Saturday, October 11, 2025

ದಿನಭವಿಷ್ಯ: ಇಂದು ಉತ್ಸಾಹದ ದಿನ, ಹುರುಪು ತೋರುವಿರಿ

ಮೇಷ
ಕೆಲ ವಿಚಾರದಲ್ಲಿ  ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಿ. ಯಾರಿಗೋ ನೋವಾಗುವುದೆಂದು ಹಿಂಜರಿಯದಿರಿ. ಈ ದಿನ ಖರ್ಚು ಅಧಿಕ.
ವೃಷಭ
ಕಾಟಾಚಾರದ ಕೆಲಸ ಮಾಡಬೇಡಿ. ಅದರಲ್ಲಿ ಗುಣಮಟ್ಟವೂ ಬೇಕು. ಇದನ್ನು ಅರಿಯಿರಿ. ಕೌಟುಂಬಿಕ ವಾಗ್ವಾದ ಉಂಟಾದೀತು.  
ಮಿಥುನ
ಇತ್ತೀಚಿನ ಹೂಡಿಕೆ ಯೊಂದು ಉತ್ತಮ -ಲ ನೀಡಲಿದೆ. ಬಂಧುಗಳ ಸಹಕಾರ. ಸಾಂಸಾರಿಕ ಸಮಸ್ಯೆ ನೀಗುವುದು. ಹಣದ ಬಿಕ್ಕಟ್ಟು ಪರಿಹಾರ.
ಕಟಕ
ವಿಶ್ವಾಸದಿಂದ ವ್ಯವಹಾರ ಆರಂಭಿಸಿ. ಯಶ ಸಿಗುವುದು. ಬೇಸರದ ಮನಸ್ಥಿತಿ ನಿವಾರಣೆ. ಆರೋಗ್ಯ ಪರಿಸ್ಥಿತಿ ಸುಸ್ಥಿರ.      
ಸಿಂಹ
ಕೌಟುಂಬಿಕ ಸಾಮರಸ್ಯ ಕಾಯಲು ಹೆಚ್ಚು ಗಮನ ಕೊಡಿ. ಸಣ್ಣ ವಿಷಯ ವಾಗ್ವಾದಕ್ಕೆ ಕಾರಣವಾಗದಂತೆ ನೋಡಿಕೊಳ್ಳಿ. ಕನ್ಯಾ
ಗುರಿ ಸಾಧನೆಯ ಹಾದಿ ಕಷ್ಟವೆಂದು ತೋರಿದರೂ ನಿಜವಾಗಿ ಹಾಗಿಲ್ಲ. ಅಂದುಕೊಂಡ ಕಾರ್ಯ ಸುಲಲಿತವಾಗಿ ಸಾಗಲಿದೆ. ಧನಪ್ರಾಪ್ತಿ.
ತುಲಾ
ಅನುಕೂಲಕರ ದಿನ. ಹೊಸ ಸ್ನೇಹ ಬೆಳೆಯಬಹುದು. ವೃತ್ತಿಯಲ್ಲಿ ಯಶಸ್ಸು. ಆದರೆ ಮನೆಯಲ್ಲಿ ಒತ್ತಡ ಹೆಚ್ಚುವುದು.  
ವೃಶ್ಚಿಕ
ಆದಾಯ ಹೆಚ್ಚಳದ ಸಾಧ್ಯತೆ. ವ್ಯವಹಾರದಲ್ಲಿ ಯಶಸ್ಸು. ನಿಮ್ಮ ಸ್ವಭಾವ ಎಲ್ಲರಿಂದ ಮೆಚ್ಚುಗೆಗೆ ಒಳಗಾಗಲಿದೆ. ಆಹಾರ ಹಿತಮಿತವಾಗಿರಲಿ.  
ಧನು
ಉತ್ಸಾಹದ ದಿನ. ಹಾಗಾಗಿ ಕೆಲಸದಲ್ಲಿ  ಹುರುಪು ತೋರುವಿರಿ. ಉದ್ದಿಮೆಯಲ್ಲಿ ಯಶ. ಕೌಟುಂಬಿಕ ಕ್ಲೇಶ ನಿವಾರಣೆ, ನಿರಾಳತೆ.
ಮಕರ
 ವಾಗ್ವಾದ, ಸಂಘರ್ಷ ಇಂದಿನ ಬೆಳವಣಿಗೆ. ಅದನ್ನು ತಪ್ಪಿಸುವುದೇ ನಿಮ್ಮ ಆದ್ಯತೆಯಾಗಲಿ. ಹೆಸರು ಕೆಡದಂತೆ ವರ್ತಿಸುವುದು ಅಗತ್ಯ.
ಕುಂಭ
ಎಲ್ಲವನ್ನೂ ನಿಮ್ಮದೇ ದೃಷ್ಟಿಕೋನದಲ್ಲಿ ನೋಡುವುದು ಸರಿಯಲ್ಲ. ನಿಮ್ಮ ಹಠಮಾರಿ ಧೋರಣೆ ವಾಗ್ವಾದಕ್ಕೆ ಕಾರಣವಾದೀತು.
 ಮೀನ
ಕೆಟ್ಟ ಆಹಾರ ಸೇವನೆಯಿಂದ ಹೊಟ್ಟೆ ಕೆಡಬಹುದು. ಪ್ರಮುಖ ವಿಚಾರದಲ್ಲಿ ಬಂಧುಗಳ ಅಸಹಕಾರ.  ಹಣದ ಚಿಂತೆ ಪರಿಹಾರ.

error: Content is protected !!