ದಿನಭವಿಷ್ಯ: ಸಂವಹನ ಸಾಮರ್ಥ್ಯವೇ ನಿಮ್ಮ ಶಕ್ತಿ, ಎಲ್ಲಾ ಸಮಸ್ಯೆಗೆ ಇದರಿಂದಲೇ ಸಿಗುತ್ತೆ ಪರಿಹಾರ Don’t Worry!

ಮೇಷ
ಯಾವುದೇ ವಿಚಾರದಲ್ಲಿ ಆತುರ ಸಲ್ಲದು. ಅದರಿಂದ ಕಾರ್ಯ ಸಫಲವಾಗದು. ಸರಿಯಾಗಿ ಯೋಚಿಸಿ ಕಾರ್ಯವೆಸಗಿ.

ವೃಷಭ
ಯಾವುದೇ ವಿಚಾರದಲ್ಲಿ ಅತಿಯಾದ ಮೋಹ ಸಲ್ಲದು. ಅದರಿಂದ ಬಿಕ್ಕಟ್ಟು.  ಆಪ್ತರ ಜತೆ ಸಂಘರ್ಷ ನಡೆಯಬಹುದು.

ಮಿಥುನ
ಕುಟುಂಬ ಸದಸ್ಯರ ಜತೆ ವಾಗ್ವಾದ. ಅದು  ಉಲ್ಬಣಕ್ಕೆ ಹೋಗದಂತೆ ನೋಡಿಕೊಳ್ಳಿ. ಖರ್ಚು ಹೆಚ್ಚಳ ಚಿಂತೆಗೆ ಕಾರಣ. ಕೌಟುಂಬಿಕ ಸಹಕಾರ.

ಕಟಕ
ನಿಮ್ಮ ಮಹತ್ವಾಕಾಂಕ್ಷೆ ಈಡೇರುವ ಸಂಕೇತ ಸಂಭವ. ಅದಕ್ಕೆ ಪೂರಕವಾದ ಕಾರ್ಯ ಮಾಡಿರಿ. ನಿಮ್ಮ ಸಾಧನೆಗೆ ಇತರರ ಮೆಚ್ಚುಗೆ.

ಸಿಂಹ
ನಿಮ್ಮ ಸಂವಹನ  ಸಾಮರ್ಥ್ಯದಿಂದಲೇ ಕೆಲಸ ಸಾಧಿಸುವಿರಿ. ಎಲ್ಲರೊಂದಿಗೆ ಉತ್ತಮ ವಾಗಿ ಮಾತನಾಡುವ ಕಲೆ ನೆರವಿಗೆ ಬರಲಿದೆ.

ಕನ್ಯಾ
ಯಾವುದೇ ಕಾರ್ಯದಲ್ಲಿ ಇಂದು ಗೆಲುವು ನಿಶ್ಚಿತ. ವಿರೋಧಗಳು ನಿಮ್ಮನ್ನು ಕಾಡಲಾರವು. ಧನ ಲಾಭ. ಕೌಟುಂಬಿಕ ನೆಮ್ಮದಿ.

ತುಲಾ
ವಿವೇಕಕ್ಕಿಂತಲೂ ಭಾವನೆಗೆ ಇಂದು ಹೆಚ್ಚು ಆದ್ಯತೆ ಕೊಡುವಿರಿ. ಇದರಿಂದ ಮನಸ್ಸಿಗೆ ನೋವಾದೀತು. ಆಪ್ತರ ವರ್ತನೆಯಿಂದ ಬೇಸರ.

ವೃಶ್ಚಿಕ
ಭಾವನೆ ಮತ್ತು ತರ್ಕದ ಮಧ್ಯೆ ಸಮತೋಲನ ಇರಲಿ. ಭಾವನಾತ್ಮಕ ಏರುಪೇರು ನಿಭಾಯಿಸಿ. ಕೌಟುಂಬಿಕ ಬಿಕ್ಕಟ್ಟು ಪರಿಹರಿಸಿ.

ಧನು
ಉತ್ತಮ ಕಾರ್ಯದಿಂದ ನಿಮ್ಮ ಸುತ್ತಲಿನ ಜನರ ಮೆಚ್ಚುಗೆಗಳಿಸು ವಿರಿ. ಹಣಕಾಸು ಲಾಭ ಉಂಟಾದೀತು. ಆರೋಗ್ಯ ಸುಧಾರಣೆ.

ಮಕರ
ಆತ್ಮೀಯರೊಬ್ಬರ ಆರೋಗ್ಯ ಚಿಂತೆಗೆ ಕಾರಣ ವಾದೀತು. ಬಳಿಕ ಈ ಚಿಂತೆ ಪರಿಹಾರ ಕಾಣುವುದು. ಖರ್ಚುವೆಚ್ಚಗಳು ಇಂದು ಹೆಚ್ಚಲಿದೆ.

ಕುಂಭ
ಸಮಸ್ಯೆ ಕಾಡಿದರೂ ಎದೆಗುಂದದಿರಿ. ಅದನ್ನು ಎದುರಿಸುವ ಧೈರ್ಯ ತೋರಿ. ದಿನದಂತ್ಯಕ್ಕೆ ಎಲ್ಲವೂ ಸುಗಮ. ಬಂಧುಗಳ ಭೇಟಿ.

ಮೀನ
ಹಿರಿಯರಿಂದ ನಿಮಗಿಂದು ಲಾಭ. ಅವರ ಮಾತು ಕೇಳಿರಿ. ಕಾನೂನು ಸಂಘರ್ಷದಲ್ಲಿ ತೊಡಗಿದ್ದರೆ ಇಂದು ಹಿನ್ನಡೆ ಸಂಭವ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!