ಮೇಷ
ಮೇಲಧಿಕಾರಿಯ ಅವಕೃಪೆ ಎದುರಿಸುವಿರಿ. ಆದರೆ ಮನೆಯಲ್ಲಿ ಎಲ್ಲರ ಬೆಂಬಲ, ಸಹಕಾರ. ಕಲಾವಿದರಿಗೆ ಉತ್ತಮ ಅವಕಾಶ ದೊರಕಲಿದೆ.
ವೃಷಭ
ನಿಮ್ಮ ಸುತ್ತ ಕೋಲಾಹಲದ ಸನ್ನಿವೇಶ ನಿರ್ಮಾಣವಾದೀತು. ನೀವು ಅದರಲ್ಲಿ ಸಿಲುಕದಿರಿ. ಒಳ್ಳೆ ದಿನ ಮುಂದೆ ಕಾದಿದೆ. ಮಿಥುನ
ನಿಮ್ಮ ಸಾಮರ್ಥ್ಯ ಶಂಕಿಸಿದವರಿಗೆ ಸೂಕ್ತ ಉತ್ತರ ನೀಡಿ. ಪ್ರೀತಿಯ ಭಾವ ನಿಮ್ಮ ಕೆಲಸದ ಏಕಾಗ್ರತೆಗೆ ಭಂಗ ತರಬಹುದು.
ಕಟಕ
ಕೆಲ ವಿಚಾರಗಳು ಅಸಹನೆ ಸೃಷ್ಟಿಸುತ್ತವೆ. ಮಾನಸಿಕ ಅಶಾಂತಿ. ಆರ್ಥಿಕವಾಗಿ ಅಭದ್ರತೆಯ ಭಾವನೆ. ಒಟ್ಟಿನಲ್ಲಿ ನಿಮಗೆ ಪೂರಕ ದಿನವಲ್ಲ.
ಸಿಂಹ
ಹೊಸ ಕ್ಷೇತ್ರಕ್ಕೆ ಕೈ ಹಾಕುವುದಕ್ಕಿಂತ ಅರಿತ ಕ್ಷೇತ್ರದಲ್ಲಿ ಈಜುವುದೇ ಒಳಿತು. ನಿಮ್ಮ ಲೋಪ ಮೊದಲಿಗೆ ತಿದ್ದಿಕೊಳ್ಳಿ. ಬಳಿಕ ಹೆಜ್ಜೆಯಿಡಿ.
ಕನ್ಯಾ
ನೀವಿಂದು ಸಮಸ್ಯೆ ಎದುರಿಸುವಿರಿ. ಕೌಶಲದಿಂದ ಪರಿಹರಿಸಿ. ಆತುರದ ಕ್ರಮ ಬೇಡ. ನಿಮ್ಮಿಂದ ತಪ್ಪಾಗಿದ್ದರೆ ಕೂಡಲೇ ತಿದ್ದಿಕೊಳ್ಳಿ. ಧನಪ್ರಾಪ್ತಿ
ತುಲಾ
ಆಪ್ತರ ಜತೆ ಸಂಬಂಧ ಕೆಡಬಹುದು. ಮೊದಲಿಗೆ ವೈಯಕ್ತಿಕ ವ್ಯವಹಾರ ಇತ್ಯರ್ಥ ಪಡಿಸಿ. ಬಳಿಕ ಇತರರ ಸಮಸ್ಯೆಗೆ ಗಮನ ಕೊಡಿ. ಆರ್ಥಿಕ ಸ್ಥಿರತೆ.
ವೃಶ್ಚಿಕ
ಭಾವುಕ ಸನ್ನಿವೇಶ ಎದುರಿಸುವಿರಿ. ವಿವೇಕ ಕಳಕೊಳ್ಳಬೇಡಿ. ಯುಕ್ತವಾಗಿ ಚಿಂತಿಸಿ ನಿರ್ಧಾರ ತಾಳಿರಿ. ಆರ್ಥಿಕ ಒತ್ತಡ ಹೆಚ್ಚಲಿದೆ.
ಧನು
ಖಾಸಗಿ ವ್ಯವಹಾರಕ್ಕೆ ಹೆಚ್ಚು ಗಮನ ಕೊಡುವಿರಿ. ಅವಸರಕ್ಕೆ ಅವಕಾಶ ಕೊಡದೆ ಎಲ್ಲವನ್ನೂ ನಿಧಾನಗತಿಯಿಂದ ಮಾಡಿ. ಮಿತ್ರರ ಅಸಹಕಾರ.
ಮಕರ
ನಿಮ್ಮ ಬಯಕೆ ಹತೋಟಿಯಲ್ಲಿಡಿ. ಅವಶ್ಯ ಕಾರ್ಯಕ್ಕೆ ಗಮನ ಕೊಡಿ. ಮಹತ್ವಾಕಾಂಕ್ಷೆಯು ಪ್ರತಿಕೂಲ ಪರಿಸ್ಥಿತಿ ಉಂಟು ಮಾಡಬಹುದು.
ಕುಂಭ
ಹಣ ನೀರಿನಂತೆ ಖರ್ಚಾದೀತು. ಆದರೆ ನಿಮಗೆ ಬೇಕಾದುದನ್ನು ಪಡೆಯುವಲ್ಲಿ ನಿಮ್ಮನ್ನು ಯಾರೂ ತಡೆಯಲಾರರು. ತೃಪ್ತಿಕರ ದಿನ.
ಮೀನ
ಅಭದ್ರತೆಯ ಭಾವನೆ. ಎಲ್ಲವನ್ನು ನೀವೇ ನಿಯಂತ್ರಿಸಲು ಯತ್ನಿಸದಿರಿ. ನಿಮ್ಮ ಹಿಡಿತಕ್ಕೆ ಮೀರಿದ ವಿಷಯ ಹಾಗೇ ಬಿಟ್ಟುಬಿಡಿ.
ದಿನಭವಿಷ್ಯ: ಈ ರಾಶಿಯವರಿಗೆ ಇಂದು ಧನಪ್ರಾಪ್ತಿ, ಹಳೆಯ ಸಮಸ್ಯೆ ಇತ್ಯರ್ಥ

