ದಿನಭವಿಷ್ಯ : ಇಂದು ನಿಮಗೆ ಹರ್ಷ ತರುವಂತಹ ಬೆಳವಣಿಗೆ ಸಂಭವಿಸುವುದು..

ಮೇಷ
ಮನಸ್ಸಿನ ನೆಮ್ಮದಿ ಕೆಡಿಸುವ ಕೆಲವು ಚಿಂತನೆಗಳನ್ನು ಬಿಟ್ಟುಬಿಡಿ. ನೀವು ತಿಳಕೊಂಡಷ್ಟು ಪರಿಸ್ಥಿತಿ ಪ್ರತಿಕೂಲವಾಗಿಲ್ಲ. ಆಶಾವಾದವಿರಲಿ.

ವೃಷಭ
ನಿಮ್ಮ ನಿರೀಕ್ಷೆ ಮಿತಿ ಯಲ್ಲಿರಲಿ. ಅತಿಯಾದ ನಿರೀಕ್ಷೆ ನಿರಾಶೆಗೆ ಕಾರಣವಾದೀತು. ಆತ್ಮೀಯರು ಮುಖ್ಯ ವಿಷಯದಲ್ಲಿ ಕೈ ಕೊಟ್ಟಾರು.

ಮಿಥುನ
ವೃತ್ತಿಯಲ್ಲಿ ಉನ್ನತ ಸಾಧನೆ. ಇತರರ ಅವಲಂಬನೆ ಬಿಟ್ಟು ಆತ್ಮ ನಿರ್ಭರತೆ ಸಾಧಿಸುವಿರಿ. ಕೌಟುಂಬಿಕವಾಗಿ ಸಾಮರಸ್ಯ ಮತ್ತು ಸಹಕಾರ.

ಕಟಕ
ಹಿತೈಷಿಗಳ ಸಲಹೆಗೆ ಕಿವಿ ಕೊಡಿ.ಅದರಿಂದ ನಿಮಗೆ ಒಳಿತಾದೀತು. ಹಣದ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳಬೇಡಿ. ಎಚ್ಚರಿಕೆಯಿರಲಿ.

ಸಿಂಹ
ಉದ್ಯಮದಲ್ಲಿ ಯಶಸ್ಸು. ಹಣದ ವಿಷಯದಲ್ಲಿ ತೃಪ್ತಿಕರ ಬೆಳವಣಿಗೆ. ದುಬಾರಿ ವಸ್ತು ಖರೀದಿಗೆ ತುಡಿತ ಉಂಟಾದೀತು. ಆರೋಗ್ಯ ಸ್ಥಿರ.

ಕನ್ಯಾ
ನಿಮಗೆ ಹರ್ಷ ತರುವಂತಹ ಬೆಳವಣಿಗೆ ಸಂಭವಿಸುವುದು.ಮುಖ್ಯವಾಗಿ ಆರ್ಥಿಕ ವಿಚಾರದಲ್ಲಿ ಪೂರಕ ಬೆಳವಣಿಗೆ.ಶಾಂತಿ, ನೆಮ್ಮದಿ.

ತುಲಾ
ಮಿಶ್ರ ಫಲದ ದಿನ. ಕೆಲ ವಿಷಯಗಳು ಮಾನಸಿಕ ತುಮುಲ ಸೃಷ್ಟಿಸುತ್ತವೆ. ಭವಿಷ್ಯದ ಬಗ್ಗೆ ಆತಂಕ. ಕೌಟುಂಬಿಕ ಪರಿಸರದಲ್ಲಿ ನೆಮ್ಮದಿ, ಸಂತೋಷ.

ವೃಶ್ಚಿಕ
ಇಂದು ದಿನದ ಬಹು ಕಾಲ ಮನೆಯಲ್ಲೇ ಕುಳಿತು ಕಳೆಯುವ ಅವಕಾಶ. ಭವಿಷ್ಯಕ್ಕೆ ಯೋಜನೆ ರೂಪಿಸಲು ಸಮಯ ಕೂಡಿ ಬಂದಿದೆ ಉಪಯೋಗಿಸಿ.

ಧನು
ಕುಟುಂಬಕ್ಕೆ ಸಂಬಂಧಿಸಿದ ನಿರ್ಧಾರವನ್ನು ಸಮಾಲೋಚಿಸಿ ತೆಗೆದುಕೊಳ್ಳಿ. ಇದರಿಂದ ಭಿನ್ನಾಭಿಪ್ರಾಯ  ನಿವಾರಣೆ.

ಮಕರ
ಕಠಿಣ ಶ್ರಮ ಪಡುತ್ತೀರಿ. ಆದರೆ ನಿರೀಕ್ಷಿತ ಫಲ ದೊರಕದೆ ಹತಾಶೆ ಹೆಚ್ಚುವುದು. ಇತರರ ಮೇಲೆ ಅಸಹನೆ ಕಾರಲು ಹೋಗದಿರಿ.ಸಹನೆ ಇರಲಿ.

ಕುಂಭ
ಇಂದು ಯಶಸ್ವಿ ದಿನ. ದೈವಾನುಕೂಲವಿದೆ. ನಿಮ್ಮ ಮೆಚ್ಚಿನ ವಿಷಯದಲ್ಲಿ ಪ್ರಗತಿ ಸಾಧಿಸುವಿರಿ.ಆಪ್ತರಿಂದ ಪ್ರಯೋಜನ ಪಡೆಯುವಿರಿ.

ಮೀನ
ದಿನದ ಮೊದಲಾರ್ಧ ಗೊಂದಲ  ಗಡಿಬಿಡಿ. ಆದರೆ ಉತ್ತರಾರ್ಧದಲ್ಲಿ ಎಲ್ಲವೂ ಸರಿಸ್ಥಿತಿಗೆ ಬರುವುದು. ಶಾಂತಿ ನೆಲೆಸುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!