Sunday, June 4, 2023

Latest Posts

ದಿನಭವಿಷ್ಯ: ಕೆಲಸ ಮತ್ತು ಕುಟುಂಬದ ಮಧ್ಯೆ ಸಮನ್ವಯ ಸಾಧಿಸಿ, ಯಾವುದನ್ನೂ ಕಡೆಗಣಿಸಬೇಡಿ

ಮೇಷ
ಕೌಟುಂಬಿಕ ಸೌಹಾರ್ದ. ಆರ್ಥಿಕವಾಗಿ ಉತ್ತಮ ಸ್ಥಿತಿ. ವೃತ್ತಿಯಲ್ಲಿ ಮನ್ನಣೆ ಪಡೆಯುವ ಸಾಧನೆ. ಬಂಧುಗಳಿಂದ ಸಂತೋಷ, ಶುಭ ಸುದ್ದಿ.

ವೃಷಭ
ಇಂದು ಅದೃಷ್ಟವು ನಿಮಗೆ ಪೂರಕವಾಗಿದೆ. ಧನಲಾಭ. ಪ್ರೀತಿಯಲ್ಲಿ ಯಶಸ್ಸು. ನಿಮ್ಮ ಕಾರ್ಯಕ್ಷೇತ್ರದಲ್ಲಿ ಎಲ್ಲವೂ ಸುಗಮವಾಗಿ ಸಾಗುವುದು.

ಮಿಥುನ
ಕೆಲಸ ಮತ್ತು ಕುಟುಂಬದ ಮಧ್ಯೆ ಸಮನ್ವಯ ಸಾಧಿಸಿ. ಯಾವುದನ್ನೂ ಕಡೆಗಣಿಸಬೇಡಿ. ಇತರರ ಜತೆ ಕಠಿಣವಾಗಿ ವ್ಯವಹರಿಸಬೇಡಿ. ಮಾತು ಮೃದುವಾಗಿರಲಿ.

ಕಟಕ
ಆರ್ಥಿಕವಾಗಿ ಪೂರಕ ದಿನ. ಧನ ಲಾಭ.  ಹಣ ಗಳಿಕೆಯ ಹೊಸ ಹಾದಿ ತೋರಿಬರುವುದು. ಉದ್ಯೋಗಿಗಳಿಗೆ ವರಮಾನ ಹೆಚ್ಚಳದ  ಸಂಕೇತ ದೊರಕುವುದು.

ಸಿಂಹ
ಕೌಟುಂಬಿಕ ಪರಿಸರ ಸೌಹಾರ್ದಯುತ. ಉತ್ತಮ ಸಹಕಾರ. ಉದ್ದೇಶಿಸಿದ ಕಾರ್ಯ ಸಫಲ. ಕುಟುಂಬದ ಹಿರಿಯರ ಆರೋಗ್ಯಕ್ಕೆ ಗಮನ ಕೊಡಿ.

ಕನ್ಯಾ
ಸಂಗಾತಿ ಜತೆಗಿನ ವಿವಾದದಲ್ಲಿ ಶಾಂತ ಮನಸ್ಸಿನಿಂದ ವರ್ತಿಸಿ. ಅದರಿಂದ ಬಿಕ್ಕಟ್ಟು ಶಮನ. ವೃತ್ತಿಯಲ್ಲಿ ಒತ್ತಡ ಅಧಿಕ. ಹೊಣೆಗಾರಿಕೆ ಹೆಚ್ಚು.

ತುಲಾ
ವೃತ್ತಿಯಲ್ಲಿ ಅವಕಾಶವೂ ಹೆಚ್ಚು, ಅಡ್ಡಿಗಳೂ ಹೆಚ್ಚು. ಹೊಂದಾಣಿಕೆ ಮಾಡಿಕೊಂಡು ನಡೆದರೆ ಯಶಸ್ಸು ಗಳಿಸುವಿರಿ. ವಾಗ್ವಾದಕ್ಕೆ ಇಳಿಯಬೇಡಿ.

ವೃಶ್ಚಿಕ
ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಬಯಸುವಿರಿ. ಪೂರಕ ಸ್ಪಂದನೆ ದೊರಕುವುದು. ಆರ್ಥಿಕ ಅಡಚಣೆ ಉಂಟಾದರೂ ಸೂಕ್ತ ನೆರವು ಒದಗುವುದು.

ಧನು
ಭಾವನಾತ್ಮಕ ಏರು ಪೇರು. ಆಪ್ತರೊಂದಿಗೆ ಮುನಿಸು. ಸಾಂತ್ವನದ ಮಾತುಗಳು ಸಮಾ ಧಾನ ತರಬಹುದು. ಆರ್ಥಿಕ ವಾಗಿಯೂ ಒತ್ತಡ.

ಮಕರ
ಬಂಧುಗಳಿಂದ ಶುಭಸುದ್ದಿ. ಕೌಟುಂಬಿಕ ಸಮಾರಂಭ ಏರ್ಪಡಬಹುದು. ಕಾನೂನು ಖಟ್ಲೆ ಯೊಂದು ಇತ್ಯರ್ಥ ಗೊಳ್ಳುವುದು.

ಕುಂಭ
ಕುಟುಂಬ ಸದಸ್ಯರು ನಿಮ್ಮಿಂದ ಬಹಳಷ್ಟನ್ನು ನಿರೀಕ್ಷಿಸುತ್ತಾರೆ. ಅವರ ನಿರೀಕ್ಷೆ ಹುಸಿಗೊಳಿಸಬೇಡಿ. ಅವರ ಭಾವನೆಗೆ ಸ್ಪಂದಿಸಿರಿ.

ಮೀನ
ಖಾಸಗಿ ಬದುಕಿನಲ್ಲಿ ಒತ್ತಡ. ಕೆಲವರ ನಡೆ
ನುಡಿ ನಿಮ್ಮ ಮನಸ್ಸು ಕದಡ ಬಹುದು. ಅವ ರೊಡನೆ ಸಂಘರ್ಷಕ್ಕೆ ಇಳಿಯ ಬೇಡಿ, ಹೊಂದಾಣಿಕೆ ಮುಖ್ಯ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!