ಮೇಷ
ನಿಮ್ಮ ಕುರಿತಂತೆ ಕೆಲವರದು ತೋರಿಕೆಯ ಮೆಚ್ಚುಗೆ. ಅವರಿಗೆ ಲಾಭವಿಲ್ಲ ಎಂದಾಗ ನಿಮ್ಮನ್ನು ಟೀಕಿಸುವರು. ವಿವೇಕದಿಂದ ವ್ಯವಹರಿಸಿ.
ವೃಷಭ
ನಿಮಗೆ ಕಷ್ಟದಲ್ಲಿ ನೆರವಿಗೆ ಬಂದವರನ್ನು ಮರೆಯಬೇಡಿ. ಆರೋಗ್ಯ ಸಮಸ್ಯೆ ಸಂಭವ. ತೀರಾ ನಿರ್ಲಕ್ಷ್ಯ ಮಾಡಬೇಡಿ.
ಮಿಥುನ
ನಿಮ್ಮೆಡೆಗೆ ಆಸಕ್ತಿ ತೋರುವವರನ್ನು ಕಡೆಗಣಿಸಬೇಡಿ. ಬಾಂಧವ್ಯ ಬೆಳೆಸಿದರೆ ಒಳಿತು. ಹಣದ ಮುಗ್ಗಟ್ಟಿಗೆ ಇಂದು ಪರಿಹಾರ ದೊರಕಲಿದೆ.
ಕಟಕ
ಇಂದು ಅಶಾಂತ ಮನಸ್ಥಿತಿ. ಪ್ರತಿಕೂಲ ಪರಿಸ್ಥಿತಿ ಬಂದರೆ ಹದ ತಪ್ಪಿ ವರ್ತಿಸಬೇಡಿ. ಎಲ್ಲರನ್ನೂ ನಿಮ್ಮ ವಿರೋಽಗಳಂತೆ ಕಾಣಬೇಡಿ.
ಸಿಂಹ
ಉದ್ಯೋಗ ಬದಲಿಸಲು ಯೋಜಿಸಿದ್ದರೆ ಮುಂದುವರಿಯಿರಿ. ಕಾಲ ನಿಮಗೆ ಪೂರಕವಾಗಿದೆ. ಕುಟುಂಬಸ್ಥರ ವಿರೋಧ ಶಮನ. ಧನಪ್ರಾಪ್ತಿ.
ಕನ್ಯಾ
ಹಳೆಯ ನೋವು ಮರೆತುಬಿಡಲು ಯೋಜಿಸುವಿರಿ. ಹೊಸ ಬದುಕಿಗೆ ತುಡಿತ. ಚಿಂತೆ ಬೇಡ, ನಿಮ್ಮೆಣಿಕೆಯಂತೆ ಎಲ್ಲವೂ ಸಾಗುವುದು.
ತುಲಾ
ಕೌಟುಂಬಿಕ ಹೊಣೆಗಾರಿಕೆ ಹೆಚ್ಚಳ. ವ್ಯವಹಾರದಲ್ಲೂ ಒತ್ತಡ ಅಽಕ. ಎರಡನ್ನೂ ಸರಿಯಾಗಿ ನಿಭಾಯಿಸಲು ಸಮರ್ಥರಾಗುವಿರಿ.
ವೃಶ್ಚಿಕ
ಬದುಕಿನಲ್ಲಿ ಸ್ವಲ್ಪ ಶಿಸ್ತು ಅಳವಡಿಸಿ. ಬೇಕಾಬಿಟ್ಟಿ ಧೋರಣೆ ನಿಮಗೇ ಹಾನಿ ತರಬಲ್ಲುದು. ನಿಮ್ಮ ದೌರ್ಬಲ್ಯ ಸರಿಪಡಿಸಿ. ಧನು
ವೇಳಾಪಟ್ಟಿ ಹಾಕಿಕೊಂಡು ವ್ಯವಹರಿಸಿ. ವಿಳಂಬ ತಪ್ಪಿಸಿರಿ. ಯಾರದೋ ಮರ್ಜಿಗೆ ತಕ್ಕಂತೆ ಬಾಗಬೇಡಿ, ಸ್ವಂತಿಕೆಯಿರಲಿ.
ಮಕರ
ಬಾಕಿ ಉಳಿದ ಕಾರ್ಯ ಪೂರೈಸಲು ಆದ್ಯತೆ ಕೊಡಿ. ವಿಶ್ವಾಸದ ಕೊರತೆ ಕಾಡಲಿದೆ. ಎಲ್ಲವೂ ನಿಮಗೆ ವಿರುದ್ಧವಾಗಿದೆ ಎಂಬ ಭಾವ ಕಾಡಲಿದೆ.
ಕುಂಭ
ಏಕತಾನತೆಯಿಂದ ಹೊರಬಂದು ವ್ಯವಹರಿಸಿ. ಹೊಸತನಕ್ಕೆ ತೆರೆದುಕೊಳ್ಳಿ. ಆತ್ಮೀಯರ ಸಲಹೆ ಕಡೆಗಣಿಸಬೇಡಿ. ಆರ್ಥಿಕ ಕೊರತೆ ನೀಗಲಿದೆ.
ಮೀನ
ಹಳೆಯ ಪ್ರಸಂಗ ನಿಮ್ಮ ಈಗಿನ ಸಂತೋಷ ಕಸಿಯಬಹುದು. ಅಸಹನೆ ಉಂಟಾದೀತು. ದೃಢ ಮನಸ್ಸಿನಿಂದ ಅದನ್ನು ನಿಭಾಯಿಸಿಕೊಳ್ಳಿ.
ದಿನಭವಿಷ್ಯ: ಇಂದು ಹಳೆಯ ನೋವನ್ನು ಮರೆತುಬಿಡಲು ನಿರ್ಧರಿಸುವಿರಿ, ಹೊಸ ಜೀವನ ಆರಂಭ

