಳೆಯದು. ಆದರೆ ಹೇಳಿದ ಮಾತುಗಳಿಗೆಲ್ಲ ತಲೆಯಾಡಿಸದಿರಿ. ನಿಮ್ಮ ವಿವೇಚನೆಯನ್ನೂ ಬಳಸಿರಿ. ಇದು ನಿಮಗಿಂದು ಸಲಹೆ.
ವೃಶ್ಚಿಕ
ಮನಸ್ಸು ಯಾವುದೋ ವಿಷಯದಲ್ಲಿ ಅಲೆದಾಡುತ್ತದೆ. ಹಾಗಾಗಿ ಇನ್ನಿತರ ವಿಷಯಗಳು ಗೌಣವಾಗುತ್ತವೆ. ಕೌಟುಂಬಿಕ ಒತ್ತಡ.
ಧನು
ನಿಮ್ಮ ಖರ್ಚು ನಿಯಂತ್ರಿಸಿ ಎಂದು ಗ್ರಹಗತಿ ತಿಳಿಸುತ್ತಿದೆ. ಅವಶ್ಯವಿಲ್ಲದ ಕಾರ್ಯಕ್ಕೂ ಹಣ ವ್ಯಯಿಸುವಿರಿ. ಕೌಟುಂಬಿಕ ಸಹಕಾರ.
ಮಕರ
ಅವಿವಾಹಿತರಿಗೆ ಸಂಬಂಧ ಕೂಡಿಬರಬಹುದು. ನಿರೀಕ್ಷೆ ಕೈಗೂಡ ಬಹುದು. ಕುಟುಂಬದಲ್ಲಿ ಸಂತೋಷದ ಸನ್ನಿವೇಶ.
ಕುಂಭ
ಹೊಸ ವಿಷಯಗಳಿಗೆ ತುಡಿಯುತ್ತೀರಿ. ಆದರೆ ನಿಮ್ಮ ಜೇಬಿನಿಂದ ಹೆಚ್ಚು ಹಣ ವ್ಯಯವಾಗಲಿದೆ. ನಿಮಗಿಂತಲೂ ಇತರರಿಗೆ ಹೆಚ್ಚು ಖರ್ಚು ಮಾಡುತ್ತೀರಿ.
ಮೀನ
ಏಳಿಗೆ ಬಯಸದ ವ್ಯಕ್ತಿಗಳು ನಿಮ್ಮ ವಿರುದ್ಧ ಕಾರ್ಯಾಚರಿಸುತ್ತಾರೆ. ಅವರ ಯೋಜನೆಯ ಬಗ್ಗೆ ಎಚ್ಚರದಿಂದಿರಿ. ದುಡುಕಿನ ವರ್ತನೆ ಸಲ್ಲದು.