ದಿನಭವಿಷ್ಯ: ಅತಿಯಾದ ಭಾವುಕತೆ ಒಳ್ಳೆಯದಲ್ಲ, ಈ ವಿಷಯದ ಬಗ್ಗೆ ಗಮನ ಇರಲಿ..

ಮೇಷ
ನಿಮ್ಮ ಮೇಲೆ ಇಂದು  ಹೆಚ್ಚುವರಿ ಹೊಣೆ ಬೀಳಲಿದೆ. ಅದು ನಿಮಗೆ ಚಿಂತೆಗೆ ಕಾರಣವಾಗುವುದು. ಮಾತಿನ ಮೇಲೆ ನಿಯಂತ್ರಣವಿರಲಿ,

ವೃಷಭ
ನಿಮ್ಮ ಕೆಲಸದಲ್ಲಿ ಉತ್ತಮ ನಿರ್ವಹಣೆ ತೋರಿದ ತೃಪ್ತಿ ಇಂದು ಸಿಗುವುದು. ಆರ್ಥಿಕ ಮುಗ್ಗಟ್ಟು ಪರಿಹಾರ. ಶುಭ ಸಮಾರಂಭದಲ್ಲಿ ಭಾಗಿಯಾಗುವಿರಿ.

ಮಿಥುನ
ಕೌಟುಂಬಿಕ  ಭಿನ್ನಮತ ಉಂಟಾದೀತು. ಅದನ್ನು ಅಲ್ಲಿಗೇ ಮುಗಿಸಿಬಿಡಿ. ವಿಕೋಪಕ್ಕೆ ಕೊಂಡು ಹೋಗಬೇಡಿ.  ಆಪ್ತ ಬಂಧುಗಳ ಕಿವಿಮಾತು  ಕೇಳಿರಿ.

ಕಟಕ
ಪ್ರಮುಖ ಕಾರ್ಯದ ಹೊಣೆ ನಿಮ್ಮ ಮೇಲೆ ಬೀಳುವುದು. ಅದನ್ನು ಸರಿಯಾಗಿ ನಿಭಾಯಿಸಿ. ಅನಿರೀಕ್ಷಿತ ಧನಲಾಭ. ಖಾಸಗಿ ಬದುಕಿನಲ್ಲಿ ನೆಮ್ಮದಿ, ಸಮಾಧಾನ.

ಸಿಂಹ
ಹಿರಿಯರ ಜತೆ ವಾಗ್ವಾದಕ್ಕೆ ಹೋಗದಿರಿ. ನೀವಾಗಿ ಮನಸ್ಸಿನ ಶಾಂತಿ ಕೆಡಿಸಿಕೊಳ್ಳುವ ಕಾರ್ಯಕ್ಕೆ ಹೋಗದಿರಿ. ಕೌಟುಂಬಿಕ ಸೌಹಾರ್ದ ಕಾಪಾಡಿರಿ.

ಕನ್ಯಾ
ತಲೆಯಲ್ಲಿರುವ ಚಿಂತೆಯ ಹೊರೆ ಕೆಳಗಿಳಿಸಿ. ಅನವಶ್ಯ ವಿಷಯಗಳ ಕುರಿತು ಆಲೋಚನೆಗೆ ತೊಡಗದಿರುವುದೇ ಅದಕ್ಕೆ ಪರಿಹಾರ.

ತುಲಾ
ನಿಮ್ಮ ಕೆಲಸದ  ಕಡೆ ಗಮನ ಕೊಡಿ. ನಿಮ್ಮ ಮನಸ್ಸು ಬೇರೆಡೆಗೆ ಸೆಳೆಯುವಂತಹ ಪ್ರಸಂಗ ಬಂದೀತು. ಆತ್ಮೀಯರ ಜತೆ ಕಾಲ ಕಳೆಯುವ ಅವಕಾಶ.

ವೃಶ್ಚಿಕ
ಬದುಕೇ ಸಮಸ್ಯೆಯಿಂದ ತುಂಬಿದೆ ಎಂಬಂಥ ಭಾವನೆ ಉಂಟಾದೀತು. ಆದರೆ ಅಪರಾಹ್ನದ ನಂತರ ಎಲ್ಲವೂ ಸುಖಮಯ ಆಗುವುದು. ನಿರಾಳತೆ.

ಧನು
ಪ್ರೀತಿಪಾತ್ರರ ವಿಷಯ ದಲ್ಲಿ ಭಾವುಕರಾಗಿ ವರ್ತಿಸುವಿರಿ. ಭಾವನೆಯ ಅಭಿವ್ಯಕ್ತಿಯಲ್ಲಿ ಎಚ್ಚರ ವಹಿಸಿರಿ. ಸಂಬಂಧ ಕೆಡದಂತೆ ನೋಡಿಕೊಳ್ಳಿ.

ಮಕರ
ಮನಸ್ಸಿಗೆ ನಿರಾಳತೆ, ಸಂತೋಷ ತರುವ ದಿನ. ಬಂಧು ಪ್ರೀತಿ. ಮಾಡಬೇಕೆಂದ ಕಾರ್ಯದಲ್ಲಿ ಯಶಸ್ಸು.  ಧನಲಾಭ. ಆರೋಗ್ಯ ಸಮಸ್ಯೆ ಕಾಡದು.

ಕುಂಭ
ವೃತ್ತಿಯಲ್ಲಿ ಮತ್ತು ಖಾಸಗಿ ಬದುಕಲ್ಲಿ ಸಮನ್ವಯ ಸಾಧಿಸಲು ಸಫಲರಾಗುವಿರಿ. ಇದರಿಂದ ಕೌಟುಂಬಿಕ ನೆಮ್ಮದಿ, ಭಿನ್ನಮತ ನಿವಾರಣೆ.

ಮೀನ
ಅತಿಯಾದ ಭಾವುಕತೆ ಬಿಡಿ. ಅಭದ್ರತೆಯ ಭಾವನೆ ತ್ಯಜಿಸಿ. ಆರ್ಥಿಕವಾಗಿ ಪ್ರಗತಿ. ವೃತ್ತಿ ಕಾರ್ಯದಲ್ಲಿ ತಪ್ಪಾಗದಂತೆ ಎಚ್ಚರ ವಹಿಸಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!