Saturday, September 23, 2023

Latest Posts

ದಿನಭವಿಷ್ಯ: ಸಂಗಾತಿ ಜತೆ ಅಹಂ ಭಾವ ತ್ಯಜಿಸಿ, ಇಲ್ಲವಾದರೆ ಅದರಿಂದಲೇ ಭಿನ್ನಮತ ಉಂಟಾದೀತು

ಮೇಷ
ವೃತ್ತಿಯಲ್ಲಿ ಮತ್ತು ವೈಯಕ್ತಿಕ ಬದುಕಿನಲ್ಲಿ ನಿಮಗೆ ಅನುಕೂಲಕರ  ಬೆಳವಣಿಗೆ. ಪ್ರೀತಿಯ ವಿಚಾರದಲ್ಲಿ ಯಶಸ್ಸು ಸಾಧಿಸುವಿರಿ. ಕಹಿ ಭಾವನೆ ನಿವಾರಣೆ.

ವೃಷಭ
ನಿಮ್ಮ ನಿರ್ವಹಣೆಗೆ ಇತರರಿಂದ ಮೆಚ್ಚುಗೆ. ಆರೋಗ್ಯ ಸಮಸ್ಯೆ ಪರಿಹಾರ. ಹಣ ಸಾಲ ಪಡೆಯುವ ಕಾರ್ಯಕ್ಕೆ ಹೋಗದಿರಿ. ಅದು ಪ್ರತಿಕೂಲವಾದೀತು.

ಮಿಥುನ
ವೃತ್ತಿ ಕ್ಷೇತ್ರದಲ್ಲಿ  ಹಿತಕರ ವಾತಾವರಣ. ಎಲ್ಲರ ಜತೆ ಸೌಹಾರ್ದ. ವೃತ್ತಿಯಲ್ಲಿ ಸಂತೃಪ್ತಿ. ಆರ್ಥಿಕ ಸ್ಥಿತಿ ಉತ್ತಮ. ಆಪ್ತರ ಜತೆ ಉತ್ತಮ ಕಾಲಕ್ಷೇಪ.

ಕಟಕ
ಮಾನಸಿಕ ಒತ್ತಡ ಹೆಚ್ಚಿಸುವ ಪರಿಸ್ಥಿತಿ ಎದುರಿಸುವಿರಿ. ಆತ್ಮೀಯರಿಂದ ಸಂವೇದನಾರಾಹಿತ್ಯ. ಅದರಿಂದ ಮನಸ್ಸಿಗೆ ನೋವು.

ಸಿಂಹ
ಸಂಗಾತಿ ಜತೆ ಅಹಂ ಭಾವ ತ್ಯಜಿಸಿ. ಇಲ್ಲವಾದರೆ ಅದರಿಂದಲೇ ಭಿನ್ನಮತ ಉಂಟಾದೀತು. ಹೊಂದಾಣಿಕೆಗೆ ಆದ್ಯತೆ ಕೊಡಿರಿ.

ಕನ್ಯಾ
ಗೊಂದಲದ ಮನಸ್ಥಿತಿ. ಕೆಲಸದ ಕ್ಷೇತ್ರದಲ್ಲಿ ಖಾಸಗಿ ಸಮಸ್ಯೆ ಬದಿಗಿಟ್ಟು ವ್ಯವಹರಿಸಿ. ಹಣದ ವಿಷಯ ತುಸು ಚಿಂತೆಗೆ ಕಾರಣವಾದೀತು.

ತುಲಾ
ನಿಮ್ಮ ಇಷ್ಟಕೆ ವಿರುದ್ಧವಾದ ಬೆಳವಣಿಗೆ ಸಂಭವಿಸ ಬಹುದು. ಸಹನೆ ಕಾಯ್ದುಕೊಳ್ಳಿ. ಆತುರದ ಪ್ರತಿಕ್ರಿಯೆ ತೋರಬೇಡಿ.

ವೃಶ್ಚಿಕ
ಆತ್ಮೀಯರ ಜತೆ ಭಿನ್ನಮತ, ವಾಗ್ವಾದ ಸಂಭವ. ಆದರೆ ಅದು ಅಲ್ಪಕಾಲದ್ದು. ಮತ್ತೆ ಎಲ್ಲ ಸರಿಯಾಗುವುದು. ಮನದಲ್ಲಿ ಕಹಿ ಇಟ್ಟುಕೊಳ್ಳದಿರಿ. ಅದರಿಂದ ಒಳಿತು.

ಧನು
ಇಂದಿನ ದಿನವು ಸುಗಮವಾಗಿ ಸಾಗುವುದು. ಎಲ್ಲರ ಜತೆ ಸಂಬಂಧ ಸುಧಾರಿಸುವುದು. ಕೌಟುಂಬಿಕ ಸಾಮರಸ್ಯ, ಸಹಕಾರ.

ಮಕರ
ಆರ್ಥಿಕ ಕೊರತೆ ಎದುರಿಸುವಿರಿ. ಕೌಟುಂಬಿಕ ಬದುಕಿನಲ್ಲಿ ಕೆಲವು ಸಮಸ್ಯೆ ಎದುರಿಸುವಿರಿ. ಅದನ್ನು ನಾಜೂಕಿನಿಂದ ನಿಭಾಯಿಸಬೇಕು.

ಕುಂಭ
ಪ್ರತಿಯೊಂದು ವಿಚಾರದಲ್ಲೂ ಇಂದು ನಿಮಗೆ ಪೂರಕ ಫಲಿತಾಂಶ ಒದಗುವುದು. ಈ ದಿನವನ್ನು ಹೆಚ್ಚು ಸದುಪಯೋಗಪಡಿಸಿ.

ಮೀನ
ವೈಯಕ್ತಿಕ ಬದುಕಿನಲ್ಲಿ  ಹರ್ಷದ ಬೆಳವಣಿಗೆ. ಬಂಧುಮಿತ್ರರ ಜತೆಗೂಡಿ ದಿನ ಕಳೆಯುವ ಅವಕಾಶ. ದಿನದಂತ್ಯಕ್ಕೇ ಏನೋ ಸಾಧಿಸಿದ ತೃಪ್ತಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!