ಮೇಷ
ಮುಂಜಾನೆ ಕೆಲಸದ ಒತ್ತಡ. ಅಪರಾಹ್ನ ಶುಭ ಸುದ್ದಿ, ನಿರಾಳತೆ. ಪ್ರೀತಿಯಲ್ಲಿ ಭಾವನಾತ್ಮಕ ಏರುಪೇರು. ಆರ್ಥಿಕ ಲಾಭ ದೊರೆಯಲಿದೆ.
ವೃಷಭ
ನಿಮ್ಮ ಕಾರ್ಯಶೈಲಿ ಇತರರಿಗೆ ಮಾದರಿ. ಆದರೂ ವೃತ್ತಿಕ್ಷೇತ್ರದಲ್ಲಿ ಪ್ರತಿಕೂಲ ಪರಿಸ್ಥಿತಿ. ತಪ್ಪಿಗೆ ಎಡೆಮಾಡಿಕೊಡಬೇಡಿ.ಎಚ್ಚರದಿಂದಿರಿ.
ಮಿಥುನ
ಹೊಸ ವ್ಯವಹಾರಕ್ಕೆ ಕೈಹಾಕಲು ಯೋಜಿಸಿದ್ದರೆ ಅನುಕೂಲ ಪರಿಸ್ಥಿತಿ. ಯುವಕರಿಗೆ ಸ್ನೇಹವು ಪ್ರೀತಿಯಾಗಿ ಮಾರ್ಪಡಬಹುದು.
ಕಟಕ
ಸಂವಹನ ಕೊರತೆ, ಬಾಂಧವ್ಯದಲ್ಲಿ ಬಿಕ್ಕಟ್ಟು. ಕಾರ್ಯ ವಿಳಂಬ. ತಪ್ಪಿನಿಂದ ಪಾಠ ಕಲಿಯಿರಿ, ಅದನ್ನೆ ಪುನರಾವರ್ತನೆ ಮಾಡಬೇಡಿ.
ಸಿಂಹ
ಅನುಚಿತ ಮಾತಿನಿಂದ ಬಿಕ್ಕಟ್ಟಿಗೆ ಸಿಲುಕುವಿರಿ. ನಿಯಂತ್ರಣ ಇರಲಿ. ವೃತ್ತಿಯಲ್ಲಿ ಪ್ರತಿಕೂಲ ಪರಿಸ್ಥಿತಿ. ಒತ್ತಡ, ಹೊಣೆ ಅಽಕ.
ಕನ್ಯಾ
ಮಾನಸಿಕವಾಗಿ ಬಳಲುವಿರಿ. ಇದು ದೇಹದ ಮೇಲೂ ಪರಿಣಾಮ ಬೀರಲಿದೆ. ನಿಮ್ಮ ಸುತ್ತ ನಯವಂಚಕರಿದ್ದಾರೆ, ಅವರ ಬಲೆಗೆ ಸಿಲುಕದಿರಿ.
ತುಲಾ
ಸ್ಪರ್ಧಾತ್ಮಕ ವಾತಾವರಣದಲ್ಲಿ ಚಡಪಡಿಸುವಿರಿ. ಸವಾಲಿಗೆ ಮುದುಡದಿರಿ. ಸೂಕ್ತ ಸಹಕಾರ, ನೆರವು ನಿಮಗೆ ಸಿಕ್ಕಿಯೇ ಸಿಗುವುದು.
ವೃಶ್ಚಿಕ
ಎಂದಿನಂತಿಲ್ಲ ಇಂದು. ಕೆಲಸದಲ್ಲಿ ಮನಸ್ಸು ನಿಲ್ಲದು. ಏನೇನೋ ಚಿಂತೆಗಳು. ಮೋಸ ಮಾಡುವ ವ್ಯಕ್ತಿಗಳ ಬಗ್ಗೆ ಎಚ್ಚರವಿರಲಿ.
ಧನು
ನಿಮ್ಮ ಕಾರ್ಯಶೈಲಿ ಬದಲಿಸಬೇಕು. ಇಲ್ಲವಾದರೆ ಪ್ರಗತಿ ಕುಂಠಿತ. ಆತ್ಮೀಯರೆ ನಿಮ್ಮ ವಿರುದ್ಧ ತಿರುಗಿ ಬಿದ್ದಾರು. ದೃಢ ಮನಸ್ಕರಾಗಿರಿ.
ಮಕರ
ವೃತ್ತಿಯಲ್ಲಿ ಏಕಾಗ್ರತೆ ಮೂಡದು. ನಿಮಗೆ ಬಂದಿರುವ ಹೊಸ ಸಮಸ್ಯೆ ಅದಕ್ಕೆ ಕಾರಣ. ಸ್ವಲ್ಪ ಸಮಯ ಕಾದು ನೋಡಿ, ಈಗಲೇ ಪ್ರತಿಕ್ರಿಯಿಸಬೇಡಿ.
ಕುಂಭ
ವೃತ್ತಿಯಲ್ಲಿ ನಿಮ್ಮ ಕಾರ್ಯಕ್ಕೆ ಶ್ಲಾಘನೆ. ಕಠಿಣ ಕಾರ್ಯವೂ ನಿಮ್ಮಿಂದ ಸುಲಭವಾಗಲಿದೆ. ಮನೆಯಲ್ಲೂ ಹರ್ಷದ ವಾತಾವರಣ.
ಮೀನ
ಆರೋಗ್ಯ ಸಮಸ್ಯೆ, ಮನಸ್ಸಿಗೆ ಉದಾಸ ಭಾವ. ಆಹಾರದಲ್ಲಿ ಎಚ್ಚರ ವಹಿಸಿ. ಅಜೀರ್ಣ ಸಮಸ್ಯೆ ಬಾಽಸಬಹುದು. ವೃತ್ತಿಯಲ್ಲಿ ಒತ್ತಡ ಹೆಚ್ಚು.
ದಿನಭವಿಷ್ಯ: ವೃತ್ತಿಯಲ್ಲಿ ನಿಮ್ಮ ಕಾರ್ಯಕ್ಕೆ ಶ್ಲಾಘನೆ, ಕಠಿಣ ಕೆಲಸವೂ ನಿಮಗೆ ಸುಲಭ

