Saturday, December 9, 2023

Latest Posts

ದಿನಭವಿಷ್ಯ: ಇದ್ದುದಷ್ಟೆ ಸಾಕು ಎಂಬ ಧೋರಣೆ ಬಿಟ್ಟುಬಿಡಿ, ಹೆಚ್ಚಿನದ್ದನ್ನು ಸಾಧಿಸಲು ಗಮನ ಕೊಡಿ.

ಮೇಷ
ವೃತ್ತಿಯ ನಿರ್ವಹಣೆ ಯಲ್ಲಿ ತೊಡಕು ಎದುರಿಸುವಿರಿ. ಯಾವುದೂ ಸುಸೂತ್ರವಾಗಿ ಸಾಗುವುದಿಲ್ಲ. ಇತರರ ಸಹಕಾರದ ಕೊರತೆ.

ವೃಷಭ
ಭವಿಷ್ಯದ ಕುರಿತಂತೆ ಸಾಕಷ್ಟು ಯೋಚಿಸುವಿರಿ.  ಆದರೆ ‘ಇಂದಿನ ದಿನ’ ಮರೆಯದಿರಿ. ವರ್ತಮಾನಕ್ಕೂ ಮಹತ್ವ ಕೊಡಿರಿ.

ಮಿಥುನ
ಇತರರ ಆದೇಶ ಪಾಲಿಸುವುದಷ್ಟೇ ಅಲ್ಲ, ನೀವೂ ಸೂಕ್ತ ಪ್ರತಿಕ್ರಿಯೆ ನೀಡಲು ಕಲಿಯಬೇಕು.  ಇಲ್ಲವಾದರೆ ಎಲ್ಲರೂ ನಿಮ್ಮನ್ನು ಬಗ್ಗಿಸಲು ಯತ್ನಿಸುವರು.

ಕಟಕ
ಪ್ರೀತಿಪಾತ್ರರ ಸಂಗದಲ್ಲಿ ಮುಕ್ತವಾಗಿ ವ್ಯವಹರಿಸಿ. ನಿಮ್ಮ ಭಾವನೆ ಮತ್ತು ಕಷ್ಟ ಅಡಗಿಸಿಡಬೇಡಿ. ಮುಕ್ತ ಮಾತಿನಿಂದ ಕೆಲವೊಮ್ಮೆ ಸಮಸ್ಯೆಗೆ ಪರಿಹಾರ ದೊರಕುವುದು.

ಸಿಂಹ
ವೃತ್ತಿಯಲ್ಲಿ ಸಂಕಷ್ಟ. ಮೇಲಧಿಕಾರಿಗಳ ಮುಂದೆ ನಿಮ್ಮ ಅಭಿಪ್ರಾಯ ಹೇಳಲು ಹಿಂಜರಿಕೆ ಬೇಡ. ಹಣದ ವಿಚಾರದಲ್ಲಿ ಸೂಕ್ತ ಯೋಜನೆ ಬೇಕು.

ಕನ್ಯಾ
ಪ್ರೀತಿಯ ವಿಚಾರದಲ್ಲಿ ಸಮಸ್ಯೆ ಉಂಟಾದೀತು. ಪ್ರೀತಿಪಾತ್ರರ ನಿಷ್ಠೆಯನ್ನು ಶಂಕಿಸಲು ಹೋಗದಿರಿ. ಭಾವನೆ ಅರ್ಥ ಮಾಡಿಕೊಂಡು ವ್ಯವಹರಿಸಿರಿ.

ತುಲಾ
ಯಾವುದನ್ನೂ ಅತಿಯಾಗಿ ಮಾಡುವುದು ಸಮಸ್ಯೆ ತಂದೀತು. ಎಲ್ಲವನ್ನೂ ಮಿತಿಯಲ್ಲೆ ಮಾಡಿರಿ. ವ್ಯಕ್ತಿಯೊಬ್ಬರ ವರ್ತನೆಯಿಂದ ಬೇಸರ.

ವೃಶ್ಚಿಕ
ಇದ್ದುದಷ್ಟೆ ಸಾಕು ಎಂಬ ಧೋರಣೆ ಬಿಟ್ಟುಬಿಡಿ. ಹೆಚ್ಚಿನದ್ದನ್ನು ಸಾಧಿಸಲು ಗಮನ ಕೊಡಿ. ಏಕೆಂದರೆ ನಿಮ್ಮ ಸಾಮರ್ಥ್ಯ ಇನ್ನೂ ಹೆಚ್ಚಿನದ್ದಿದೆ. ಅದನ್ನು ವ್ಯರ್ಥ ಮಾಡಬೇಡಿ.

ಧನು
ಕುಟುಂಬದಲ್ಲಿ ವಾದವಿವಾದಕ್ಕೆ ಆಸ್ಪದ ಕೊಡದಿರಿ. ಅದು ನಿಯಂತ್ರಣ ತಪ್ಪೀತು. ದುಡುಕಿನ ವರ್ತನೆ ಕೆಲಸ ಕೆಡಿಸೀತು. ಸಂಯಮ ಅತಿ ಮುಖ್ಯ.

ಮಕರ
ಎಲ್ಲರ ಬೇಕುಬೇಡಗಳಿಗೆ ಸ್ಪಂದಿಸುವ ನಿಮ್ಮ ಮನೋಭಾವ ಮೆಚ್ಚುಗೆ ಗಳಿಸುವುದು. ಆರ್ಥಿಕ ಉನ್ನತಿ. ಪ್ರಮುಖ ಬೇಡಿಕೆಯೊಂದು ಈಡೇರುವುದು.

ಕುಂಭ
ಇತರರು ನಿಮ್ಮ ಮಾತು ಕೇಳಬೇಕೆಂದು ಬಯಸುವಿರಿ. ಆದರೆ ನಿಮ್ಮ ಮಾತಿಗೆ ಕೆಲವರಿಂದ ಬೆಲೆ ಸಿಗಲಾರದು. ಅದಕ್ಕಾಗಿ ಬೇಸರಿಸಬೇಡಿ.

ಮೀನ
ಹೆಚ್ಚಿನ ಹಣ ಗಳಿಕೆಗಾಗಿ ಉತ್ತಮ ಯೋಜನೆ ಹಾಕಿರಿ. ಆತುರದ ತೀರ್ಮಾನ ಹಾನಿ ತಂದೀತು. ಬಂಧುಗಳಿಂದ ಸಹಕಾರ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!