ದಿನಭವಿಷ್ಯ: ದೇವರು ನಿಮಗೆಲ್ಲ ಕೊಟ್ಟಿದ್ದಾನೆ ಎನ್ನುವ ಸಂತೃಪ್ತ ಭಾವನೆ ಇರಲಿದೆ.. ಮನಸ್ಸಿಗೆ ನೆಮ್ಮದಿ

ಮೇಷ
ಹಲವು ವಿಚಾರಗಳ ತಾಕಲಾಟ. ಯಾವುದೇ ಒಂದು ನಿಶ್ಚಿತ ವಿಷಯದಲ್ಲಿ ಮನಸ್ಸು ನಿಲ್ಲುವುದಿಲ್ಲ. ಏಕಾಗ್ರತೆ ಕಷ್ಟವಾಗುವುದು. ಧ್ಯಾನ ಸಹಕಾರಿ.

ವೃಷಭ
ವೃತ್ತಿಯಲ್ಲಿ, ವ್ಯವಹಾರದಲ್ಲಿ ನಿಮ್ಮ ಊಹನೆಗಳು ನಿಜವಾಗುತ್ತವೆ. ಕೌಟುಂಬಿಕ ಅಶಾಂತಿ ನಿವಾರಣೆ. ನಿರಾಳ ಮನಸ್ಥಿತಿ.

ಮಿಥುನ
ನಿಮ್ಮ ಕೋಪತಾಪ ಏರುವ ಸಾಧ್ಯತೆಯಿದೆ. ಪರಿಸ್ಥಿತಿ ನಿಮ್ಮ ಪರವಾಗಿ ಇಲ್ಲದಿರುವುದು ಅದಕ್ಕೆ ಕಾರಣ. ಸಂಜೆ ವೇಳೆ ಮನಸ್ಸು ಸ್ಥಿಮಿತಕ್ಕೆ ಬರುವುದು.

ಕಟಕ
ಇತರರ ಮೇಲೆ ಮೇಲುಗೈ ಸಾಧಿಸಬೇಕೆಂಬ ಹಂಬಲ. ಅದನ್ನು ಸಾಧಿಸಲು ಅವಿವೇಕದ ನಿರ್ಧಾರ ತಾಳದಿರಿ. ಪರಿಸ್ಥಿತಿ  ಪ್ರತಿಕೂಲವಾದೀತು.

ಸಿಂಹ
ನಿಮ್ಮ ವ್ಯವಹಾರದಲ್ಲಿ ಉತ್ತಮ ಸಾಧನೆ. ಇತರರ ಶ್ಲಾಘನೆ ಲಭ್ಯ. ಕೌಟುಂಬಿಕ ಪರಿಸ್ಥಿತಿ ಆಹ್ಲಾದಕರ. ಹಣಕಾಸು ಸ್ಥಿತಿ ಸದೃಢ. ಒಟ್ಟಿನಲ್ಲಿ ನಿಮಗೆ ಸುದಿನ.

ಕನ್ಯಾ
ನಿಮ್ಮ ಮನಸ್ಥಿತಿ ಇಂದು ಸಹಜವಾಗಿರುವುದಿಲ್ಲ. ಆತಂಕ, ಅಸಹನೆ, ದುಗುಡ ಎಲ್ಲವೂ ಮೇಳೈಸಿದ ಸ್ಥಿತಿ. ಭಾವನೆಯಲ್ಲಿ ಏರುಪೇರು.

ತುಲಾ
ಕುಟುಂಬದಲ್ಲಿ ನಿಮ್ಮ ಮಾತು ಕೇಳುತ್ತಿಲ್ಲ ಎಂಬ ಕೊರಗು ಕಾಡೀತು. ಮೊದಲು ನಿಮ್ಮ ಅಹಂ ಬಿಡಿ. ಇತರರ ಏಳಿಗೆಯನ್ನು  ಮೆಚ್ಚಲು ಕಲಿಯಿರಿ.

ವೃಶ್ಚಿಕ
ಆರ್ಥಿಕ ಪರಿಸ್ಥಿತಿಯ ಪರಾಮರ್ಶೆ ನಡೆಸಿ. ಕೆಲವು ತಪ್ಪು ಸರಿಪಡಿಸಬೇಕು. ಕೌಟುಂಬಿಕ ಸಮಸ್ಯೆಯೊಂದು ಪರಿಹಾರ .

ಧನು
ಸಮಸ್ಯೆ ಬಗೆಹರಿಸುವಲ್ಲಿ ವಿನಯವಂತಿಕೆ  ಫಲ ನೀಡದು. ಕೆಲವಿಷಯಗಳಲ್ಲಿ ನೀವು ಕಠಿಣ ನಿಲುವು ತಳೆಯುವುದು ಅಗತ್ಯ. ಆರ್ಥಿಕ ಒತ್ತಡ.

ಕುಂಭ
ಮಾನಸಿಕ ಒತ್ತಡ. ಸಣ್ಣ ಒತ್ತಡವೂ ನಿಮಗೆ ಬೆಟ್ಟದಷ್ಟೆನಿಸುವುದು. ಸಣ್ಣ ಸಮಸ್ಯೆಯನ್ನು ನೀವಾಗಿ ಹಿಗ್ಗಿಸುವಿರಿ.  ಭಾವನೆಯ ಮೇಲೆ ನಿಯಂತ್ರಣ ಸಾಧಿಸಿ

ಮೀನ
ದೇವರು ಎಲ್ಲವನ್ನು ನಿಮಗೆ ಕೊಟ್ಟಿದ್ದಾನೆ ಎಂಬ ಸಂತೃಪ್ತ ಭಾವ ಇಂದು ತುಂಬಲಿದೆ. ಎಲ್ಲವೂ ಸರಿಯಾಗಿದೆ ಎಂಬಂತಹ ಧನ್ಯತೆ. ಆಪ್ತರ ಜತೆ ಕಾಲಕ್ಷೇಪ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here