January17, 2026
Saturday, January 17, 2026
spot_img

ದಿನಭವಿಷ್ಯ: ಇಂದು ಈ ರಾಶಿಯವರಿಗೆ ಪ್ರೀತಿಯ ವಿಚಾರದಲ್ಲಿ ಯಶ

ಮೇಷ
ಆರ್ಥಿಕ ಸ್ಥಿರತೆ.  ಸಂಗಾತಿ ಜತೆಗೆ ಉತ್ತಮ ಹೊಂದಾಣಿಕೆ. ಕರ್ತವ್ಯ ನಿಭಾವಣೆಯಲ್ಲಿ ಮೆಚ್ಚುಗೆ ಗಳಿಸುವಿರಿ. ಟೀಕಾಕಾರರು ಮೌನವಾಗುವರು.  
ವೃಷಭ
ಖಾಸಗಿ ಬದುಕಲ್ಲಿ ಪೂರಕ ಬೆಳವಣಿಗೆ. ಪ್ರೀತಿಯ ವಿಚಾರದಲ್ಲಿ ಯಶ. ಸ್ವಂತ ಉದ್ಯೋಗ ಹೊಂದಿದವರಿಗೆ ಲಾಭ ಅಧಿಕ, ವಿಘ್ನ ನಿವಾರಣೆ.
ಮಿಥುನ
ಕೆಲ ವಿಚಾರಗಳಿಂದ ಮಾನಸಿಕ ಒತ್ತಡ. ಇನ್ನಿತರ ವಿಷಯದ ಬಗ್ಗೆ ಗಮನ ಹರಿಯದು. ಶಾಂತಚಿತ್ತರಾಗಿ ಯೋಚಿಸಿ ಕಾರ್ಯ ಎಸಗಿ.  
ಕಟಕ
ಸಂಬಂಧದಲ್ಲಿ ಅಪಸ್ವರ. ಆಪ್ತರ ಜತೆಗಿನ ವರ್ತನೆಯಲ್ಲಿ ಅದು ಪ್ರತಿಫಲಿಸಲಿದೆ.  ಅದೃಷ್ಟ ನಂಬಿ ಕೂರಬೇಡಿ. ನಿಮ್ಮ ಪ್ರಯತ್ನ ಅವಶ್ಯ.
ಸಿಂಹ
ನಿಮ್ಮ ಸುತ್ತಲಿನ ವ್ಯಕ್ತಿಗಳ ಜತೆ ಸಂಬಂಧ ಸುಧಾರಣೆ. ಮನಸ್ತಾಪ ಅಂತ್ಯ.  ಹಣಕಾಸು ಪರಿಸ್ಥಿತಿ ಸ್ಥಿರ. ಆರೋಗ್ಯ ಸಮಸ್ಯೆ ನಿವಾರಣೆ.
ಕನ್ಯಾ
ಸಂಗಾತಿ ಜತೆಗೆ ಸಂಘರ್ಷ ಸಂಭವ. ಒಬ್ಬರಾದರೂ ಬಿಗುಮಾನ ಬಿಟ್ಟು ವರ್ತಿಸಬೇಕು. ನಿಮ್ಮ ಮೂಗಿನ ನೇರಕ್ಕೆ ಚಿಂತಿಸದಿರಿ.
ತುಲಾ
ಆರ್ಥಿಕ ವ್ಯವಹಾರ  ತೃಪ್ತಿಕರ.  ಕುಟುಂಬ ಸದಸ್ಯರ ಜತೆ ಅನ್ಯೋನ್ಯತೆ. ಹೊಣೆ ಹೆಚ್ಚಿದರೂ ಅದನ್ನು ನಿಭಾಯಿಸುವಲ್ಲೇ  ಸಂತೃಪ್ತಿ ಕಾಣುವಿರಿ.
ವೃಶ್ಚಿಕ
ಕುಟುಂಬಸ್ಥರ ಜತೆ ವ್ಯವಹಾರದಲ್ಲಿ ಪ್ರಾಮಾಣಿಕತೆ ಇರಲಿ. ಮುಚ್ಚುಮರೆ ಮಾಡಿದರೆ ಪ್ರತಿಕೂಲ ಪರಿಣಾಮ ಎದುರಿಸುವಿರಿ.          
ಧನು
ಕುಟುಂಬ ಸದಸ್ಯರ ಅನಾರೋಗ್ಯದ ಚಿಂತೆ. ಆದರೆ ಕಳವಳ ಬೇಡ. ಶೀಘ್ರವೆ ಮಾನಸಿಕ ನೆಮ್ಮದಿ ದೊರಕುವ ಬೆಳವಣಿಗೆ.  ಬಂಧು ಸಹಕಾರ.  
ಮಕರ
ಪರಿಹಾರವಾಗದೆ ಉಳಿದಿದ್ದ ಬಿಕ್ಕಟ್ಟು ಇಂದು ಅಂತ್ಯ ಕಂಡೀತು. ಆದರೆ ನೀವೂ ಸ್ವಲ್ಪ ಮಟ್ಟಿನ ಹಾನಿ ಅನುಭವಿಸುವಿರಿ. ಹೊಂದಾಣಿಕೆ ಒಳಿತು.    
ಕುಂಭ
ಆರ್ಥಿಕ ಪರಿಸ್ಥಿತಿ ಉನ್ನತಿ ಕಾಣುವುದು. ಉದ್ಯೋಗದಲ್ಲಿ ಹೊಸ ಅವಕಾಶ ತೆರೆಯಲಿದೆ. ಇತರರ ಸಂತೋಷದಲ್ಲಿ ತೃಪ್ತಿ ಕಾಣುವಿರಿ.  
ಮೀನ
ಉತ್ಸಾಹದ ದಿನ. ವಾಗ್ವಾದದಲ್ಲಿ ತೊಡಗಿ ದಿನ ಕೆಡಿಸಿಕೊಳ್ಳದಿರಿ. ಮೋಜು ಮಾಡಲು ಹೋಗಿ ಹಣ ಕಳಕೊಂಡೀರಿ, ಎಚ್ಚರಿಕೆ. ಖರ್ಚಿಗೆ ಕಡಿವಾಣವಿರಲಿ.

Must Read

error: Content is protected !!