ಮೇಷ
ನಿಮ್ಮ ಕೆಲವು ಕೆಲಸಗಳಿಗೆ ಇತರರಿಂದ ಸೂಕ್ತವಾದ ಸ್ಪಂದನೆ ದೊರಕದು.ಅದರಿಂದ ನಿಮಗೆ ನಿರಾಶೆ. ಕೌಟುಂಬಿಕ ಉದ್ವಿಗ್ನತೆ. ಖರ್ಚು ಹೆಚ್ಚುವುದು.
ವೃಷಭ
ಆಸ್ತಿಪಾಸ್ತಿ ವಿವಾದವಿದ್ದರೆ ಅದು ಸದ್ಯಕ್ಕೆ ಪರಿಹಾರ ಕಾಣದು. ವೃತ್ತಿಯಲ್ಲಿ ಸಮಸ್ಯೆ ಎದುರಿಸುವಿರಿ. ಪ್ರತಿಕೂಲ ಸ್ಥಿತಿಯಲ್ಲೂ ಸಮಾಧಾನ ಕಾಯ್ದುಕೊಳ್ಳಿ.
ಮಿಥುನ
ಉನ್ನತ ವಿಷಯಗಳ ಕುರಿತು ಇಂದು ಚಿಂತಿಸುವಿರಿ. ದೈನಂದಿನ ವ್ಯವಹಾರ ನಿಮಗೆ ಮಹತ್ವದೆನಿಸದು. ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ.
ಕಟಕ
ಇತರರ ಜತೆ ಸಂವಹನ ಕೊರತೆ. ಇದರಿಂದಾಗಿ ಯಾವುದೇ ಕೆಲಸ ಸಮಾಧಾನಕರವಾಗಿ ನಡೆಯದು. ಬಂಧುಗಳ ಜತೆ ಸೌಹಾರ್ದದಿಂದ ನಡಕೊಳ್ಳಿ.
ಸಿಂಹ
ಪ್ರೀತಿಯ ವಿಷಯದಲ್ಲಿ ಹೆಚ್ಚು ವ್ಯಸ್ತರಾಗುವಿರಿ. ಸಂಗಾತಿಯಿಂದ ಸೂಕ್ತ ಪ್ರತಿಸ್ಪಂದನೆ. ಆರ್ಥಿಕವಾಗಿ ಹೆಚ್ಚು ವ್ಯಯ. ಆರೋಗ್ಯ ಸುಸ್ಥಿರ.
ಕನ್ಯಾ
ಮಾನಸಿಕವಾಗಿ ಬಳಲಿಕೆ. ಇದು ನಿಮ್ಮ ದೇಹದ ಮೇಲೂ ಪರಿಣಾಮ ಬೀರುವುದು. ಕೆಲಸಗಳು ನಿಧಾನ. ಸಣ್ಣ ವಿಷಯಕ್ಕೂ ಅಧಿಕ ಚಿಂತಿಸಬೇಡಿ.
ತುಲಾ
ಹೆಚ್ಚು ದುಡಿಮೆ, ಹೆಚ್ಚು ಆಯಾಸ. ಆದರೂ ಅದರಲ್ಲಿ ನಿಮಗೆ ತೃಪ್ತಿಯಿದೆ. ನಿಮ್ಮ ಮೆಚ್ಚಿನ ಇತರ ಕ್ಷೇತ್ರಗಳತ್ತ ಗಮನ ಹರಿಸಲು ಸಕಾಲ.
ವೃಶ್ಚಿಕ
ಇಂದು ನಿಮ್ಮ ಮನಸ್ಥಿತಿ ಎಂದಿನಂತೆ ಇರಲಾರದು. ಅವಶ್ಯ ವ್ಯವಹಾರಗಳಿಗೆ ತಕ್ಷಣಕ್ಕೆ ಸ್ಪಂದಿಸಲು ವಿಫಲರಾಗುವಿರಿ. ವಂಚಕ ಜನರ ಕುರಿತು ಎಚ್ಚರಿಕೆಯಿಂದಿರಿ.
ಧನು
ಕೆಲಸದೆಡೆಗೆ ನಿಮ್ಮ ಮನಸ್ಸು ಇರದು. ಬೇರಾವುದೋ ವಿಷಯ ಮನಸ್ಸನ್ನು ಹೆಚ್ಚು ಆವರಿಸಲಿದೆ. ಬಂಧುಗಳ ಜತೆ ಆತ್ಮೀಯ ಕಾಲಕ್ಷೇಪ.
ಮಕರ
ಆಪ್ತರ ಜತೆ ಅಭಿಪ್ರಾಯಭೇದ ಉಂಟಾದೀತು. ಅದರಿಂದ ಮನಸ್ಸಿನ ಶಾಂತಿ ಕದಡಬಹುದು. ಹೊಂದಾಣಿಕೆಯಿಂದ ವರ್ತಿಸಿ.
ಕುಂಭ
ಆರೋಗ್ಯಸಮಸ್ಯೆ. ಕೆಲವು ವಿಷಯಗಳ ಕುರಿತು ಗೊಂದಲದ ಮನಸ್ಥಿತಿ. ಸರಿಯಾದ ನಿರ್ಧಾರ ತಾಳಲಾಗದೆ ತೊಳಲಾಟ. ಧಾರ್ಮಿಕ ವಿಷಯದತ್ತ ಒಲವು.
ಮೀನ
ಇಂದು ನೀವು ಗುರಿ ಸಾಧಿಸುವಿರಿ. ಈ ಕುರಿತಾದ ಅಡ್ಡಿಗಳ ನಿವಾರಣೆ. ಕುಟುಂಬದ ಕುರಿತು ಹೆಚ್ಚು ಗಮನ ಹರಿಸುವಿರಿ. ಖರ್ಚು ಅಧಿಕವಾಗಲಿದೆ.