ಮೇಷ
ಸಮಯಕ್ಕೆ ತಕ್ಕಂತೆ ಸೂಕ್ತ ನಿರ್ಧಾರ ತಾಳಿ. ಹಳೆಯ ನಿರ್ಧಾರಕ್ಕೇ ಅಂಟಿಕೊಂಡು ಕೂರದಿರಿ. ಆಪ್ತರಿಂದ ಶುಭ ಸುದ್ದಿ ಕೇಳಿಬಂದೀತು.
ವೃಷಭ
ಎಲ್ಲರನ್ನ ಕುರುಡಾಗಿ ನಂಬದಿರಿ. ನಿಮ್ಮನ್ನು ವಂಚಿಸಲು ಯತ್ನ ನಡೆಯುತ್ತದೆ. ಪ್ರೀತಿಯ ಅಭಿವ್ಯಕ್ತಿ ಪ್ರತಿಕೂಲ ಫಲಿತಾಂಶ ತಂದೀತು.
ಮಿಥುನ
ನಿಮ್ಮ ಸಾಧನೆಯ ಶ್ರೇಯಸ್ಸು ಇತರರು ಕಸಿದುಕೊಂಡಾರು. ಎಚ್ಚರದಿಂದಿರಿ. ಕೌಟುಂಬಿಕ ಬಿಕ್ಕಟ್ಟು. ಅತಿರೇಕದ ಪ್ರತಿಕ್ರಿಯೆ ತೋರದಿರಿ.
ಕಟಕ
ಕೆಲವು ಬೆಳವಣಿಗೆ ನಿರಾಶೆ ತರುವುದು. ಬಂಧುವಿನ ಜತೆ ವಿರಸ. ಯಶಸ್ಸಿನ ದಾರಿಯಲ್ಲಿ ವಿಘ್ನ ತಲೆದೋರಲಿದೆ. ಸಂಯಮವಿರಲಿ.
ಸಿಂಹ
ಪ್ರಮುಖ ಕೆಲಸದ ಹೊಣೆ ಬೀಳಲಿದೆ. ಸರಿಯಾಗಿ ನಿಭಾಯಿಸಿ. ಹಳೆಯ ಸ್ನೇಹಿತರ ಭೇಟಿ. ಕೌಟುಂಬಿಕ ಸಮ್ಮಿಲನ. ಖರ್ಚು ನಿಯಂತ್ರಿಸಿ.
ಕನ್ಯಾ
ಇತರರ ಒಳ್ಳೆಯ ಕೆಲಸ ಶ್ಲಾಘಿಸಿರಿ. ನಿಮ್ಮ ವರ್ತನೆಯಿಂದ ಇತರರ ಮೆಚ್ಚುಗೆ ಗಳಿಸುವಿರಿ. ಕೌಟುಂಬಿಕ ಸಂತೋಷ. ಬಂಧುಗಳ ಭೇಟಿ.
ತುಲಾ
ಇತರರಿಗೆ ನೆರವು ನೀಡುವ ಕಾರ್ಯ ನಡೆಸುವಿರಿ. ಆರೋಗ್ಯದ ಬಗ್ಗೆ ಕಾಳಜಿ ಕೊಡಿ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಇಂದು ಫಲ ನೀಡದು.
ವೃಶ್ಚಿಕ
ಭಾವನೆಯ ಮೇಲೆ ನಿಯಂತ್ರಣವಿರಲಿ. ಸಣ್ಣ ವಿಷಯಕ್ಕೂ ರೇಗುವ ಸನ್ನಿವೇಶ ಉಂಟಾದೀತು. ಕೆಲವರಿಂದ ಟೀಕೆ ಎದುರಿಸುವಿರಿ.
ಧನು
ಸಂಗಾತಿಯ ವರ್ತನೆ ಅಸಮಾಧಾನ ಉಂಟು ಮಾಡಬಹುದು. ವಾಗ್ವಾದ ಸಂಭವ. ನಿಮ್ಮಿಂದ ತಾಳ್ಮೆಯ ನಡೆ ಅವಶ್ಯ. ಆರೋಗ್ಯ ಸುಸ್ಥಿರ.
ಮಕರ
ಅಸ್ಥಿರ, ಅಶಾಂತ ಮನಸ್ಥಿತಿ. ಕೆಲವು ಬೆಳವಣಿಗೆ ಅಸಹನೆ ಸೃಷ್ಟಿಸಲಿದೆ. ಇದರ ಮಧ್ಯೆಯೆ ಧನಪ್ರಾಪ್ತಿ, ಕಾರ್ಯೋಲ್ಲಾಸ. ಕುಂಭ
ಅಗತ್ಯಕ್ಕಿಂತ ಹೆಚ್ಚು ಹಣ ಖರ್ಚಾದರೆ ಚಿಂತೆ ಮಾಡದಿರಿ. ನಿಮ್ಮ ಹಿತೈಷಿಗಳ ಕುರಿತಂತೆ ವಿನಯವಿರಲಿ. ಪ್ರೀತಿಯಲ್ಲಿ ಯಶಸ್ಸು.
ಮೀನ
ಇತ್ತೀಚಿನ ಕೆಲವು ಬೆಳವಣಿಗೆಗಳ ಕಾರಣದಿಂದ ಧಾರ್ಮಿಕ ಭಾವನೆ ಹೆಚ್ಚಬಹುದು. ಕಷ್ಟ ಮರೆಯಲು ದೇವರ ಮೊರೆ ಹೋಗುವಿರಿ.
ದಿನಭವಿಷ್ಯ: ನಿಮ್ಮ ವರ್ತನೆಯಿಂದ ಇತರರ ಮೆಚ್ಚಿಗೆ ಪಡೆಯುವಿರಿ

