ಮೇಷ
ಬೇರೆಯವರ ಸಮಸ್ಯೆ ಪರಿಹರಿಸಲು ಉತ್ಸಾಹ ತೋರುವಿರಿ.ಆದರೆ ನಿಮ್ಮ ಸಮಸ್ಯೆಕಡೆಗಣಿಸಬೇಡಿ. ಕೌಟುಂಬಿಕ ಭಿನ್ನಮತ ನಿವಾರಿಸಲು ಉಪಕ್ರಮ ತೆಗೆದುಕೊಳ್ಳಿ.
ವೃಷಭ
ಕಾನೂನಿನ ತೊಡಕಿಗೆ ಸಿಲುಕಿಕೊಂಡಿರುವವರಿಗೆ ಇಂದು ನಿರಾಳತೆ. ಕೌಟುಂಬಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಬಂಧುಗಳ ಭೇಟಿ.
ಮಿಥುನ
ದೈನಂದಿನ ಕಾರ್ಯಗಳಿಂದ ವಿಮುಖರಾಗಿ ಹೊಸತನಕ್ಕೆ ತುಡಿಯುವಿರಿ. ಹೊಸ ಕಾರ್ಯ ಆರಂಭಿಸಲು ಸೂಕ್ತ ಕಾಲ.
ಕಟಕ
ಕುಟುಂಬ ಸದಸ್ಯರ ಉದ್ದೇಶದ ಬಗ್ಗೆ ಅನುಮಾನ ಪಡಬೇಡಿ. ಅವರು ನಿಮ್ಮ ಬಗ್ಗೆ ಕಾಳಜಿ ಹೊಂದಿದ್ದಾರೆ ಎಂಬುದನ್ನು ಅರಿಯಿರಿ. ವದಂತಿ ನಂಬದಿರಿ.
ಸಿಂಹ
ವೃತ್ತಿಯಲ್ಲಿ ಯಶಸ್ಸು. ನಿಮ್ಮ ನಿರ್ವಹಣೆ ಇತರರ ಗಮನ ಸೆಳೆಯುವುದು. ಆರ್ಥಿಕವಾಗಿ ಲಾಭ. ವಿದ್ಯಾರ್ಥಿಗಳಿಗೆ ಶುಭ ಬೆಳವಣಿಗೆ. ಸಂಬಂಧ ವೃದ್ಧಿಸುವುದು.
ಕನ್ಯಾ
ಪ್ರೀತಿಪಾತ್ರರೊಂದಿಗೆ ಹೆಚ್ಚು ಕಾಲ ಕಳೆಯುವ ಅವಕಾಶ. ನಿಮ್ಮ ಏಳಿಗೆ ಕಂಡು ಸಹಿಸಲಾಗದವರು ನಿಮ್ಮ ವಿರುದ್ಧ ಪಿತೂರಿ ಮಾಡಿಯಾರು.
ತುಲಾ
ಪ್ರತಿ ಸಮಸ್ಯೆಗೂ ಪರಿಹಾರವಿದೆ. ಇದನ್ನು ನೀವು ಇಂದು ಅರಿತುಕೊಳ್ಳಬೇಕು. ಹತಾಶರಾಗಿ ಕೈಚೆಲ್ಲದಿರಿ. ಹದಗೆಟ್ಟ ಸಂಬಂಧ ಸರಿಮಾಡಿಕೊಳ್ಳಿ.
ವೃಶ್ಚಿಕ
ವಿವೇಕಕ್ಕಿಂತಲೂ ಹೃದಯದ ಭಾವನೆಗೆ ಇಂದು ಹೆಚ್ಚು ಬೆಲೆ ಕೊಡುವಿರಿ. ಅತಾರ್ಕಿಕವಾಗಿ ಚಿಂತಿಸುವಿರಿ. ಭಾವನಾತ್ಮಕ ನೋವು.
ಧನು
ನಿಮ್ಮ ಉತ್ಸಾಹವು ಕಠಿಣ ಕಾರ್ಯವನ್ನೂ ಸುಲಭವಾಗಿಸುವುದು. ಬೇರೆಯವರೂ ನಿಮ್ಮ ಮಾರ್ಗ ಅನುಸರಿಸುತ್ತಾರೆ. ಧನಲಾಭ.
ಮಕರ
ಬಯಸಿದ ಕಾರ್ಯ ವಾಗದಿದ್ದರೆ ಹತಾಶರಾಗದಿರಿ. ಅದರಿಂದ ವಿನಾಶ ವೇನೂ ಸಂಭವಿಸದು. ಗ್ರಹಗತಿ ಬದಲಾಗುವ ಲಕ್ಷಣವಿದೆ.
ಕುಂಭ
ಮುಖವಾಡ ಧರಿಸಿ ವ್ಯವಹರಿಸುವವರ ಕುರಿತು ಎಚ್ಚರವಿರಿ. ನಗುತ್ತಲೇ ನಿಮ್ಮ ವಿರುದ್ಧ ಕಾರ್ಯಾಚರಿಸುತ್ತಾರೆ. ಅವರಿಂದ ದೂರವಿದ್ದರೆ ನಿಮಗೇ ಒಳಿತು.
ಮೀನ
ಸುತ್ತಲಿನ ಪರಿಸ್ಥಿತಿ
ಯನ್ನು ಸೂಕ್ಷ್ಮವಾಗಿ ಗಮನಿಸಿ ಕಾರ್ಯ ಎಸಗಬೇಕು. ಭಾವುಕತೆ ಯಿಂದ ವರ್ತಿಸದಿರಿ. ಕೌಟುಂಬಿಕ ಅಸಮಾಧಾನ.