February 4, 2026
Wednesday, February 4, 2026
spot_img

ದಿನಭವಿಷ್ಯ: ಸಂತೋಷ ಅನುಭವಿಸಬೇಕಾದಾಗ್ಲೂ ಚಿಂತೆ ಯಾಕೆ? ಹೊಸ ಅವಕಾಶ ಕಾದಿದೆ

ಮೇಷ
ಕೆಲಸದ ಒತ್ತಡದಿಂದ ಹೊರಬನ್ನಿ. ಸಂತೋಷ ಅನುಭವಿಸುವಾಗಲೂ ಚಿಂತೆ ಬಿಡಿ. ಕೌಟುಂಬಿಕ ಪರಿಸರದಲ್ಲೂ ಆನಂದ ಇದೆ ಎಂದರಿಯಿರಿ.  
ವೃಷಭ
ನಿಮ್ಮ ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆ ತನ್ನಿರಿ. ಇದರಿಂದ ಕೆಲವಾರು ಸಮಸ್ಯೆ ಪರಿಹಾರವಾಗಲಿದೆ. ಸಾಂಸಾರಿಕ ಸೌಹಾರ್ದ.  
ಮಿಥುನ
ಹೊಸ ಅವಕಾಶ ನಿಮಗೆ ತೆರೆಯಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಕಳೆದು ಹೋದುದಕ್ಕೆ ಚಿಂತಿಸುತ್ತಾ ಕೂರಬೇಡಿ.    
ಕಟಕ
ಕೆಲವು ವಿಷಯ ಆತಂಕ ಸೃಷ್ಟಿಸುವುದು. ಅದಕ್ಕೆ ಆಧಾಡಿಏರವಿಲ್ಲ. ನಿಮಗೆ ಯಾವ ಹಾನಿಯೂ ತಟ್ಟದು. ನಿಶ್ಚಿಂತೆಯಿಂದಿರಿ.        
ಸಿಂಹ
ಏನೋ ಮಾಡಲು ಹೋಗಿ ಇನ್ನೇನೋ ಆದೀತು. ಹಾಗಾಗಿ ನಿಮ್ಮ ಕೆಲಸದಲ್ಲಿ ಎಚ್ಚರ ವಹಿಸಿರಿ. ದುಡುಕಿನ ಕ್ರಮ ಪ್ರತಿಕೂಲವಾದೀತು.        
ಕನ್ಯಾ
 ಮನದ ಬೇಗುದಿ ಸಂತೋಷ ಅನುಭವಿಸಲು ಅಡ್ಡಿ ತರುತ್ತದೆ. ಉದ್ಯಮಿಗಳು ಯೋಚಿಸಿ ನಿರ್ಧಾರ ತಾಳಬೇಕು. ಗೃಹಿಣಿಯರಿಗೆ ಒತ್ತಡ.    
ತುಲಾ
 ವ್ಯವಹಾರ ಸುಗಮ. ಸಂಭವನೀಯ ವಿಘ್ನ ನಿವಾರಣೆ. ಒತ್ತಡದ ಸನ್ನಿವೇಶ ಸೃಷ್ಟಿಯಾದರೂ ಸಮಾಧಾನದಿಂದಿರಿ. ಭಾವಾವೇಶ ಬೇಡ.
ವೃಶ್ಚಿಕ
ನಿಮ್ಮ ಕೆಲಸಕ್ಕೆ  ಕೆಲವರು ಅಡ್ಡಗಾಲು ಹಾಕಲೆತ್ನಿಸುವರು. ಅವರನ್ನು ದೂರವಿಡಿ. ಖರ್ಚು ಕಡಿಮೆ ಮಾಡಲು ಮೊದಲು ಗಮನ ಕೊಡಿ.    
ಧನು
ಹೆಚ್ಚು ಪ್ರಾಕ್ಟಿಕಲ್ ಆಗಿ ವರ್ತಿಸಿರಿ. ಸಣ್ಣ ವಿಷಯಕ್ಕೂ ಭಾವುಕರಾಗಿ ಚಿಂತಿಸದಿರಿ. ಆತ್ಮೀಯ ವ್ಯಕ್ತಿಯ ಜತೆ ವಿರಸ ಕಟ್ಟಿಕೊಳ್ಳಬೇಡಿ.  
ಮಕರ
ಹೊಸ ವ್ಯವಹಾರಕ್ಕೆ ಕೈಹಾಕುವಾಗ ಎಚ್ಚರ ಇರಲಿ. ವಿಘ್ನಗಳು ಕಾಡಬಹುದು. ಕೆಲವರ  ಜತೆ  ವಾಗ್ವಾದ ನಡೆದೀತು.  ಸಂಯಮ ಮುಖ್ಯ.      
ಕುಂಭ
ನಿಮ್ಮ ಪ್ರಗತಿಗೆ ಅಡ್ಡಿ ತರುತ್ತಿರುವ ವಿಷಯ ಮೊದಲಿಗೆ ಇತ್ಯರ್ಥ ಮಾಡಿಕೊಳ್ಳಿ. ಅದನ್ನು ಬೆಳೆಯಲು ಬಿಡಬೇಡಿ. ಟೀಕೆಗೆ ಎರವಾಗದಿರಿ.
 ಮೀನ
ಸ್ವಂತ ವ್ಯವಹಾರದಲ್ಲಿ ಎಚ್ಚರದಿಂದ ಹೆಜ್ಜೆ ಇಡಿ. ವಂಚನೆಗೆ ಒಳಗಾಗುವ ಸಾಧ್ಯತೆ ಇದೆ. ಯಾರನ್ನೂ ಕುರುಡಾಗಿ ನಂಬದಿರಿ. ವೃತ್ತಿಯಲ್ಲಿ ಉನ್ನತಿ.    

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !